ಮೌನವೇ ರೂಢಿಯಾದರೆ…?!

 

“ಸಖೀ,
ನೀನು
ಎಲ್ಲಿಯತನಕ
ಮೌನಿಯಾಗಿರಲು
ಬಯಸುವೆಯೋ
ಅಲ್ಲಿಯತನಕ
ನಾನು ನಿನ್ನನ್ನು
ಮಾತನಾಡಿಸಲಾರೆ,

ಆದರೂ,
ನಿನ್ನ ಮೌನಕ್ಕೆ
ಕಾರಣವೇನೆಂದು
ಒಮ್ಮೆಯಾದರೂ
ಮೌನ ಮುರಿದು
ಹೇಳಿಬಿಡು ಬಾರೆ”

“ಗೆಳೆಯಾ,
ಈ ಮೌನ
ಕೋಪದಿಂದಲ್ಲ,
ಮಾತು
ಮನ ಕೆಡಿಸಿತು,
ಮೌನ
ಮನ ಗೆದ್ದಿತು,
ಅದ್ಯಾಕೋ
ಇಂದು
ಮೌನವೇ
ಮಾತಿಗಿಂತ
ಪರಿಶುದ್ಧವೆನಿಸಿತು”

“ಮಾತಿನಿಂದ
ಕೆಡುವುದಕ್ಕೆ
ಮನವೇನು
ಕರೆದು
ತೆರೆದಿಟ್ಟ
ಹಾಲಲ್ಲವಲ್ಲಾ?
ಮಾತುಗಳು
ಎಂತಿದ್ದರೇನು
ಶುದ್ಧವಾದ
ಮನವದು
ಕೆಡಬಾರದಲ್ಲಾ?

ಮೌನ
ಶುದ್ಧವೆಂಬ
ಮಾತು ಸುಳ್ಳಲ್ಲ,
ಆದರೂ
ಸಂವಾದವಿಲ್ಲದೇ
ಬರಿಯ ಮೌನ
ಅದೆಷ್ಟು ಪರಿಶುದ್ಧ
ಆಗಿದ್ದರೇನು?

ಅಲ್ಲದೇ,
ಈ ಮೌನ
ಹೀಗೆಯೇ
ನಮ್ಮಿಬ್ಬರಿಗೂ
ರೂಢಿಯಾಗಿ
ಬಿಟ್ಟರೆ
ನಿಜಹೇಳು
ನಾವು ಸಹಿಸ
ಬಲ್ಲೆವೇನು?!”
**********

 

6 Responses to ಮೌನವೇ ರೂಢಿಯಾದರೆ…?!

 1. parthasarathy ಹೇಳುತ್ತಾರೆ:

  ಮೌನವೇ ರೂಢಿಯಾದರೆ ? ಚಿಂತೆಯಿಲ್ಲ
  ಆದರೆ ಬರಿ ಮಾತೆ ರೂಡಿಯಾದರೆ ಬರಿ ಚಿಂತೆಯಲ್ಲ !

 2. ksraghavendranavada ಹೇಳುತ್ತಾರೆ:

  ಮೌನ ಒಮ್ಮೊಮ್ಮೆ ಹತ್ತಾರು ಭಾವನೆಗಳನ್ನು ವ್ಯಕ್ತಪಡಿಸಿದರೂ, ಇಬ್ಬರು ವ್ಯಕ್ತಿಗಳ ನಡುವೆ ಕೇವಲ ಮೌನ ಇಷ್ಟವಾಗದು..ಅದರಲ್ಲಿಯೂ ಸಖ-ಸಖಿಯರ ನಡುವೆ ದೀರ್ಘ ಮೌನವೆ೦ಬುದು ಬಹಳ ಬೇಗ ಭಾವನೆಗಳ ಬದಲಾವಣೆಗೆ ಅವಕಾಶ ಮಾಡಿಕೊಡುತ್ತದೆ! ಮಾತಿನ ನಡುವೆ ಮೌನ ಸಹ್ಯ!
  ಒಳ್ಳೆಯ ಕವನ..
  ನಮಸ್ಕಾರಗಳೊ೦ದಿಗೆ,
  ನಿಮ್ಮ ವ ನಾವಡ.

 3. Rakesh Joshi ಹೇಳುತ್ತಾರೆ:

  ಸೂಪರ್ ಹೆಗ್ಡೆಯವರೇ.. ತುಂಬಾ ಇಷ್ಟ ಆಯಿತು.. ಸಖಿ ಮುನಿಸಿಕೊಂಡಾಗ ಇದನ್ನ ಓದಿ ಹೇಳ್ತೀನಿ.. 🙂

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: