ಕಾದಿಹೆವು ನೋಡು, ಬಾಬಾ ಸಾಹೇಬ!

ಪ್ರತಿ ರಾಜಧಾನಿಯ
ಶಾಸನ ಭವನದ
ಮುಂದೆ ಕರಿಕೋಟು
ತೊಟ್ಟು, ಮಳೆ
ಬಿಸಿಲು ಚಳಿ ಗಾಳಿಗೆ
ಮೈಯೊಡ್ಡಿ ನಿಂತು
ನೀ ಕೈನೀಡಿ ತೋರುವ
ಅದ್ಯಾವುದೋ ದಾರಿಯತ್ತ,
ಅದ್ಯಾವುದೋ ದಾರಿಯಲ್ಲಿ
ಇಂದು ಎಲ್ಲೂ ಯಾರೂ
ಸಾಗುತ್ತಲೇ ಇಲ್ಲವಾದರೂ,
ನಿನ್ನ ಹೆಸರಿನಲ್ಲಿ ಪ್ರತಿ
ವರುಷದಲ್ಲೂ ಒಂದು
ದಿನದ ರಜೆಯನ್ನು
ಭರ್ಜರಿ ಮಜಾದಲ್ಲೇ
ಕಳೆಯುತ್ತಾರೆ ನೋಡು;

ನೀನು ಹುಟ್ಟಿ ಬೆಳೆದು,
ನಂತರ ತೊರೆದ ಜಾತಿಯ
ಬಾಂಧವರಿಗೆ ಏನು ಕಷ್ಟ
ಎದುರಾದಾಗಲೂ ಅದು
ನಿನಗಾದ ಅವಮಾನವೆಂದು
ಹೋರಾಡುತ್ತಾರೆ ನೋಡು;

ನೀನು ಶ್ರಮಪಟ್ಟು ತಯಾರಿಸಿ
ನಮಗೆ ನೀಡಿದ ಸಂವಿಧಾನಕ್ಕೆ
ಪ್ರತಿ ನಿಮಿಷವೂ ಅವಹೇಳನ
ಮಾಡುತ್ತಾ ಶಾಸನ ನಡೆಸುವ
ನಾಯಕರು ತಮ್ಮ ತಿಜೋರಿಯ
ತುಂಬಿಕೊಳ್ಳುವುದರಲ್ಲೇ ಸದಾ
ಮಗ್ನರಾಗಿ ಇರುತ್ತಾರೆ ನೋಡು;

ನೀನಾದರೋ ಪ್ರಬುದ್ಧನಾದೆ
ಬುದ್ಧನ ಅನುಯಾಯಿಯಾದೆ
ಇಲ್ಲಿನ ಜಂಜಾಟಗಳಿಂದ ಬಲು
ಬೇಗ ಅದೆಂತೋ ಮುಕ್ತನಾದೆ
ನನ್ನಂಥ ಅಪ್ರಬುದ್ಧರ ಪಾಡೇನು
ಅಸಹಾಯಕ ಒಳಕೂಗಿಗೇನು
ನಮ್ಮ ಸಮಸ್ಯೆಗಳಿಗೆ ನೀನೇ
ಹೇಳು ಇನ್ನು ಪರಿಹಾರವೇನು
ಎಲ್ಲದಕ್ಕೂ ದಿವ್ಯ ನಿರ್ಲಕ್ಷ್ಯವನೇ
ತೋರುತ್ತಾ ಬುದ್ಧನಂತಾಗುವುದೇ?
ಸಂಸಾರವನೇ ತೊರೆದು ಕಾವಿ
ತೊಟ್ಟು ವೈರಾಗಿಯಾಗುವುದೇ?
ಹೇಳು ಹೇಳು ನಿನ್ನ ಸಂದೇಶಕ್ಕಾಗಿ
ನಾನು ನನ್ನೊಂದಿಗೆ ನನ್ನಂಥವರು
ಕಾತರದಿ ಕಾದಿಹೆವು ನೋಡು!
***************

8 Responses to ಕಾದಿಹೆವು ನೋಡು, ಬಾಬಾ ಸಾಹೇಬ!

 1. Azad IS ಹೇಳುತ್ತಾರೆ:

  ಅಸಹಾಯಕತೆ ಏನು ಅನ್ನೋದು ಅಸಹಾಯಕರಾದವರಿಗೆ ಮಾತ್ರ ಗೊತ್ತು…ಹೊರಗಡೆ ನಿಂತು ಅಸಹಾಯಕರ ಬಗ್ಗೆ ಅವರ ಉದ್ಧಾರದ ಬಗ್ಗೆ ಮಾತನಾಡುವವರ ಮನೋಧರ್ಮ ಚನ್ನಾಗಿ ಹೊರಹೊಮ್ಮಿದೆ ನಿಮ್ಮ ಕವನದಲ್ಲಿ…ನೀಳ ಮತ್ತು ಬೆಳಕು ಚಲ್ಲುವ ಸಾಲುಗಳ ಕವನ..ಪ್ರಸ್ತುತ ವಿಧಾನ ಸೌಧ ವಿಸ್ಮಯಗಳಿಗೆ ಅವರೇ ಮೂಕ ಸಾಕ್ಷಿ…

 2. ಹೇಮಲತಾ ಹೇಳುತ್ತಾರೆ:

  ಹೌದು, ನಿಮ್ಮ ಕವನ ಓದಿ ವೈರಾಗಿಯಾಗಿ ಬದುಕುವುದೇ ಲೇಸು ಎಂದು ಅನಿಸುತ್ತಿದೆ ಹೆಗ್ಡೆಯವರೇ.
  ಈ ದೇಶದ ಬಗ್ಗೆ ಕಾಳಜಿ ಇದ್ದರೂ, ಏನೂ ಮಾಡಲಿಕ್ಕೆ ಆಗುತ್ತಿಲ್ಲವಲ್ಲಾ ಎಂಬ ಚಿಂತೆ.

  • ಆಸು ಹೆಗ್ಡೆ ಹೇಳುತ್ತಾರೆ:

   ನಮಗೆ ಕಾಳಜಿ ಇರುವ ಹೆಚ್ಚಿನೆಲ್ಲ ವಿಷಯಗಳ ಬಗ್ಗೆಯೂ ನಾವು ಅಸಹಾಯಕರಾಗಿಯೇ ಜೀವನ ಸಾಗಿಸುತ್ತಿರುತ್ತೇವೆ. ಅವು ಸಾಮಾಜಿಕವಾಗಿರಬಹುದು ಅಥವಾ ಸಾಂಸಾರಿಕವಾಗಿರಲೂಬಹುದು!
   ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

 3. Chinmay Hegde ಹೇಳುತ್ತಾರೆ:

  Namaskara,

  The best poem mama… :))

 4. ksraghavendranavada ಹೇಳುತ್ತಾರೆ:

  ಮತ್ತೊ೦ದು ಸೂಪರ್ ಕವನ..!!

  ಮಹಾಶಯರು ಹೇಳಿದ್ದುದರ ಅರ್ಥೈಸಿಕೊಳ್ಳಲೇ ಪೂರ್ಣಾಯುಷ್ಯ ಕಳೆಯುವ ನಮಗೆ.. ಅವರ ದಾರಿಯನ್ನು ಅನುಸರಿಸುವುದ೦ತೂ ಆಗದ ಮಾತು..! ಆದ್ದರಿ೦ದ ಅವರ್ಯಾರೂ ಮತ್ತೊಮ್ಮೆ ಹುಟ್ಟಿ ಬ೦ದು..
  ಆ೦ಬೇಡ್ಕರ ಯಾವ ಜಾತಿ ಸಮಾನತೆಯನ್ನು ಮನದಲ್ಲಿಟ್ಟುಕೊ೦ಡು ಸ೦ವಿಧಾನವನ್ನು ರಚಿಸಿದರೋ… ಆ ಅರ್ಥ ಈ( ಹೀ) ಗಿಲ್ಲದಿರುವುದರ ಕ೦ಡು ಅವರೂ ಯೋಚಿಸುತ್ತಿರಬಹುದು.. ಏನೋ ಅಗಲು ಹೋಗಿ ಏನೋ ಆಯಿತಲ್ಲ..

  ಭಾರತದ ಮಹಾನ್ ನಾಯಕನನ್ನು ನೆನೆಸಿದ್ದಕ್ಕೆ ಧನ್ಯವಾದಗಳು.

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: