ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!

ಬೆಳ್ಳಿ ಮೋಡಗಳ
ಹೊದಿಕೆಯಡಿಯಲ್ಲಿ
ಬೆಚ್ಚಗೆ ಮಲಗಿ
ನನ್ನದೇ ಕನಸು
ಕಾಣುತಿರುವೆಯೇನೊ
ನೀನು…ಎಂಬ
ಭ್ರಮೆಯಲ್ಲಿಹೆ
ಕಣೇ ನಾನು!

ಗಾಳಿಯದು ಜೋರಾಗಿ
ಬೀಸಿದಾಗ ಆ ಹೊದಿಕೆ
ಸರಿದು ನಿನ್ನ ಚಿನ್ಮಯ
ಮುಖಾರವಿಂದಕ್ಕೆ
ಭಾಸ್ಕರನ ಕಿರಣಗಳು
ಕಚಗುಳಿಯಿಡುವಾಗ,
ಕನಸಿನ ಲೋಕದಿಂದ
ವಾಸ್ತವಕ್ಕಿಳಿಯಲಾಗದ,
ಆ ಕಚಗುಳಿಯನ್ನೂ
ಸಹಿಸಲಾಗದ,
ನಿನ್ನ ಆ ಮುಗ್ಧ
ಚಡಪಡಿಕೆಯ
ಕಾಯುವಿಕೆಯಲ್ಲಿ
ಇಹೆನೀಗ ನಾನು!
*********

 

ಚಿತ್ರ ಕೃಪೆ: ಛಾಯಾ ಚಿತ್ತಾರ

ಪ್ರಕಾಶ ಹೆಗಡೆಯವರ ಛಾಯಾ ಚಿತ್ತಾರದಲ್ಲಿನ ಈ ಚಿತ್ರವನ್ನು ಕಂಡಾಗ ಹೊರಹೊಮ್ಮಿದ ಮಾತುಗಳು!

4 Responses to ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!

 1. ಆಸು ಹೆಗ್ಡೆ ಹೇಳುತ್ತಾರೆ:

  ನಮಸ್ಕಾರಗಳೊಂದಿಗೆ, ಧನ್ಯವಾದಗಳು ರಾಘವೇಂದ್ರ.

 2. shamala ಹೇಳುತ್ತಾರೆ:

  ಕವನ ಹಾಗೂ ಚಿತ್ರ ಎರಡೂ ಚೆನ್ನಾಗಿವೆ ಸುರೇಶ್… 🙂

  ಶ್ಯಾಮಲ

 3. ksraghavendranavada ಹೇಳುತ್ತಾರೆ:

  ಈ ಸು೦ದರ ಕವನಕ್ಕೆ ಏನೆ೦ದು ಪ್ರತಿಕ್ರಿಯಿಸಲಿ ಎ೦ಬ ಗೊ೦ದಲದಲ್ಲಿ ಚಡಪಡಿಸುತ್ತಿಹೆನೀಗ ನಾನು!

  ಚೆಲುವಾದ ಕವನ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: