ಒಡಹುಟ್ಟಿದವರು!

ಆಗ:

ಒಡಹುಟ್ಟಿದವರು
ಅಮ್ಮ ಎಂದಷ್ಟೇ ನುಡಿಯುತ್ತಿದ್ದಾಗ
ಅನ್ಯ ಪದಗಳನ್ನೂ ಕಲಿಸಿದವರು

ಒಡಹುಟ್ಟಿದವರು
ಅಂಬೆಗಾಲಿಕ್ಕಿ ಮುಗ್ಗರಿಸುತ್ತಿದ್ದಾಗ
ಕೈಹಿಡಿದು ನಡೆಯ ಕಲಿಸಿದವರು

ಒಡಹುಟ್ಟಿದವರು
ನಾ ಮಳೆಯಲ್ಲಿ ನೆನೆದು ಬಂದಾಗ
ನನ್ನೊದ್ದೆ ಬಟ್ಟೆಯ ಬದಲಿಸಿದವರು

ಒಡಹುಟ್ಟಿದವರು
ನಿದ್ದೆಯಲಿ ಬೆದರಿ ಕನವರಸಿದಾಗ
ಮೈ ತಟ್ಟಿ ಮತ್ತೆ ಮಲಗಿಸಿದವರು

ಒಡಹುಟ್ಟಿದವರು
ಕಾಗದದ ದೋಣಿ ಒದ್ದೆಯಾದಾಗ
ತಮ್ಮ ದೋಣಿಯನೇ ನೀಡಿದವರು

ಒಡಹುಟ್ಟಿದವರು
ಕಣ್ಣಾ ಮುಚ್ಚಾಲೆ ಆಡುತ್ತಿರುವಾಗ
ತಾವಾಗೇ ಸೋತು ನಗಿಸಿದವರು

ಒಡಹುಟ್ಟಿದವರು
ಪಥ್ಯ ಮಾಡಲು ಒಪ್ಪದೇ ಇದ್ದಾಗ
ಮುದ್ದಿನಿಂದ ಶುಶ್ರೂಷೆ ನೀಡಿದವರು

ನಂತರ:

ಒಡಹುಟ್ಟಿದವರು
ನಾನು ನನ್ನ ಕಾಲ ಮೇಲೆ ನಿಂತಾಗ
ಒಳಗೆ ಮತ್ಸರವ ತುಂಬಿಕೊಂಡವರು

ಒಡಹುಟ್ಟಿದವರು
ತಪ್ಪು ಒಪ್ಪುಗಳ ವಿಮರ್ಶೆಗೆ ಹೋದಾಗ
ಸಂಬಂಧವನೇ ಮುರಿದು ಹೋದವರು

ಒಡಹುಟ್ಟಿದವರು
ಕುಡಿತಕ್ಕೆ ಮಾರುಹೋಗದಿರಿಯೆಂದಾಗ
ಅಮಲಿನಲ್ಲೇ ಜರೆದು ನೋಯಿಸಿದವರು

ಒಡಹುಟ್ಟಿದವರು
ನಾ ಒಂಟಿಯೇ ಎಂದು ಗಾಬರಿಯಲ್ಲಿದ್ದಾಗ
ಮುಖವಾಡವ ಧರಿಸಿ ನಾಟಕ ಆಡಿದವರು

ಈಗ:

ಒಡಹುಟ್ಟಿದವರು
ಮೊದಲು ಸಂಬಂಧಗಳ ಸರಿಪಡಿಸಿಯೆಂದಾಗ
ಸಂಬಂಧವ ಮರೆತು ಆಸ್ತಿಯ ಮಾತೆತ್ತಿದವರು

ಒಡಹುಟ್ಟಿದವರು
ಸುಧಾರಣೆಯ ಹಾದಿ ಮುಚ್ಚದಿರಿಯೆಂದಾಗ
ಕುಡುಕರ ಮಾತಿಗೇ ಸೊಪ್ಪು ಹಾಕಿದವರು

ಒಡಹುಟ್ಟಿದವರು
ಇವರಾದರೂ ನನ್ನವರೇ ಎಂದು ನಂಬಿದ್ದಾಗ
ಬೆನ್ನಲ್ಲಿ ಇರಿದೆನ್ನ ಜೀವಂತ ಸಾಯಿಸಿದವರು
*********************

14 Responses to ಒಡಹುಟ್ಟಿದವರು!

 1. ksraghavendranavada ಹೇಳುತ್ತಾರೆ:

  ಒಡಹುಟ್ಟಿದವರ ಮೇಲೇಕೆ ಈತೆರನ ಬೇಸರ? ನಾವು ಪಡೆದು ಬ೦ದದ್ದಿಷ್ಟೇ.. ಎ೦ಬ ಮನೋಧರ್ಮ ಎಲ್ಲ ನೋವಿಗೂ ಸಾ೦ತ್ವನ ನೀಡುವ ಮದ್ದು! ಬೇಸರ ಬೇಡ.. ನಿಮ್ಮ ಬೇಸರ ನಮ್ಮಲ್ಲೂ ನೋವನ್ನು೦ಟು ಮಾಡುತ್ತದೆ…
  ಎಷ್ಟೇ ಸೋಲು ಬರಲಿ… ನೋವುಣ್ಣಲಿ… ಜೊತೆಯಾಗಿ ನಾವಿಲ್ಲವೇನು.. ಸದಾ ನಗುತ್ತಿರಿ…
  ನಮಸ್ಕಾರಗಳೊ೦ದಿಗೆ..
  ನಿಮ್ಮವ ನಾವಡ.

 2. pavi.m.gowda ಹೇಳುತ್ತಾರೆ:

  thumbane sathya sir

 3. ಶಾನಿ ಹೇಳುತ್ತಾರೆ:

  ಎಲ್ಲವೂ, ಎಲ್ಲರೂ ನಾವಂದುಕೊಂಡತೆ ಇರುತ್ತಿದ್ದರೆ ಜಗತ್ತಿನಲ್ಲಿ ಸಮಸ್ಯೆಯೇ ಇರುತ್ತಿರಲಿಲ್ಲ. ವಾಸ್ತವವನ್ನು ಸ್ವೀಕರಿಸಿ ಆತ್ಮಸಾಕ್ಷಿಗನುಗುಣವಾಗಿ ಸಾಗುವುದು ಮಾತ್ರ ನಮ್ಮ ಕೈಯಲ್ಲಿರುತ್ತದೆ. ನಿಮ್ಮ ಮನದಳಲನ್ನು ಚೆನ್ನಾಗಿ ಅಭಿವ್ಯಕ್ತಿಸಿದ್ದೀರಿ.

 4. Ravi ಹೇಳುತ್ತಾರೆ:

  ನಮಸ್ಕಾರ ಹೆಗಡೆಯವರೇ. ದ್ವಾಪರದಲ್ಲಿ ದಾಯಾದಿಗಳು, ಈಗ ಒಡಹುಟ್ಟಿದವರು. ಅರ್ಜುನ ಯುದ್ಧಕ್ಕೆ ಹಿಂಜರಿದಾಗ ಕೃಷ್ಣ ಕೊಟ್ಟ ಮಹಾ ಉಪದೇಶವನ್ನು ನೆನಪಿಸಿಕೊಳ್ಳಿ. ಶುಭವಾಗಲಿ.

 5. Chitra ಹೇಳುತ್ತಾರೆ:

  ಸುರೇಶ್,

  ಅನುಭವ ಆದಾಗಲೇ ಇಂತಹ ಕವನ ಬರೆಯೋದಿಕ್ಕೆ ಆಗೋದು.
  ಬದಲಾವಣೆ ಜಗದ ನಿಯಮ ಅಂತ ಹೇಳಿ ಹೇಳಿ ಒಡಹುಟ್ಟಿದವರಿಗೂ ಇದು ಅನ್ವಯಿಸುತ್ತಿದೆ ಅಂತ ನನ್ನನಿಸಿಕೆ.

  ಚಿತ್ರ

 6. ಹೇಮಲತಾ ದೇವಾಡಿಗ ಹೇಳುತ್ತಾರೆ:

  ತುಂಬಾ ಸರಿಯಾಗಿ ಬರೆದಿದ್ದೀರಿ.
  ಇದು ಎಲ್ಲಾ ಮನೆಗಳ ಕಥೆ.
  ಎಲ್ಲಿಯವರೆಗೆ ನಾವು ಇದನ್ನು ಒಪ್ಪುವುದಿಲ್ಲ ಎಂದರೆ, ಎಲ್ಲಿಯವರೆಗೆ ನಮಗೆ ಸ್ವಂಥ ಅನುಭವ ಆಗುವುದಿಲ್ಲವೋ ಅಲ್ಲಿಯವರೆಗೆ ಮಾತ್ರ.

 7. Manjunatha HT ಹೇಳುತ್ತಾರೆ:

  ಸುರೇಶ್, ಬಹುಶಃ ಇದು ಇ೦ದಿನ ಎಲ್ಲ ಮನೆಗಳಿಗೂ, ಎಲ್ಲ ಸ೦ಬ೦ಧಗಳಿಗೂ ಅನ್ವಯಿಸುತ್ತದೆ. ಒಡಹುಟ್ಟಿದವರೊಡನೆ ನಿಮಗಾದ ಅನುಭವವನ್ನು ಸು೦ದರವಾಗಿ ಪದಗಳಲ್ಲಿಳಿಸಿರುವಿರಿ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: