ಉದಯ ಸೂರ್ಯ ನನಗೆ ನನ್ನಮ್ಮನಂತೆ!

ಳಿಯಿಂದ ಬಿಸಿಲಿನೆಡೆಗೆ ನಿಧಾನವಾಗಿ ಸಾಗಿಸುತ್ತಾ,
ಕತ್ತಲೆಯಿಂದ ಬೆಳಕಿನೆಡೆಗೆ ಕೈಹಿಡಿದು ನಡೆಸುವನಂತೆ
ಒಂದೊಂದೇ ಮೆಟ್ಟಿಲನು ನಿಧಾನದಿ ಮೇಲೇರಿಸುತ್ತಾ
ಸಾಗುವ ಉದಯ ಸೂರ್ಯನವನೆನಗೆ ನನ್ನಮ್ಮನಂತೆ
ಒಮ್ಮೆಗೇ ಬಡಿದೆಬ್ಬಿಸದೇ, ತಲೆಯ ಮೇಲೆ ಕೈಸವರುತ್ತಾ
ಮೈದಡವಿ ದಿನಾ ನಿದ್ದೆಯಿಂದ ಎಚ್ಚರಿಸುತ್ತಿದ್ದೆನ್ನಮ್ಮನಂತೆ
ಇರಬೇಕೆನ್ನುವರು ಜೀವನದಲಿ ಎಲ್ಲವೂ ನಿಧಾನದಿ ದಕ್ಕುತ್ತಾ
ಅತೀ ಹೆಚ್ಚು ಅತೀ ಶೀಘ್ರದಲಿ ದಕ್ಕಿದರದು ಉಳಿಯದಂತೆ
ಸೂರ್ಯನ ನಡೆಯೂ ಕೂಡ ಸಾರುವಂತಿಹುದು ವೇದಾಂತ
ಎಷ್ಟೇ ದಕ್ಕಿಸಿಕೊಂಡರೂ ಕತ್ತಲ ಶೂನ್ಯದತ್ತಲೇ ಪಯಣವಂತೆ

********************

7 Responses to ಉದಯ ಸೂರ್ಯ ನನಗೆ ನನ್ನಮ್ಮನಂತೆ!

 1. ksraghavendranavada ಹೇಳುತ್ತಾರೆ:

  “ಇರಬೇಕೆನ್ನುವರು ಜೀವನದಲಿ ಎಲ್ಲವೂ ನಿಧಾನದಿ ದಕ್ಕುತ್ತಾ
  ಅತೀ ಹೆಚ್ಚು ಅತೀ ಶೀಘ್ರದಲಿ ದಕ್ಕಿದರದು ಉಳಿಯದಂತೆ“

  ಸೂರ್ಯನ ಚಲನೆಯಲ್ಲಿಯೂ ವೇದಾ೦ತವನ್ನು ಕ೦ಡು, ಅದನ್ನೊ೦ದು ಜೀವನ ಸ೦ದೇಶವನ್ನಾಗಿ ಮಾರ್ಪಡಿಸಿದ ತಮಗೆ ನಮೋನಮ:
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. Bharath Kumar ಹೇಳುತ್ತಾರೆ:

  ಸಾರ್.. ತುಂಬ ಚಳಿಯಿದ್ದರೆ ಅದು ಚಳಿ+ಚಳಿ => ಚಚ್ಚಳಿ ಆಗುತ್ತದೆಯೆ ಹೊರತು ಛಳಿ ಆಗಲ್ಲ ಸಾರ್.!

  ಎತ್ತುಗೆಗೆ:
  ಮೊದಲು+ಮೊದಲು= ಮೊದಮೊದಲು = ಮೊತ್ತಮೊದಲು
  ಹಸಿರು+ಹಸಿರು = ಹಸಿಹಸಿರು = ಹಚ್ಚಹಸಿರು.

 3. Bharath Kumar ಹೇಳುತ್ತಾರೆ:

  ಗುರುಗಳೆ,
  ಅದು ಛಳಿಯಲ್ಲ…ಚಳಿ

  • ಆಸು ಹೆಗ್ಡೆ ಹೇಳುತ್ತಾರೆ:

   ಧನ್ಯವಾದಗಳು ಭರತ್.
   ತಿದ್ದುಪಡಿಗಳು ಸದಾ ಸ್ವಾಗತಾರ್ಹ.

   ನಿಘಂಟಿನ ಪ್ರಕಾರ
   ಛಳಿ (ನಾ) ಚಳಿ, ಶೀತ, ಶೈತ್ಯ, ಥಂಡಿ, (n.) chill; cold.
   ಹಾಗಾಗಿ ಎರಡನ್ನೂ ಬಳಸಬಹುದು!
   ನಾನು ಬರೆಯುವಾಗ ಚಳಿ ಸ್ವಲ್ಪ ಜಾಸ್ತಿಯಾಗಿ ಛಳಿಯಾಯ್ತು!
   🙂

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: