ವಿವೇಕಾನಂದರೇ ನೀಡಲಿ ಸ್ಪೂರ್ತಿ ಈ ಮನಕೆ!

ಇಂದು ನಿರ್ಧರಿಸಿದ್ದೆ ನಾನು
ಈ ಏಕತಾನತೆಯಿಂದ ಬಿಡುಗಡೆ ಹೊಂದಬೇಕೆಂದು,
ಆಸುಮನದ ಮಾತುಗಳಲ್ಲಿನ
ಏಕತಾನತೆಯನ್ನೂ ಆದಷ್ಟು ಕಿತ್ತೊಗೆಯಬೇಕೆಂದು;

ಮುಂಜಾನೆ ಐದಕ್ಕೆ ಬದಲಾಗಿ
ಏಳರವರೆಗೆ ಮಲಗಿದ್ದೆ ಬದಲಾವಣೆ ಇರಲೆಂದು,
ಮುಂಜಾನೆಯ ನಡಿಗೆಗೆ ರಜಾ
ಘೋಷಿಸಿ ತಯಾರಾದೆ ನಾನು ಹಲ್ಲುಜ್ಜಿ ಮಿಂದು;

ರಾಗಿ ದೋಸೆಗೆ ಬದಲಾಗಿ ಅಕ್ಕಿ
ದೋಸೆಯ ತಿಂದೆ ಸಕ್ಕರೆ ಹೆಚ್ಚಾದರೆ ಆಗಲೆಂದು,
ಕಛೇರಿಗೆ ದ್ವಿಚಕ್ರಿಯ ಬದಲಾಗಿ
ಬಸ್ಸಿನಲೇ ಪಯಣಿಸಿದೆ ಭಿನ್ನತೆ ಇರಲಿ ಇಂದೆಂದು;

ಆದರೇನು ಮಾಡಲಿ ಕೆಲಸದಲಿ
ಅದೇ ಏಕತಾನತೆ ಅಲ್ಲೇನೂ ಬದಲಾವಣೆ ಸಾಧ್ಯವಿಲ್ಲ,
ಪತ್ರಿಕೆಗಳ ಸುದ್ದಿಗಳಲೂ ಅದೇ
ಏಕತಾನತೆ ಅಲ್ಲೂ ಹೊಸಸುದ್ದಿಗಳ ಸುಳಿವಂತೂ ಇಲ್ಲ;

ವಿಧಾನಮಂಡಲದೊಳಗೆ ಅದೇ
ಕಬಡ್ಡಿಯಾಟ, ಈರುಳ್ಳಿ ಬೆಲೆಯಲ್ಲಿ ಎಂದಿನ ಏರುಪೇರು,
ಸ್ವಾಮಿ ವಿವೇಕಾನಂದರ ಜನುಮ
ದಿನದಂದು ಹೊಸತು ಬರಲೆಂದೀ ಮನಕ್ಕೆ ಕೊಟ್ಟೆ ಜೋರು;

ಅದೇಕೋ ನನ್ನೀ ಮನವೂ
ಜಡವಾಗಿದೆ ಬೆಂಗಳೂರಿನ ಸೋಮಾರಿ ವಾತಾವರಣದಂತೆ,
ವಿವೇಕಾನಂದ ಸ್ವಾಮಿಯೇ ನನ್ನ
ಈ ಮನಕೆ ಸ್ಪೂರ್ತಿಯ ನೀಡಿ ಹೊಸ ಹೊಸತನ್ನು ಬರೆಸಲಂತೆ!
**********************

Advertisements

ವಿವೇಕಾನಂದರೇ ನೀಡಲಿ ಸ್ಪೂರ್ತಿ ಈ ಮನಕೆ! ಗೆ 3 ಪ್ರತಿಕ್ರಿಯೆಗಳು

  1. umesha v ಹೇಳುತ್ತಾರೆ:

    nija namma indina badukinalli viveka tumba mukya aadarinda viveka vani u mukya .. good

  2. ಹೇಮ ಹೇಳುತ್ತಾರೆ:

    ಹೆಗ್ಡೆಯವರೇ, ಕವನ ಚೆನ್ನಾಗಿದೆ.
    ನಿಜ, ನಮ್ಮೆಲ್ಲರ ಮನಸ್ಸುಗಳಿಗೂ ಸ್ವಾಮಿ ವಿವೇಕಾನಂದರೇ ಶಾಂತಿಯನ್ನು ನೀಡಲಿ ಹಾಗೂ ಏಕತಾನತೆಯನ್ನು ದೂರ ಮಾಡಿ ಸ್ಪೂರ್ತಿಯನ್ನು ನೀಡಲಿ ಎಂದು ನಾನೂ ಹಾರೈಸುವೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: