ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!

ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ
ಸುರಿಯುತ್ತಾ ಇತ್ತಂತೆ ತುಂತುರು ಮಳೆ
ಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ
ದಾಂಡಿಗರ ಓಟಗಳ ಭರ್ಜರಿ ಸುರಿಮಳೆ

ಸಿಡಿಲು ಮಿಂಚುಗಳಂತೆ ಆರ್ಭಟಿಸಲೊಮ್ಮೆ
ಸೆಹವಾಗ, ತೆಂಡೂಲ್ಕರ್ ಮತ್ತು ಯುವರಾಜ
ಮಳೆಯನ್ನೇ ಸುರಿಸಲಿ ಗಂಭೀರ, ವಿರಾಟ,
ರೈನಾ ಹಾಗೂ ಧೋನಿ ಎಂಬ ಮಹಾರಾಜ

ಹರಭಜನ ಜಹೀರರ ಎಸೆತಗಳಿಗೆ ನುಚ್ಚು
ನೂರಾಗಿ “ಶಹೀದ”ರಾಗಲಿ ಆಫ್ರಿದಿ ಪಡೆ
ಪ್ರತಿಯೊಬ್ಬ ಭಾರತೀಯನೂ ನುಡಿಯಲಿ
“ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ”

ಆಟ ನೋಡಲು ಬಂದಿಹ ನೆರೆಮನೆಯವರೆಲ್ಲಾ
ಶಾಂತಚಿತ್ತರಾಗಿ ತಮ್ಮ ತವರಿಗೆ ಮರಳಿಬಿಡಲಿ
ಇಲ್ಲೆಲ್ಲೊ ಅವಿತು ಕೂತು ಮುಂದೊಮ್ಮೆ ನಮ್ಮ
ಮನೆಯ ಶಾಂತಿಯನ್ನು ಕದಡದೇ ಇರಲಿ!

6 Responses to ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!

 1. parthasarathy ಹೇಳುತ್ತಾರೆ:

  ಸುರೇಶ್
  ಒಳ್ಳೆಯವರಿಗೆ ದೇವರ ಮೇಲೆ ಕುಳಿತು ಸದಾ ಅಸ್ತು ಅನ್ನುತ್ತಿರುತಾನಂತೆ
  ಅಂತೆಯೆ ಆಗಿದೆ ನಿಮ್ಮ ಹರಕೆ
  ಪಾರ್ಥಸಾರಥಿ

 2. hemadevadiga ಹೇಳುತ್ತಾರೆ:

  HEGDEYAVARE KAVANA CHENNAGIDE.NANAGOO KONESALANTHU THUMBA ISHTAVAITHU.NIJAVAAGIYOO BANDATHE, MARALI HODARE SAKANTHA ANISUTHIDE.NAMMA PRARTHANE KOODA ADE AAGIDE.

 3. Chitra ಹೇಳುತ್ತಾರೆ:

  ಸುರೇಶ್, ನಿಮ್ಮ ಕವನ ಓದಿ ನಿಜಕ್ಕೂ ಮುದನೀಡಿತೆನಗೆ
  ನಮ್ಮ ನೆಲದಲ್ಲಿ ಅವರು ಸೋತೇ ಹೋಗಬೇಕು ಮನೆಯ ಕಡೆಗೆ

 4. Girish.S ಹೇಳುತ್ತಾರೆ:

  ಗೆಲ್ಲಲು ಬಿಡಬಾರದು ಅವರಿಗೆ

 5. veda ಹೇಳುತ್ತಾರೆ:

  Hegdeyavare sandarbakke thakkanagi sogasagi moodibandide kavana, koneya salanthu bahala arthapoorna.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: