ಕಲಿಯುಗದ ಮಹಿಮೆ…!?

ಮುಖವಾಡ ಹೊತ್ತವರೂ ಶಾಸ್ತ್ರಗಳ ಬೋಧಿಸಿದೊಡೆ
ನಗ್ನರಾಗಿ ನಿಂತವರೂ ಪರರ ಹಳಿಯ ತೊಡಗಿದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!

ಅಧರ್ಮಿಗಳ ಬೆಂಬಲಕೂ ನೂಕು ನುಗ್ಗಲು ಉಂಟಾದೊಡೆ
ಅನಾಚಾರಿಗಳ ಅಂಗಳದಲಿ ಜನ ಜಾತ್ರೆ ಸೇರಿ ಇರ್ದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!

ಲಂಗು ಲಗಾಮಿಲ್ಲದೇ ಸ್ವೇಚ್ಛಾಚಾರ ಮೆರೆಯುತ್ತ ಇರ್ದೊಡೆ
ಸ್ವಂತದಲಿ ನೈತಿಕತೆ, ಹಿರಿಯರಲಿ ಭಯ ಭಕುತಿ ಇಲ್ಲದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!

ನೈತಿಕತೆ ಅನೈತಿಕತೆಯ ಅಂತರ ಕಾಣೆಯಾಗತೊಡಗಿದೊಡೆ
ಹೆತ್ತಬ್ಬೆಯ ಅತ್ಯಾಚಾರಕ್ಕೆ ಮಗನೇ ಮನ ಮಾಡಿ ನಿಂದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!

**********************

4 Responses to ಕಲಿಯುಗದ ಮಹಿಮೆ…!?

 1. ಹೇಮಾ ಹೇಳುತ್ತಾರೆ:

  ನಿಮ್ಮ ಅಪ್ಪಯ್ಯ ಬರೆದ ಕವನಗಳನ್ನು ನಾನೂ ಓದಿದ್ದೆ, “ಜಿಜ್ಞಾಸು” ಎಂಬ ಅವರ ನುಡಿಮುತ್ತುಗಳ ಸಂಗ್ರಹದಲ್ಲಿ. ನನಗೆ ಸದಾ ನೆನಪಿನಲ್ಲಿರುವುದು ಹಾಗೂ ಇಷ್ಟವಾದ ನುಡಿಮುತ್ತು ಇದು:

  “ಕಷ್ಟ ಸುಖಗಳಿವು ಜೀವನದ ಒಡಹುಟ್ಟು
  ಬಿಟ್ಟು ಬಾಳುವುದುಂಟೇ ಒಡಹುಟ್ಟು ಬಂಧುಗಳ
  ಎಷ್ಟಾದರೇನಂತೆ ಒಟ್ಟಾಗಿ ಬಾಳುವೆವು
  ಇಷ್ಟಾನಿಷ್ಟಗಳು ಒಟ್ಟೊಟ್ಟಿಗೆ ಬರಲಿ
  ಮನ ಮಾತ್ರ ಸಿಟ್ಟಾಗದಿರಲಿ ಅಲ್ಲವೇ ಅಣ್ಣಯ್ಯಾ?”

 2. shashi jenny ಹೇಳುತ್ತಾರೆ:

  ya very true it reminded me of Late Dr Chandrashekhar and his shop at hiriadka where he too was narrating about the impact of kaliyuga during his talks with Jenny Master

  • ಆಸು ಹೆಗ್ಡೆ ಹೇಳುತ್ತಾರೆ:

   ಶಶಿ,
   ನನ್ನ ಬರಹಗಳು ಇಂದು ನಿನಗೆ ನನ್ನ ಅಪ್ಪಯ್ಯನವರ ನೆನಪು ಮಾಡಿಸಿದೆಯೆಂದಾದರೆ, ಅವರ ಮಗನಾಗಿ ಜನಿಸಿದುದಕ್ಕೆ ನಿಜಕ್ಕೂ ನಾನು ಧನ್ಯನಾದೆ.
   ನನ್ನ ಜೀವನದಲ್ಲಿ ಸದಾ ಮಾರ್ಗದರ್ಶನ ಮಾಡಿದ್ದು ನನ್ನ ಅಪ್ಪಯ್ಯನವರ ಜೀವನವೇ.
   ಧನ್ಯವಾದಗಳು ಸದಾ ಓದಿ ಪ್ರೋತ್ಸಾಹಿಸುವ ನಿನಗೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: