ಇದುವೇ ಜೀವನ!

 

“ಇಂದವನ ಜನ್ಮ ದಿನ
ಅವನ ನೆನಪಿನಲೆಯಲ್ಲಿ ಸಾಗಿದೆ ಈ ಮನ
ಮರೆತೆನೆಂದರೂ ಮರೆಯಲಾಗದು ಆತನೊಂದಿಗೆ ಕಳೆದ ದಿನ”

*****

“ಸಖೀ, ಇದುವೇ ಜೀವನ
ಆಗುವುದಿಲ್ಲ ಏನೂ ಎಣಿಸಿದಂತೆ ಈ ಮನ
ಎಲ್ಲೆಂದರಲ್ಲಿ ಯಾರ್ಯಾರೊಂದಿಗೋ ಹೆಣೆದುಕೊಳ್ಳುವುದು ಮನ

ಅಂದಿಗೆ ಅದುವೇ ಸತ್ಯ
ಇಂದು ನಿಜದಿ ಆಗಿಲ್ಲವಾದರೂ ಅದು ಮಿಥ್ಯ
ಅದಕ್ಕೇ ಅಂಟಿಕೊಂಡಿರಲಾಗದು ಜೀವನ ಸಾಗುತಿರಬೇಕು ನಿತ್ಯ

ಜೀವನದ ಪುಟಗಳಲಿ
ಅಧ್ಯಾಯಗಳ ನಂತರ ಅಧ್ಯಾಯಗಳು ಇರಲಿ
ಒಂದಕ್ಕೊಂದು ಸಂಬಂಧಿಸದಿದ್ದರೂ ಜೀವನದಲಿ ದಾಖಲೆಗಳಿರಲಿ

ಒಂದು ಅಧ್ಯಾಯದ
ಪ್ರಭಾವ ಇನ್ನೊಂದರ ಮೇಲಿರದೇ ಆ ಭಾಗದ
ಪರಿಧಿಯಲೇ ಅರ್ಥ ನೀಡಿ,  ಅಳಿಸಲಾಗದ ಭಾಗವಾಗಿರಲಿ ಸದಾ

ನೆನಪುಗಳು ನೀರಿನಂತೆ
ಬೆಳೆಯುತಿರುವ ಈ ಜೀವನಕೆ ಸಹಕಾರಿಯಂತೆ
ನೆನಪುಗಳಿಂದಲೇ ಶಕ್ತಿ ತುಂಬಿಸಿಕೊಂಡು ಸದಾ ಸಾಗುತಿರಬೇಕಂತೆ

ಆತನಿಂದೆಲ್ಲಾದರೂ ಇರಲಿ
ಆತನ ಜೀವನದಲೂ ಸದಾಕಾಲ ನೆಮ್ಮದಿ ಇರಲಿ
ಆತನ ಜೀವನಕ್ಕೆ ಶಕ್ತಿ ತುಂಬುತ್ತಾ ನಿನ್ನ ನೆನಪುಗಳು ಅಲ್ಲಿ ಜೊತೆಗಿರಲಿ”
***********************

7 Responses to ಇದುವೇ ಜೀವನ!

 1. Vivek Tulluri ಹೇಳುತ್ತಾರೆ:

  @ Hema,
  I am very unhappy for using my name in your aricle. Lately I understood the meaning of Tulluri, in telugu it is pookumanta. because of your marati origin, you never feel bad about other south indians language & culture.
  shame on your part.

  • ravindranath ಹೇಳುತ್ತಾರೆ:

   Mr. Vivek,
   your surname sounds something bad. it is advised to change your surname

  • Harsha ಹೇಳುತ್ತಾರೆ:

   ತಮ್ಮ ಮೊಮ್ಮಗನೊ ಅಥವ ಮೊಮ್ಮಗಳೊ Tulluri ಅಂದರೆ ಏನು ಅಂಥ ಕೇಳಿದರೆ ನೋವಾದಾಗ, ಅಯ್ಯೋ ಅಮ್ಮ…. ಹೇ…………ಮಾ…………….. ಅಂತ ಹೇ ಳಬೇಕೋ. ಇಂತಹದ್ದು ಅವಶ್ಯಕವಿದೆಯೊ ಅಂತ ವಿಚಾರಿಸಿ ಅದರ ಅಗತ್ಯ ಹಾಗು ಅನಗತ್ಯ ಗಳ ಚರ್ಚೆ ಮಾಡಬಹುದಾಗಿತ್ತು ಅಲ್ಲ್ವೆ. ಅದು ಮಾಡದೆ ಯಾಕೆ ಸುಮ್ಮನಾದಿರಿ, ಯಾಕೆಂದರೆ ಅವರು ಯಾವಗಲು ತಮ್ಮ ಲೇಖನಗಳಿಗೆ ಸಿಹಿಯಾದ ಪ್ರತಿಕ್ರಿಯೆ ನೀಡುತ್ತಾರಲ್ವ ಅದಕ್ಕೇನಾ? ಹೊಗಳುವವರು ಏನು ಬರೆದರು ಅದು ಸರಿಯಲ್ವೆ.

   • ಆಸು ಹೆಗ್ಡೆ ಹೇಳುತ್ತಾರೆ:

    ಆತ್ಮೀಯ ಹರ್ಷ,

    ಆಸುಮನದಲ್ಲಿ ಸದಾ ಪ್ರತಿಕ್ರಿಯಿಸುವ ಉಡುಪಿಯ ನನ್ನ ಹೇಮಕ್ಕ ಮತ್ತು ಸಂಪದದಲ್ಲಿ ಲೇಖನ ಬರೆಯುವ ಹೇಮಾ ಪವಾರ್ ಬೇರೆ ಬೇರೆ.

    ಹೇಮಕ್ಕ ಬರಹಗಾರ್ತಿ ಅಲ್ಲ. ಬರೀ ಓದುಗಾರ್ತಿ ಅಷ್ಟೇ.

    ಹೇಮಾ ಪವಾರ್ ಅಂಕಣ ಬರಹಗಾರ್ತಿ.

    ಇದು ತಮ್ಮ ಅವಗಾಹನೆಗಾಗಿ.

    ಕ್ಷಮಿಸಿ, ನಾನು ಸಂಪದದಲ್ಲಿನ ಆ ಲೇಖನವನ್ನು ಪೂರ್ತಿ ಓದಿಲ್ಲ.

    ಅರ್ಧ ಓದುವಾಗಲೇ ಕಿರಿಕಿರಿ ಅನಿಸಿ ನೋವಾದವರ ಹಾಗೆ ಪ್ರತಿಕ್ರಿಯೆ ನೀಡಿದ್ದೆ, ಅಷ್ಟೇ.

    ಈಗ ತಮ್ಮ ಪ್ರತಿಕ್ರಿಯೆಯಲ್ಲಿ ಆ ಪದ ಪ್ರಯೋಗದ ಬಗ್ಗೆ ಓದಿದ ನಂತರ ಅರಿವಾಯ್ತು.

    ಓರ್ವ ಹೆಣ್ಣು ಮಗಳಾಗಿ ಈ ರೀತಿ ಬರೆದಿರುತ್ತಾರೆಂಬ ನಿರೀಕ್ಷೆಯೇ ನನಗಿರಲಿಲ್ಲ.

    ಇಲ್ಲಿನ ಪುಟಗಳಿಗೆ ಸಂಬಂಧಿಸದ ಪ್ರತಿಕ್ರಿಯೆಗಳನ್ನು ಪ್ರಕಟಿಸುವುದಿಲ್ಲ ಎಂದಿದ್ದರೂ ತಮ್ಮ ತಪ್ಪು ಗ್ರಹಿಕೆಯನ್ನು ತೊಲಗಿಸಲು ಪ್ರತಿಕ್ರಿಯೆ ನೀಡಬೇಕಾಯ್ತು.

    ತಮ್ಮ ಅನಿಸಿಕೆಗಳಿಗಾಗಿ ಧನ್ಯವಾದಗಳು.

    ತಮ್ಮ ನಿರೀಕ್ಷೆಯಂತೆ ಅಲ್ಲಿ ನಾನು ನನ್ನ ಪ್ರತಿಕ್ರಿಯೆ ನೀಡುತ್ತೇನೆ.

    ತಾವೂ ಸಂಪದದಲ್ಲೇ ಈ ಪ್ರಶ್ನೆ ಎತ್ತಿದ್ದರೆ ಇನ್ನೂ ಚೆನ್ನಿರುತ್ತಿತ್ತು.

    ತಾವು ಇಲ್ಲಿ ಕೊಡಮಾಡಿರುವ ಮಿಂಚಂಚೆ ವಿಳಾಸ ಅಸ್ಥಿತ್ವದಲ್ಲಿ ಇಲ್ಲ ಅನ್ನುವ ಸಂದೇಶ ಬಂದಿದೆ.

  • ಆಸು ಹೆಗ್ಡೆ ಹೇಳುತ್ತಾರೆ:

   Vivek Tulluri,

   Sorry to say that Hemakka who comments in my blog ASUMANA is a different person than Hema Pawar who herself is a writer and writes blogs.

   Its a mistaken identity.

   Though I do not publish comments which are irrelevant to the posts published in my blog, yet, I am replying to your comment only to clarify the doubts in your mind.

   Request you not to comment without confirming the identity.

   Thanks.

 2. HEMA ಹೇಳುತ್ತಾರೆ:

  ಹಿಂದಿನ ಜೀವನವನ್ನು ನೆನಪಿಸುತ್ತಾ ಬರೆದ ಕವನದಂತಿದೆ.
  ನಿಜವಾಗಿಯೂ ನೆನಪುಗಳು ನೀರಿನಂತೆ ಹರಿಯುತ್ತಾ ಇರುತ್ತವೆ.
  ಕಳೆದ ದಿನಗಳು ಕೊನೆಗೆ ಉಳಿಯುವುದು ನೆನಪುಗಳ ಮೂಲಕ.
  ನಿಮ್ಮಂತಹ ಕವಿಗಳು ಅವುಗಳನ್ನು ಕವನಗಳನ್ನಾಗಿಸಿ ಶಾಶ್ವತವಾಗಿ ನೆನಪಿನಲ್ಲುಳಿಯುವಂತೆ ಮಾಡುತ್ತಾರೆ. ಧನ್ಯವಾದಗಳು ಹೆಗ್ಡೆಯವರೇ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: