ಮಾತಾಡುವಾಸೆ ಇಲ್ಲವೆಂದೇನಲ್ಲ!

 

“ದಿನ ಪ್ರತಿದಿನ ಮಾತನಾಡಲು
ನಿಜದಿ ವಿಷಯಗಳು ಇರಬೇಕಲ್ಲಾ?”

*

“ವಿಷಯ ಏನೂ ಇಲ್ಲದಿದ್ದರೇನು
ಮಾತಾಡುವಾಸೆ ಇಲ್ಲವೆಂದೇನಲ್ಲ”

*

“ನಿನ್ನ ದನಿ ಕಿವಿಗಳಿಗೆ ಬಿದ್ದರೆ
ಅಂದಿನ ದಿನ ಸಾರ್ಥಕವಾಗುವುದಲ್ಲ”

*

“ನಿನಗಾಗಿ ಅಲ್ಲ ನಿಜವಾಗಿಯೂ
ನನಗಾಗಿಯೇ ಕರೆಮಾಡುವೆ ಸುಳ್ಳಲ್ಲ”

*

“ಸರಿ ದಿನಕ್ಕೊಂದು ಕರೆಮಾಡು
ನಿನ್ನಾಣೆಗೂ ಬೇರೇನೂ ಬೇಡುವುದಿಲ್ಲ”

*

“ಆಣೆಯ, ಬೇಡುವ ಮಾತೇಕೆ
ನನಗೂ ಇದೆ ಆಸೆ ನಾ ಮುಚ್ಚಿಡುವುದಿಲ್ಲ”

*

“ನಿನ್ನ ಮನದೊಲವ ಅರಿತಿರುವೆ
ಸರಿ ಬಿಡು ಇಂದಿನ ಮಾತು ಮುಗಿಯಿತಲ್ಲಾ?”

*

“ನಾಳೆ ಹೊಸತೊಂದು ರಾಗದಲಿ
ಹೊಸ ನೆವದೊಂದಿಗೆ ಮಾತಾಡಿದರಾಯ್ತಲ್ಲಾ?”
****************

6 Responses to ಮಾತಾಡುವಾಸೆ ಇಲ್ಲವೆಂದೇನಲ್ಲ!

  1. Lingu S H ಹೇಳುತ್ತಾರೆ:

    ಮಾತು ಮನೆ ಕೆಡಿಸ್ತು ತೂತು ವಾಲೆ ಕೆಡಿಸ್ತು ಸಾಹಿತ್ಯಾ ಆಸಕ್ತಿಗಳಿಗೆ ತೆಲೆ ಕೆಡಿಸ್ತು ಅನ್ನೋ ಹಾಗೆ ಇದೆ ಈ ನಿಮ್ಮ ಕವನ…

  2. Lingu S H ಹೇಳುತ್ತಾರೆ:

    ಈಗಿನ ರಾಜಕೀಯದಲ್ಲಿ ಬರಿ ಸುಳ್ಳು ಹೇಳೋರಿಗೆ ಬೆಲೆ ಅಲ್ಲವೆ ಸ್ವಾಮಿ…ಹಾಗಾದರೆ ಈ ದೇಶದ ಗತಿ ಗೋವಿಂದ…ಗೋವಿಂದಾನಾ……..

  3. KannadaBlogList ಹೇಳುತ್ತಾರೆ:

    ಮಾತನಾಡಲು ವಿಷಯ ಬೇಕೆಂದೇನು ಇಲ್ಲ ಭಾವನೆ ಸಾಕು ಅಲ್ಲವೇ…? ಪ್ರೀತಿ ತುಂಬಿದ ಪ್ರೀತಿಯ ಕವನ ಉತ್ತಮ… ಉದಯ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: