ತಮ್ಮ ಪಾಪದ ಕೊಡ ತುಂಬಿದೆ, ಕೇಳಿ ಮುಖ್ಯಮಂತ್ರಿಗಳೇ!

 

ಸದಾಚಾರವ ಮರೆತು ರೂಢಿಸಿಕೊಂಡರೆ ಬರೀ ಭ್ರಷ್ಟಾಚಾರ
ಕಾಡದಿಹುದೇ ತಮ್ಮನ್ನು ದಿನ ರಾತ್ರಿ ಈ ರೀತಿ ವಾಮಾಚಾರ

ಊರೂರು ಸುತ್ತಿ, ನೂರೆಂಟು ದೇವಸ್ಥಾನಗಳಿಗೆ ದೇಣಿಗೆ ನೀಡಿ
ತನು ಮನ ಧನದ ಸೇವೆ ಮಾಡಿ ಬಂದವರಿಗೂ ಭಯ ನೋಡಿ

ಕಾಡುತಿಲ್ಲ ತಮ್ಮನು ಬಾಹ್ಯ ಲೋಕದ ಅದಾವ ಭೂತ ಪ್ರೇತವೂ
ತಮ್ಮನ್ನು ಕೆಣಕೆಣಕಿ ಕಾಡುತಿಹುದು ತಮ್ಮದೇ ಆ ಅಂತರಾತ್ಮವು

ರೈತರ ಮೇಲೆ ಪ್ರಮಾಣ ಮಾಡಿ ಈ ರೈತರನೇ ಮರೆತವರಲ್ಲವೇ
ಮಗಳ ಸಮಾನ ಎಂದವಳ ಮಾನವ ಹರಾಜು ಹಾಕಿದವರಲ್ಲವೇ

ಭ್ರಷ್ಟನೇಕಾದೆ ಎಂದರೆ ನೀವು ಭ್ರಷ್ಟರಾಗಿರಲಿಲ್ಲವೇ ಎಂದಿರಿ ತಾವು
ರೈತರ ಗೋಳಿಗೆ ಕಿವಿಯಾಗದೆ ಧನಿಕರ ಬಂಧಿಯಾದವರು ತಾವು

ಶಾಲಾ ಮಕ್ಕಳಂತೆ ದಿನ ಪ್ರತಿದಿನ ತೊಡೆತಟ್ಟಿ ಕಿತ್ತಾಡುತ್ತಿದ್ದೀರಲ್ಲಾ
ಆರು ಕೋಟಿಯ ಬೆಂಬಲವಿದೆಯೆಂದರೂ ಅವರ ನೋವನ್ನರಿಯಲಿಲ್ಲ

ಜನರ ಬೇಡಿಕೆ ಕೋರಿಕೆಗಳಿಗೆ ಸ್ಪಂದಿಸದೇ ಕುರ್ಚಿಗಂಟಿ ಕೂತವರು
ಭ್ರಷ್ಟರ ಸದೆ ಬಡಿಯ ಹೊರಟವರ ಕತ್ತಿಗೆ ಪಟ್ಟಿ ಹಾಕಿ ಕೂರಿಸಿದವರು

ತಮ್ಮ ಪಾಪದ ಕೊಡ ತಮ್ಮಿಂದಲೇ ತುಂಬಿದೆ ಕೇಳಿ ಮಹಾನುಭಾವ
ಹಾಗಾಗಿಯೇ ತಮ್ಮಲ್ಲಿ ತುಂಬಿದೆ ಸಾಯಿಸಬಹುದೆಂಬ ಭಯದ ಭಾವ
*************

7 Responses to ತಮ್ಮ ಪಾಪದ ಕೊಡ ತುಂಬಿದೆ, ಕೇಳಿ ಮುಖ್ಯಮಂತ್ರಿಗಳೇ!

 1. Yogesh Muniyappa ಹೇಳುತ್ತಾರೆ:

  Adhbutha Kavana !! adarula 1 mathu 3 saalantu Adhbutha……..

 2. HEMA ಹೇಳುತ್ತಾರೆ:

  OLLEYA KAVANA.ENU MAADODU ? BEJARAGIBITTIDE.BRASHTARA JOTHE BADUKU.

 3. Nandagopal ಹೇಳುತ್ತಾರೆ:

  ಹಾಗಾದರೆ ಕುಮಾರ ಸ್ವಾಮೀ, ಗೌಡರ , ಧರ್ಮ ಸಿಂಘರ, ಎಸ್ಸೆಂ ಕೃಷ್ಣರವರ ಪಾಪದ ಕೊಡ ತುಂಬಿಲ್ಲವೇ.

 4. Rakesh Joshi ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ sir. ಮಹಾನುಭಾವನಿಗೆ ಈಗಲಾದರು ಬುದ್ದಿ ಬರಲಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: