ಭ್ರಷ್ಟಾಚಾರದ ವಿರುದ್ಧ ಸಮರ! Fight Corruption!

2 Responses to ಭ್ರಷ್ಟಾಚಾರದ ವಿರುದ್ಧ ಸಮರ! Fight Corruption!

  1. ಪಾರ್ಥಸಾರಥಿ ಹೇಳುತ್ತಾರೆ:

    ಆಸುರವರಿಗೆ
    ಸಂಪದದಲ್ಲಿ ಬರೆದ ಸ್ವಲ್ಪಬಾಗವನ್ನು ನಿಮ್ಮ ಕರೆಗೆ ಪ್ರತಿಕ್ರಿಯೆಯಾಗಿ ಹಾಕಿದ್ದೇನೆ…….
    …………..
    ಜನಸಾಮಾನ್ಯರು: ಲಂಚ ಅನ್ನುವದನ್ನು ಜನಸಾಮಾನ್ಯರು ತುಂಬ ಸಹಜವಾಗಿಯೆ ತೆಗೆದುಕೊಂಡಿದ್ದಾರೆ. ಯಾರು ಪ್ರತಿಭಟಿಸಲು ಹೋಗುವದಿಲ್ಲ. ಉದಾಹರಣೆ ತೆಗೆದುಕೊಳ್ಳಿ, ನೀವು ಒಂದು ಜಾಗವನ್ನು ಅಥವ ಸೈಟ್ ಅನ್ನು ಖರೀದಿಸುತ್ತೀರಿ. ನಿಮ್ಮ ಎಲ್ಲ ದಾಖಲೆಗಳು ಸರಿಯಾಗಿಯೆ ಇದೆ. ಮತ್ತು ಸರ್ಕಾರಕ್ಕೆ ಸೇರಬೇಕಾದ ಎಲ್ಲ ಹಣವನ್ನು ಸಂದಾಯ ಮಾಡುತ್ತೀರಿ ನೀವು ಯಾವ ಕಾನೂನನ್ನು ಮೀರುತ್ತಿಲ್ಲ, ಹಾಗಿದ್ದಾಗಲು ನೊಂದಣಿ ಅಧಿಕಾರಿಗೆ ದಲಾಲಿಗಳ ಮೂಲಕ ಲಂಚ ಕೊಟ್ಟೆ ಕೊಡುತ್ತೀರಿ!. ಏಕೆ ? ಯಾರು ಪ್ರತಿಭಟಿಸುವದಿಲ್ಲ ಏಕೆ?.

    ಉದಾಹರಣೆ ೨. ಡ್ರೈವಿಂಗ್ ಲೈಸನ್ಸ್ ಪಡೆಯಲು ಎಲ್ಲ ದಾಖಲೆ ನೀಡುತ್ತೀರಿ, ಹಣವನ್ನು ಸಂದಾಯ ಮಾಡುತ್ತೀರಿ, ಆತ್ಮವಿಶ್ವಾಸದಿಂದಲೆ ದ್ವಿಚಕ್ರವನ್ನು ಓಡಿಸುತ್ತೀರಿ ಆದರೆ ಅಲ್ಲಿ ಲಂಚ ಎಂದು ಹಣವನ್ನು ಕೊಟ್ಟೆ ಕೊಡುತ್ತೀರಿ ಏಕೆ?
    …. ಎಕೆಂದರೆ ಭ್ರಷ್ಟಾಚಾರ ಎಂಬುದು ಭಾರತೀಯರ ರಕ್ತದಲ್ಲಿ ವಿಷದಂತೆ ಸೇರಿಹೋಗಿದೆ. ಕೋಪ ಬಂದಿತಲ್ವ ? ಇಂದು ಅಣ್ಣ ಹಜಾರೆಯವರ ಅಂದೋಳನ ಬೆಂಬಲಿಸುತ್ತಿರುವ ನೂರಕ್ಕೆ ನೂರು ಮಂದಿ ಯಾವುದೋ ಸಂಧರ್ಪದಲ್ಲಿ ನೇರವಾಗಿ ಅಥವ ಪರೋಕ್ಷವಾಗಿ ಭ್ರಷ್ಟಾಚಾರದಲ್ಲಿ ಬಾಗಿಯಾಗಿರುತ್ತಾರೆ ಅನ್ನುವುದು ಸತ್ಯವಲ್ಲವೆ?!!! ಹಾಗಿರುವಾಗ ಈ ಅಂದೋಲನದಲ್ಲಿ ಬಾಗವಹಿಸಲು ನಮ್ಮಲ್ಲಿ ನೈತಿಕವಾದ ಸತ್ವವೆ ಇಲ್ಲ! ಎಂತಾ ಕರುಣಾಜನಕ ಪರಿಸ್ಥಿಥಿ !.

    ಲಂಚ ಕೊಡುವುದು ಸಹ ಲಂಚ ತೆಗೆದುಕೊಳ್ಳುವಷ್ಟೆ ಅಪರಾದವಲ್ಲವೆ ?

    ಯುವಜನ : ನಿಜ ಯುವಜನ ಈ ಅಂದೋಲನದಲ್ಲಿ ಬಾಗವಹಿಸಬೇಕು ಏಕೆಂದರೆ ಅವರು ಮುಂದಿನ ಭಾರತದ ನೇತಾರರು ಹಾಗು ಅಧಿಕಾರಿಗಳು.
    ಒಂದು ಉದಾಹರಣೆ ಗಮನಿಸಿ: ನನ್ನ ಸ್ನೇಹಿತರ ಮಗ ಸುಮಾರು ೧೬ ವರ್ಷದವನು ದ್ವಿಚಕ್ರ ಓಡಿಸುತ್ತಿದ್ದ ಅದು ಹೆಲ್ಮೆಟ್ ಇಲ್ಲದೆ. ನಾನು ಒಮ್ಮೆ ಪ್ರಶ್ನಿಸಿದೆ ಇದು ತಪ್ಪಲ್ಲವೆ ಪೋಲಿಸ್ ಹಿಡಿದರೆ ಏನು ಮಾಡ್ತಿಯ? ಎಂದು. ಅವನದು ಸಲೀಸಾದ ಉತ್ತರ “ಬಿಡಿ ಅಂಕಲ್ ನೂರು ರೂಪಾಯಿ ಕೊಟ್ಟರೆ ಆಯ್ತು ಬಿಟ್ಟಿ ಬಿಡ್ತಾರೆ” . ಹೇಗಿದೆ ನಮ್ಮ ಯುವ ಜನರ ನೈತಿಕ ಪ್ರಜ್ಞೆ

    ಯುವಜನರಿಗೆ ಒಂದೆ ಪ್ರಶ್ನೆ? , ನೀವು ನಿಜವಾಗಿಯು ಭ್ರಷ್ಟಾಚಾರಕ್ಕೆ ಲಂಚಗುಳಿತನಕ್ಕೆ ವಿರುದ್ದವಾಗಿದ್ದಲ್ಲಿ ನಿಮಗೆ ಅದು ನಿಜಕ್ಕು ಅಸಹ್ಯವಾಗಿದ್ದಲ್ಲಿ ಲಂಚಕೋರರಾದ ನಿಮ್ಮ ಅಪ್ಪಂದಿರನ್ನ , ಅಮ್ಮಂದಿರನ್ನ, ಅಣ್ಣ ಮುಂತಾದವರನ್ನು ವಿರೋದಿಸುವದಿಲ್ಲವೇಕೆ. ಅದೇ ಹಣದಲ್ಲಿ ವಿಧ್ಯೆ ಕಲಿಯುತ್ತೀರಿ ! ಕಾರಿನಲ್ಲಿ ವಾಹನದಲ್ಲಿ ಓಡಾಡುತ್ತೀರಿ? ಮಜ ಮಾಡುತ್ತೀರಿ ನಿಮಗೆ ಇದು ಅಸಹ್ಯ ಅನಿಸುವುದಿಲ್ಲ ಏಕೆ?. ನೀವೇನು ಹಿರಿಯರಿಗೆ ಹೆದರುವುದಿಲ್ಲ , ನಿಮಗೆ ಬೇಕಾದಾಗ ಅವರನ್ನು ಹೆದರಿಸುತ್ತೀರಿ ಅಲ್ಲವೆ?

    ಆದ್ದರಿಂದ ಯುವಜನರೆ ನಿಜಕ್ಕು ನೀವು ಪ್ರಾಮಾಣಿಕರಾಗಿದ್ದಲ್ಲಿ ನಿಮ್ಮ ಮನೆಯಿಂದ ಪ್ರಾರಂಬಿಸಿ ನಿಮ್ಮ ಅಂದೋಲನವನ್ನು.

    ……

    ಅಂದರೆ ನಮ್ಮ ದೇಶದಲ್ಲಿಯ ಭ್ರಷ್ತಾಚಾರ ತೊಲಗಲು ಸಾದ್ಯವಿಲ್ಲವೆ ?

    ಸಾದ್ಯ ! ಅದಕ್ಕೆ ನಮ್ಮ ಜನತೆಯೆ ಮನಸು ಮಾಡಬೇಕು ಭಾರತದ ಎಲ್ಲ ಜನತೆ ಪ್ರತಿಜ್ಞೆ ಮಾಡಬೇಕು

    “ಎಂತಹುದೆ ಸಂಧರ್ಪ ಬರಲಿ ಎಷ್ಟೆ ತೊಂದರೆಯಾಗಲಿ ಕಡೆಗೆ ಪ್ರಾಣ ಹೋಗಲಿ ನಾನು ಯಾರಿಗು ಲಂಚ ಕೊಡಲ್ಲ ಮತ್ತು ಯಾರಾದರು ಕೊಡುತ್ತಿದ್ದರೆ ಅದನ್ನು ಅಲ್ಲಿಯೆ ಪ್ರತಿಭಟಿಸುತ್ತೇನೆ” ಎಂದು.
    ಅದು ನಿಜವಾದ ಅಂದೋಲನ ಇಲ್ಲದಿದ್ದಲಿ ಅದು ಬರಿ ಮಾದ್ಯಮಗಳ ಸಂಮೋಹನ

    …..

    ಈಗ ಮತ್ತೆ ಅದೆ ಪ್ರಶ್ನೆ ನಮ್ಮ ಪಕ್ಕದ ಮನೆಯ ಮಗು ಕೇಳುತ್ತಿದೆ
    “ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ ?” …..

    • ಆಸು ಹೆಗ್ಡೆ ಹೇಳುತ್ತಾರೆ:

      ದೇವರನ್ನು ಮಾನವರ ಮಟ್ಟಕ್ಕೆ ಇಳಿಸಿ, ಅವರಿಗೇ ಲಂಚ ಕೊಟ್ಟು ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳುವ ಮನೋಭಾವ ಹೊಂದಿರುವವರು ನಾವು.
      ಲಂಚ ನೀಡುವಿಕೆಯನ್ನು ನಮ್ಮೆಲ್ಲಾ ಧಾರ್ಮಿಕ ಗುರುಗಳೇ ನಮಗೆ ಬೋಧಿಸಿದ್ದಾರೆ ಅಂತ ಒಮ್ಮೊಮ್ಮೆ ಅನಿಸುತ್ತಿದೆ ನನಗೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: