ಇನ್ನೆಷ್ಟು ಕಾಡಲಿದ್ದಾಳೋ ವಿದೇಶೀ ಪೂತನಿ…?

ನಮ್ಮ ಧ್ವಜವನ್ನು ಕಂಡು ಉರಿಯುವವರೂ ನಿಜದಿ ನಮ್ಮವರೇನ್ರೀ
ಈ ಕಾಶ್ಮೀರ ಭಾರತದೊಳಗಲ್ಲದೇ ಪರದೇಶದೊಳಗೆ ಇದೆಯೇನ್ರೀ

ನಮ್ಮ ದೇಶದ ವ್ಯವಸ್ಥೆ ಇಂದು ಯಾವ ಕೀಳು ಮಟ್ಟಕ್ಕಿಳಿದಿದೆ ನೋಡಿ
ರಾಷ್ಟ್ರಧ್ವಜವನ್ನೂ ವಿರೋಧಿಸುವವರ ಸಂಖ್ಯೆ ಇಲ್ಲಿ ಅದೆಷ್ಟಿದೆ ನೋಡಿ

ಗಣತಂತ್ರ ದಿವಸದಂದು ನಮ್ಮ ನಾಡೊಳಗೆ ರಾಷ್ಟ್ರಧ್ವಜ ಹಾರಿಸಬೇಡಿ
ಧ್ವಜವನ್ನು ಕಂಡು ಉರಿಯುವ ಬಂಧುಗಳನು ಸುಮ್ಮನೇ ಕೆಣಕಬೇಡಿ

ಎಲ್ಲರನೂ ಖುಷಿ ಪಡಿಸುತ್ತಾ ಖುರ್ಚಿಗೇ ಅಂಟಿಕೊಂಡು ಇದ್ದರಾಯ್ತು
ಪ್ರಗತಿ ಹೇಗಿರಲೇಕೆ ಭ್ರಷ್ಟಾಚಾರ ಮಾತ್ರ ತಾಂಡವವಾಡಿದರಾಯ್ತು

ಆಟ ಆಡಿಸಲು ಕೂತವರೇ ಮಾಡಿದ ನಷ್ಟ ಲಕ್ಷಾಂತರ ಕೋಟಿಯಂತೆ
ಆಟ ಮುಗಿದು ತಿಂಗಳುಗಳಾದ ಮೇಲೆ ಈಗ ತನಿಖೆಯ ನಾಟಕವಂತೆ

ಅರವತ್ತು ಕೋಟಿಯ ಬೋಫೋರ್ಸ್ ತನಿಖೆಗೆ ಖರ್ಚು ಶತಕೋಟಿ
ಅಷ್ಟಾಗಿಯೂ ಶಿಕ್ಷಿಸದೇ ಅಲ್ಲೆಲ್ಲರಿಗೂ ಅಪರಾಧಿಯಲ್ಲವೆಂಬ ಚೀಟಿ

ತನ್ನವರನ್ನೆಲ್ಲಾ ಪಾರು ಮಾಡಿದ್ದಾಳೆ ಹಗರಣಗಳ ತನಿಖೆಯಿಂದ
ಈ ನಾಡಿನ ಸರಕಾರ ನಡೆಸುತ್ತಾಳೆ ಪರೋಕ್ಷ ನಿಯಂತ್ರಣದಿಂದ

ಇನ್ನೆಷ್ಟು ವರುಷ ನಮ್ಮನ್ನೆಲ್ಲಾ ಕಾಡಲಿದ್ದಾಳೋ ವಿದೇಶೀ ಪೂತನಿ
ಬಾರದಿಹನ್ಯಾಕಿನ್ನೂ ಕೃಷ್ಣ, ಕೇಳಿಸದೇ ಆತನಿಗೆ ನಾಡ ಜನದನಿ?

**********************

13 Responses to ಇನ್ನೆಷ್ಟು ಕಾಡಲಿದ್ದಾಳೋ ವಿದೇಶೀ ಪೂತನಿ…?

 1. ಸುಂದರ್ ಹೇಳುತ್ತಾರೆ:

  ನಿನ್ನ ಜನ್ಮಕ್ಕೆ ಇಷ್ಟು ಬೆಂಕಿ ಹಾಕ, ಹುಟ್ಟುಗುಣ ಸುಟ್ಟರು ಹೋಗುವುದಿಲ್ಲ ಅನ್ನುವುದಕ್ಕೆ ನೀನೆ ಸಾಕ್ಷಿ. ನೀನು ಬರೆದಿದ್ದೆ ವೇದ ವಾಕ್ಯ ಅನ್ನುವ ರೀತಿಯಲ್ಲಿ ವರ್ತಿಸುತ್ತೀಯಲ್ಲ, ಇನ್ನುಮುಂದೆ ಇದೆ ಕಾದಿದೆ ನಿನಗೆ ಗ್ರಹಚಾರ, ಸಾರ್ವಜನಿಕ ತಾಣದಲ್ಲಿ ನಿನ್ನನ್ನು ಅವಮಾನಿಸದೆ ನಾನು ಸುಮ್ಮನೆ ಕೂರುವುದಿಲ್ಲ.

  • ಆಸು ಹೆಗ್ಡೆ ಹೇಳುತ್ತಾರೆ:

   ತಮ್ಮ ಅಮೂಲ್ಯ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.
   ಓದುಗರ ಪ್ರತಿಕ್ರಿಯೆಗಳು ಆದಷ್ಟು, ಅವು ಪ್ರಕಟವಾಗುವ ಪುಟಗಳ ಮೂಲ ಬರಹಗಳಿಗೆ ಪ್ರಸ್ತುತವೆನಿಸುವಂತಿದ್ದರೆ ಒಳ್ಳೆಯದು.

 2. ಸುಂದರ್ ಹೇಳುತ್ತಾರೆ:

  “ರಾಮನ್” ಮತ್ತು “ಚಂದ್ರಶೇಖರನ್” ಅನ್ನುವ ಈ ಪದಗಳು ಕನ್ನಡ ಪದಗಳೇ?
  ಹಾಗಿಲ್ಲವಾದರೆ ತಾವು ಮೂಲತಃ ತಮಿಳು ಅಥವಾ ಅನ್ಯ ಭಾಷಿಗರೇ?
  ಹಾಗಾಗಿದ್ದಲ್ಲಿ ತಾವು ಈಗ ಕನ್ನಡವನ್ನು ಬಳಸುತ್ತಿರುವುದೂ ಒಂದು ತೆರನಾದ ಸೋಗಲಾಡಿತನವೇ?
  ——-ಎಂದು ಪ್ರತಿಕ್ರಿಯಿಸಿ ಕಲ್ಯಾಣ ರಾಮನ್ ಚಂದ್ರಶೇಖರನ್ ರವರನ್ನು ಅವಮಾನ ಮಾಡಲೆತ್ನ್ಸಿರುವ ಹಿಂದಿನ ಹುನ್ನಾರ ತಿಳಿಯ ಬಹುದೆ ಕಾಮೆಂಟ್ ಕಾಮಿ ಯವರೆ?
  ಇಂದು ನೀವು ಉಪಯೋಗಿಸುತ್ತಿರುವ ಬರಹ, ಅವರ ಸಹೋದರ ವಾಸು ರವರ ಶ್ರಮದ ಫಲ ಗೊತ್ತೆ ತಮಗೆ?
  ಒಮ್ಮೆ “ಚಂದ್ರಶೇಖರನ್ ಕಲ್ಯಾಣ ರಾಮನ್ ” ಹೆಸರನ್ನು ಗೂಗಲಿಸಿ ನೋಡಿ, ಅವರ ಬರಹ ಗಳ ಬಗೆಗಿನ ಕನ್ನಡ ದ ಕಾಳಜಿ ತಮಗೆ ಅರಿವಾಗುವುದೊ ಏನೊ?
  ಒಮ್ಮೆ ಸಂಪದ ದಲ್ಲಿ ಸಹ ಹುಡುಕಿದರೆ ಕೆಲ ಬರಹಗಳು ದೊರಕಬಹುದೇನೊ?
  ಇಂದಿಗೂ “ನ್” ಅನ್ನು ಕೆಲ ಹಳೆ ಮೈಸೂರಿನ ಭಾಗದ ಬ್ರಾಹ್ಮಣರು ಉಪಯೋಗಿಸುತಿದ್ದು, ಅವರ ಮನೆ ಮಾತು ಕನ್ನಡ ವಾಗಿರುತ್ತದೆ.
  ಕಾಮೆಂಟ್ ಕಾಮಣ್ಣ ನವರೆ, ನಿಮಗೆ ಯಾವಗ್ರಿ ಬುದ್ದಿ ಬರುತ್ತೆ? ಆಗಲೆ “ಸಖೀ, ನಾನೇನ ಬರೆಯಲಿ?” ಅಂಥ ವರಾತ ಶುರು ಮಾಡಿದ್ದೀರಲ್ಲ, ನಿಮಗೆ ಮಾಡೋಕೆ ಏನು ಕೆಲಸ ಇಲ್ವ? ಬೇರೆ ಯವರ ಬ್ಲಾಗ್ ಗಳಲ್ಲಿ ಕೈಯಾಡಿಸುವುದನ್ನು ಮೊದಲು ಬಿಡಿ, ನಂತರ ಎಲ್ಲ ಸರಿಹೋಗುತ್ತೆ. ನಿಮ್ಮ ಮನದ ಅನಿಸಿಕೆ ಯನ್ನು ನಿಮ್ಮ ಮನದಲ್ಲಿಯೆ ತುಂಬಿಸಿಕೊಳ್ಳಿ, ಅ ಗಲೀಜನ್ನು ಅಂತರಜಾಲದಲ್ಲಿ ಹಾಕಬೇಡಿ. ರವಿಬೆಳಗೆರೆಯ ಸಾಹಿತ್ಯ(???), ಬರಹದ ಶೈಲಿ, ಪ್ರತಾಪ ಸಿಂಹರ ಮೇಲಿನ ಅಭಿಮಾನ ನಂತರ ಅವುಗಳ ಮೇಲಿನ ದ್ವಂದ್ವ ನಿಲುವುಗಳು ನಿಮಗೆ ತಕ್ಕುದಲ್ಲ. ಬೇರೆಯವರ ಬರಹ ಗಳಿಗೆ ಬೆಲೆಕೊಡಿ, ಯಾರಿಗೆ ಇಷ್ಟವಾಗುತ್ತೊ ಅವರು ಓದಿ ಕೊಳ್ತಾರೆ, ಯಾರಿಗೆ ಬೇಡ್ವೊ ಅವರು ಸುಮ್ಮನಿರುತ್ತಾರೆ.
  ನಿಮ್ಮ ಮನಸ್ಥಿತಿ ನಮಗೆ ತಿಳಿದಿದೆ, ಕೇವಲ ತಮ್ಮ ಲೇಖನಗಳನ್ನು ಮೆಚ್ಚುವ ಕೆಲ ಬ್ಲಾಗಿಗರಿಗೆ, ಚೆನ್ನಾಗಿದೆ ಎಂದು ಪ್ರತಿಕ್ರಿಯೆ ಬರೆಯುವ ತಾವುಗಳು, ಚೆಂದದ ಬ್ಲಾಗ್, ಕಥೆ, ಕವನ ಗಳನ್ನು ಬರೆದ ಜನರನ್ನು ಪ್ರೋತ್ಸಾಹಿಸುವುದೆ ಇಲ್ಲ. ಕೇವಲ ತಾವು ಮಾತ್ರ ಬರೆಯಬೇಕು, ತಮಗೆ ಮಾತ್ರ ಪ್ರಶಂಸೆ ಸಿಗಬೇಕು, ತಮ್ಮನ್ನು ಪ್ರೊತ್ಸಾಹಿಸಿದ ಬ್ಲಾಗಿಗರಿಗೆ ಮಾತ್ರ ಪ್ರತಿಕ್ರಿಯಿಸಬೇಕು ಅನ್ನುವ ನಿಮ್ಮ ಮನೋಧರ್ಮ ನಿಮ್ಮ ಅಹಂಕಾರವನ್ನು ಎತ್ತಿ ತೋರಿಸುತ್ತದೆ, ಸಂಪದ ದಲ್ಲಿನ ನಿಮ್ಮ ನೂರಾರು ಪ್ರತಿಕ್ರಿಯೆಗಳು ಅದಕ್ಕೆ ಸಾಕ್ಷಿ. ಕೆಲವರನ್ನು ಅವಮಾನ ಮಾಡುವುದಕ್ಕೋಸ್ಕರ indirect ಆಗಿ ಕವನ ಬರೆದು ಸೇಡು ತೀರಿಸಿಕೊಳ್ಳೊವ ನಿಮ್ಮ ಕೊಳಕು ಮನಸ್ಸಿಗೆ ಏನೆನ್ನ ಬೇಕು? ಒಂದು ಪ್ರತಿಕ್ರಿಯೆ ಬೇರೆಯವರ ಮನದಲ್ಲಿ ಹೇಗೆ ಪ್ರತಿಕಾರದ ಮನೋಭಾವದ ರೂಪ ವನ್ನು ತಾಳುತ್ತದೆ ಎಂದು ನಿಮ್ಮಿಂದಲೆ ಗೊತ್ತಾಗುತ್ತೆ. ಪಾಪದ ಜನರು ಒಂದು ಕೆಟ್ಟ ಪ್ರತಿಕ್ರಿಯೆ ಯನ್ನು ಪಡೆದ ನಂತರ, ಮುಂದಿನ ಬರಹಗಳಿಗೆ ಕೈ ಹಾಕದೆ ಸುಮ್ಮನಾಗುವ ಜನರನ್ನು ನೋಡಿದ್ದೇನೆ. ನೀವು ನಕರಾತ್ಮಕ ವಾಗಿ, ಕೆಟ್ಟದಾಗಿ ಪ್ರತಿಕ್ರಿಯಿಸಿದ ಲೇಖನಗಳ ಲೇಖಕಕರು ಮತ್ತೊಮ್ಮೆ ಎಷ್ಟು ಲೇಖನ ಬರೆದಿದ್ದಾರೆ ಎಂಬುದನ್ನು ಗಮನಿಸಿ. ಕೆಲವರು, ಅವಮಾನಿಸಿಕೊಂಡು ಸುಮ್ಮನೆ ಕೂತಿದ್ದರೆ, ಇನ್ನು ಕೆಲವರು bye ಹೇಳಿದ್ದಾರೆ. ಅಂತವರು, ಸಾರ್ವಜನಿಕ ತಾಣದಲ್ಲಿ ನಿಮ್ಮ ಲೇಖನ ನೋಡಿದ ಕೂಡಲೆ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾರೆ.
  ಅರ್ಥ ಮಾಡಿಕೊಳ್ಳುವ ಸೂಕ್ಷ್ಮ ವಿದ್ದರೆ, ದಯಮಾಡಿ, ಅಂತವರ ಕ್ಷಮೆ ಕೇಳಿ ಒಂದು ಕವನ ಬರೆಯಿರಿ. “ನನ್ನ ಪ್ರತಿಕ್ರಿಯೆಗಳು ನಿಮ್ಮ ಮನಸ್ಸಿನ ಭಾವನೆಗಳನ್ನು ಕೊಂದು ಹಾಕಿದ್ದರೆ ನನ್ನ ಕ್ಷಮೆ ಎಂದು ಸಾರ್ವಜನಿಕ ವಾಗಿ ಕೇಳಿ,

  • Narendra ಹೇಳುತ್ತಾರೆ:

   ಎಲ್ಲಿಯೋ ಬರೆದ ಲೇಖನಕ್ಕೆ ಮತ್ತೆಲ್ಲಿಯೋ ಟೀಕಿಸುವುದು ಸದಾಚಾರವಲ್ಲವೆಂದೇ ನನ್ನ ಭಾವನೆ.

   • ಸುಂದರ್ ಹೇಳುತ್ತಾರೆ:

    ಖಂಡಿತ ಸದಾಚಾರ ಅಲ್ಲ ವೆನ್ನುವುದು ನನ್ನ ಭಾವನೆ, ಆದರೆ ಸದರಿ ಮಹಾಶಯರು ತಮಗೆ ಬೇಸರವಾದಾಗ (ಬೇರೆಯವರು ಅವರನ್ನು ಟೀಕಿಸಿದಾಗ) ಅದಕ್ಕೊಂದು ಕವನ ಬರೆದು, ನಾನು ಹಿಂಗೆ ನನ್ನ ಮನಸ್ಸೆ ಹಿಂಗೆ ಕಾ.. ಕ.. ಕು.. ಕೀ….ಕೀ ಅಂತ ತಮ್ಮ ಕೊಳಕು ಮನಸ್ಸಿನ ಅನಿಸಿಕೆ ಯನ್ನು ಕವನ ರೂಪದಲ್ಲಿ ಹೊರಗೆಡಹುತ್ತಾರಲ್ಲ ಅದಕ್ಕೇನನ್ನಬೇಕು. ಅವರ ಕೆಲ ದ್ವಿಪದಿ ಗಳೆ ಅದಕ್ಕೆ ಸಾಕ್ಷಿ. ಇವರು ಮಾತ್ರ ತಮಗೆ ಇಷ್ಟವಾಗದ ಪ್ರತಿಕ್ರಿಯೆ ಯನ್ನು ಮಾತ್ರ ಸ್ವೀಕರಿಸುವುದಿಲ್ಲ, ಆದರೆ ಬೇರೆಯವರಿಗೆ ಇಷ್ಟವಾಗದ ಪ್ರತಿಕ್ರಿಯೆ ಬರೆಯುವಾಗ ಸಂತೋಷದಿಂದ ನಾನು ನನಗನಿಸಿದಿದ್ದನ್ನು ನಾನು ಬರೆದಿದ್ದೇನೆ, ಇದು ತಪ್ಪು, ಇದು ಹೀಗಲ್ಲ, ಇದು ಹೀಗಿರಬಾರದಿತ್ತು, ಇದು ಬೇಕಿತ್ತ, ಅಂಗೆ ಹಿಂಗೆ ಬರೆದು ಅಂತಹ ಬರಹಗಾರರ ಮನಸ್ಸನ್ನು ನೋಯಿಸಿ ಅವರನ್ನು ಅವಮಾನ ಮಾಡಿ ಮತ್ತೆ ಬರೆಯದ ಹಾಗೆ ಮಾಡುತ್ತಾರಲ್ಲ ಅದಕ್ಕೆ ಏನು ಮಾಡಬೇಕು? ಬೇರೆಯವರ ತಪ್ಪನ್ನು ತಿದ್ದಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇವರೇನು ಬ್ಲಾಗ್ ಲೋಕದ ಒಡೆಯರೆ?
    ತಮಗೆ ಇಷ್ಟವಾಗಲಿಲ್ಲವೊ, ಸುಮ್ಮನಿರಬೇಕು ಅದು ಬಿಟ್ಟು ಬೇರೆಯವರ ಬ್ಲಾಗ್ ನಲ್ಲಿ ಯಾಕೆ ಕೈ ಆಡಿಸಬೇಕು. ಒಂದು ಗಮನಿಸಿ, ಇವರು ಆಕೆಲಸ ಮಾಡುವುದು ಕಛೇರಿಯ ಸಮಯದಲ್ಲಿ ಮಾತ್ರ, ಶನಿವಾರ ಭಾನುವಾರ ರಜಾದಿನ ಅಂದು ಮಾತ್ರ ಎಲ್ಲೂ ಪ್ರತ್ಯಕ್ಷ ವಾಗುವುದಿಲ್ಲ. ಅದನ್ನು ಮಾತ್ರ ನಿಯತ್ತಾಗಿ ಪಾಲಿಸುತ್ತಾರೆ. ಕಛೇರಿಯಲ್ಲಿ ಸಂಭಳ ಕೊಡುವುದು ಇದಕ್ಕೇನ? ಇವರ ಬಗ್ಗೆ ಬರೆಯುತ್ತ ಹೋದರೆ ಮುಗಿಯುವುದೇ ಇಲ್ಲ. ಗೋಮುಖದ ವ್ಯಾಘ್ರ ಇವರು.

    • Narendra Kumar.S.S ಹೇಳುತ್ತಾರೆ:

     ಸುಂದರ್,

     ನಿಮ್ಮ ಮಾತುಗಳು ಮತ್ತು ಅದರ ಹಿಂದಿರುವ ನೋವು ಅರ್ಥವಾಯಿತು.
     ಆದರೆ, ಅದನ್ನು ನೀಗಿಕೊಳ್ಳಲು ನೀವು ಹಿಡಿದಿರುವ ಹಾದಿ ಮಾತ್ರ ಹಿಡಿಸುತ್ತಿಲ್ಲ.
     ನನಗೆ ತಿಳಿದಿರುವ ಮಟ್ಟಿಗೆ, ಸುರೇಶ್ ಅವರು ಕವನ ಬರೆಯುವುದು ತಮ್ಮ ಬ್ಲಾಗಿನಲ್ಲಿ. ಅಲ್ಲಿಗೆ ಬಂದು ಓದಿರೆಂದು ಅವರು ಯಾರನ್ನೂ ಒತ್ತಾಯಿಸಿಲ್ಲ, ಒತ್ತಾಯಿಸುವ ಹಾಗೂ ಇಲ್ಲ.
     ನಿಮಗೆ ಅವರ ಬ್ಲಾಗಿನ ಬರಹದ ಹಿಂದೆ ಕುಹಕವೋ, ವ್ಯಂಗ್ಯವೋ, ಮತ್ತೊಂದೋ ಕಂಡರೆ, ಅವರ ಬ್ಲಾಗಿಗೆ ಬರದಿದ್ದರಾಯಿತು.
     ನಿಮ್ಮ ಮಾತಿನ ತರ್ಕ ಹೇಗಿದೆಯೆಂದರೆ, “ಅವರು ತಪ್ಪು ಮಾಡುತ್ತಿದ್ದಾರೆ; ಹೀಗಾಗಿ ನಾನೂ ಅದೇ ರೀತಿಯ ತಪ್ಪನ್ನು ಮಾಡುತ್ತೇನೆ”!
     ಇದರಿಂದ ಏನನ್ನು ಸಾಧಿಸಿದಂತಾಗುತ್ತದೆ!?

     ನೀವೇ ಬರೆದ ಪ್ರತಿಕ್ರಿಯೆ ನೋಡಿ:
     > ನಿನ್ನ ಜನ್ಮಕ್ಕೆ ಇಷ್ಟು ಬೆಂಕಿ ಹಾಕ, ಹುಟ್ಟುಗುಣ ಸುಟ್ಟರು ಹೋಗುವುದಿಲ್ಲ ಅನ್ನುವುದಕ್ಕೆ ನೀನೆ ಸಾಕ್ಷಿ.
     ಮತ್ತೊಬ್ಬರನ್ನು ಏಕವಚನದಲ್ಲಿ ಹೀನಮಟ್ಟದಲ್ಲಿ ಬೈಯ್ಯುವುದರಿಂದ, ಪ್ರತಿಕ್ರಿಯಿಸಿದವರ ಬಗ್ಗೆಯೇ ಹೆಚ್ಚು ತಿಳಿಯುತ್ತದೆ. ಇದರಿಂದ ನಿಮ್ಮ ಮನಸ್ಸಿನ ಕೊಳೆಯನ್ನು ಹೊರಹಾಕಿದಂತಾಗುತ್ತದಷ್ಟೇ. ಮತ್ತು ಅದು ಎಲ್ಲರಿಗೂ ತಿಳಿಯುತ್ತಾ ಹೋಗುತ್ತದೆ.
     ನಿಮ್ಮ ಉದ್ದೇಶ ಇದಿರಲಿಕ್ಕಿಲ್ಲವೆಂದು ತಿಳಿದು ಇಷ್ಟೆಲ್ಲಾ ಹೇಳುತ್ತಿರುವೆ.

     ಮತ್ತು ಅವರು ಎಲ್ಲೋ ಬರೆದ ಪ್ರತಿಕ್ರಿಯೆಗೆ ಇಲ್ಲಿ ಬಂದು ಪ್ರತಿಕ್ರಿಯಿಸುವುದರಿಂದ, ಅದನ್ನು ಓದಿದವರಿಗೆ “ಇವರು ಏಕೆ ಹೀಗೆ ಕಾಲು ಕೆರೆದುಕೊಂಡು ಜಗಳ ಮಾಡುತ್ತಿದ್ದಾರೆ” ಎಂಬ ಭಾವನೆ ಬಂದುಬಿಡುತ್ತದೆ. ನೀವೇ ನಿಮ್ಮ ಕೈಯ್ಯಾರೆ ಏಕೆ ಈ ರೀತಿಯ “ಪ್ರಸಿದ್ಧಿ”ಯನ್ನು ಪಡೆಯುತ್ತಿರುವಿರಿ?

     ಯಾವುದೇ ತಪ್ಪನ್ನು, ಅದು ಆದ ಸ್ಥಳದಲ್ಲೇ, ಅದೇ ಸಮಯದಲ್ಲೇ ಸರಿ ಪಡಿಸಬೇಕು. ಸಂದರ್ಭದಿಂದ ಹೊರಬಂದ ನಂತರ ಅದನ್ನು ಮರೆತುಬಿಡಬೇಕು ಅಥವಾ ಅಂತಹ ಇನ್ನೊಂದು ಸಂದರ್ಭಕ್ಕಾಗಿ ಕಾಯಬೇಕು. ಸಂದರ್ಭದಿಂದ ಹೊರ ಬಂದು ಅದನ್ನು ಸರಿಪಡಿಸಲು ಯತ್ನಿಸುವುದು ನಿರರ್ಥಕ.

     ಇನ್ನು ನಿಮ್ಮ ಪ್ರತಿಕ್ರಿಯೆಯ ಜಾಡು ಹಿಡಿದು ಕಲ್ಯಾಣ ರಾಮನ್ ಚಂದ್ರಶೇಖರ್ ಅವರ ಬರಹಕ್ಕೆ ಹೋಗಿ ನೋಡಿದೆ. ಅಲ್ಲಿ ಪ್ರತಿಕ್ರಿಯೆಗಳ ಸಮರವೇ ನಡೆದಿದೆ. ಮೂಲ ಲೇಖನದ ಉದ್ದೇಶ ಸರಿಯಾಗಿ ಅರ್ಥವಾಗದೇ ಅಲ್ಲಿ ಗೊಂದಲವಾಗಿರಬೇಕೆನ್ನಿಸಿತು. “Take the spirit, not the words” ಎನ್ನುವುದು ಆ ಸಂದರ್ಭಕ್ಕೇ ಹೇಳಿ ಮಾಡಿಸಿದ ಮಾತು ಎನ್ನಿಸಿತು.
     ಅಲ್ಲಿ ಬಂದಿರುವ ಪ್ರತಿಕ್ರಿಯೆ, ಟೀಕೆಗಳು ಎಷ್ಟು ತೀಕ್ಷ್ಣವಾಗಿದ್ದರೂ, ಕಲ್ಯಾಣ ರಾಮನ್ ಚಂದ್ರಶೇಖರ್ ಅವರ ಉತ್ತರಗಳನ್ನು ನೋಡಿ “ಭೇಷ್” ಎನಿಸಿತು. ಯಾವುದೇ ವ್ಯಗ್ರತೆಗೆ ಒಳಗಾಗದೆ, ತಾಳ್ಮೆ ಕಳೆದುಕೊಳ್ಳದೆ, ಸಮಾಧಾನಚಿತ್ತರಾಗಿ ಬರೆದಿರುವುದನ್ನು ಓದಿದಾಗ, ಅವರ ಬರಹವನ್ನು ಮೊದಲ ಬಾರಿಗೆ ಓದುತ್ತಿರುವ ನನ್ನ ಮನಸ್ಸಿನಲ್ಲಿ ಅವರ ಕುರಿತಾಗಿ ಒಳ್ಳೆಯ ಪ್ರತಿಮೆ ನಿರ್ಮಾಣವಾಗಿ ಬಿಟ್ಟಿತು.
     ಅವರೇನಾದರೂ ಕೋಪದಲ್ಲಿ ಪ್ರತಿಕ್ರಿಯಿಸಿದ್ದರೆ, ಯಾವ ರೀತಿಯ ಪ್ರತಿಮೆ ನಿರ್ಮಾಣವಾಗುತ್ತಿತ್ತು ಎಂಬುದನ್ನೊಮ್ಮೆ ಯೋಚಿಸಿ.

     • ಸುಂದರ್ ಹೇಳುತ್ತಾರೆ:

      ನನ್ನ ಸುಮಾರು ಹಳೆಯ ಪ್ರತಿಕ್ರಿಯೆಗಳನ್ನು ತೆಗೆದು ಹಾಕಿ, ಕೇವಲ ಮೆಚ್ಚುಗೆ ವ್ಯಕ್ತ ಪಡಿಸಿದ ಕಾಮೆಂಟ್ ಗಳನ್ನು ಮಾತ್ರ ಪ್ರಕಟಿಸಿರುತ್ತಾರೆ. ಇವರೇ ಹೇಳಿಕೊಂಡಂಗೆ ತೆಗಳಿಕೆಗೆ ಹೊಗಳಿಕೆ ಅವಕಾಶ ಅಂತಿದ್ದರೆ, ಹಳೆಯ ಪ್ರತಿಕ್ರಿಯೆ ಗಳು ಎಲ್ಲಿ? ಇವರಿಗೆ ಮಾತ್ರ ತೆಗಳಿಕೆ ಸಲ್ಲ, ಆದರೆ ಮೆಚ್ಚುಗೆ ಮಾತ್ರ ಸ್ವೀಕಾರವೇ. ಅವರ ಹುಟ್ಟುಗುಣ ವನ್ನು ಬದಲಾಯಿಸಲು ಸಾಧ್ವವೇ. ಅದೆಲ್ಲ ಇರಲಿ ಬಿಡಿ.
      ನರೇಂದ್ರ ರವರೆ,ತಮ್ಮ ಒಳ್ಳೆಯ ಹಿತ ನುಡಿ ಗಳಿಗೆ ನನ್ನ ನಮನಗಳು. ನಿಮ್ಮಂತ ವರ ಮಾತುಗಳೆ ನಮಗೆ ಪ್ರೋತ್ಸಾಹ. ನಮ್ಮ ಪ್ರತಿಕ್ರಿಯೆ ಗಳಿಂದ ತಮಗೇನಾದರು ಬೇಸರ ವಾಗಿದ್ದರೆ ನನ್ನ ಕ್ಷಮಿಸಿ.
      ಧನ್ಯವಾದಗಳು

      • ಇಲ್ಲಿ ಪ್ರಕಟವಾಗಿರುವ ತಮ್ಮ ಪ್ರತಿಕ್ರಿಯೆಗಳು ನಿಜವಾಗಿಯೂ ನನ್ನ ಮೇಲೆ ಅಥವಾ ನನ್ನ ಬರಹಗಳ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರತಿಕ್ರಿಯೆಗಳೇ?
       ಹಾಗಾಗಿದ್ದಲ್ಲಿ ನರೇಂದ್ರ ಅವರು ಸುಮ್ಮನೇ ಆಕ್ಷೇಪಣೆ ಮಾಡಿದರೇ?
       ನನ್ನ ಹುಟ್ಟುಗುಣವನ್ನು ಬದಲಾಯಿಸಲು ಸಾಧವೇ ಇಲ್ಲ ಅನ್ನುವ ಮಾತನ್ನು ಪದೇ ಪದೇ ಆಡುವ ತಾವು, ಮಾಡುತ್ತಿರುವುದು ತಮ್ಮ ಹುಟ್ಟುಗುಣವಲ್ಲದ ಗುಣವೇ?

       • ಸುಂದರ್ ಹೇಳುತ್ತಾರೆ:

        ರೀ, ನಾನು ನಿಮ್ಮ ಹಳೆಯ ಲೇಖನಗಳಲ್ಲಿನ ನನ್ನ ಕಾಮೆಂಟ್ ಬಗ್ಗೆ ನಾ ಹೇಳಿದ್ದು.
        ಅದೆಲ್ಲ ಎಲ್ಲಿ?
        ನಿಮ್ಮ ಹಾಗೆ ಎಲ್ಲರ ಬ್ಲಾಗ್ ನಲ್ಲಿ ಕೈ ಆಡಿಸಿಲ್ಲ ನನ್ನ ಹುಟ್ಟು ಗುಣದ ಬಗ್ಗೆ ಹೇಳು ವುದಿಕ್ಕೆ.

  • ಆಸು ಹೆಗ್ಡೆ ಹೇಳುತ್ತಾರೆ:

   ಸುಂದರ್,
   ತಮ್ಮ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.

  • ಸುಂದರ್,
   ತಾವು ನನ್ನ ಬಗ್ಗೆ ಬಹಳಷ್ಟು ತಿಳಿದಿರುವಂತಿದೆ.

   ಸಂತಸವಾಯಿತು.

   ಈ ಅಧ್ಯಯನಾಬರಹಕ್ಕೆ ಯಾವುದಾದರೂ ವಿವಿ ಇಂದ “ಪಿಎಚ್‍ಡಿ” ಸಿಗಬಹುದೇನೋ.

   ತಾವು ನನ್ನ ಬದಲಾಗಿ ದೇವರ ಬಗ್ಗೆ ಅಧ್ಯಯನ ನಡೆಸಿದರೆ ಒಳ್ಳೆಯದು. ಮುಕ್ತಿ ದೊರೆಯಬಹುದು.

   ::: ನಿಮ್ಮ ಮನಸ್ಥಿತಿ ನಮಗೆ ತಿಳಿದಿದೆ, ಕೇವಲ ತಮ್ಮ ಲೇಖನಗಳನ್ನು ಮೆಚ್ಚುವ ಕೆಲ ಬ್ಲಾಗಿಗರಿಗೆ, ಚೆನ್ನಾಗಿದೆ ಎಂದು ಪ್ರತಿಕ್ರಿಯೆ ಬರೆಯುವ ತಾವುಗಳು, ಚೆಂದದ ಬ್ಲಾಗ್, ಕಥೆ, ಕವನ ಗಳನ್ನು ಬರೆದ ಜನರನ್ನು ಪ್ರೋತ್ಸಾಹಿಸುವುದೆ ಇಲ್ಲ:::

   ನಾನು ಏನು ಮಾಡಬೇಕು ಎನ್ನುವುದನ್ನು ತಮ್ಮಿಂದ ಕಲಿಯುತ್ತಿದೇನೆ ಈಗೀಗ. ಸ್ವಲ್ಪ ಸಮಯ ಹಿಡಿಯಬಹುದು ಅದನ್ನೆಲ್ಲಾ ಕಾರ್ಯರೂಪಕ್ಕೆ ತರಲು.

   ಅಲ್ಲದೆ, ತಮ್ಮಿಂದ ಇಷ್ಟೊಂದು ತೆಗಳಿಸಿಕೋಳ್ಳುತ್ತಿರುವ, ನನ್ನಿಂದಲೂ ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕಾದು ಕೂತಿದ್ದಾರೆ ಇನ್ನಿತರ ಬ್ಲಾಗ್ ಬರಹಗಾರರು ಅಂತ ತಮ್ಮಿಂದ ತಿಳಿದು ಸಂತೋಷವಾಯ್ತು.

   :::ನೀವು ನಕರಾತ್ಮಕ ವಾಗಿ, ಕೆಟ್ಟದಾಗಿ ಪ್ರತಿಕ್ರಿಯಿಸಿದ ಲೇಖನಗಳ ಲೇಖಕಕರು ಮತ್ತೊಮ್ಮೆ ಎಷ್ಟು ಲೇಖನ ಬರೆದಿದ್ದಾರೆ ಎಂಬುದನ್ನು ಗಮನಿಸಿ. ಕೆಲವರು, ಅವಮಾನಿಸಿಕೊಂಡು ಸುಮ್ಮನೆ ಕೂತಿದ್ದರೆ, ಇನ್ನು ಕೆಲವರು bye ಹೇಳಿದ್ದಾರೆ.:::

   ಅದರಲ್ಲಿ ನನ್ನದೇನು ತಪ್ಪು?
   ನಕಾರಾತ್ಮಕ ಪ್ರತಿಕ್ರಿಯೆ ಬಂದಕೂಡಲೇ ಬರಹವನ್ನು ಸಿಲ್ಲಿಸಬಾರದು ಎನ್ನುವುದೇ ನನ್ನ ಆಗ್ರಹ.
   ಹೊಗಳಿಕೆಯ ಪ್ರತಿಕ್ರಿಯೇಯೇ ಬೇಕೆಂಬ ನಿರೀಕ್ಷೆ ಇರಬಾರದೆಂದು ತಾವೇ ಹೇಳುತ್ತಿದ್ದೀರಲ್ಲಾ?

   :::ಅಂತವರು, ಸಾರ್ವಜನಿಕ ತಾಣದಲ್ಲಿ ನಿಮ್ಮ ಲೇಖನ ನೋಡಿದ ಕೂಡಲೆ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾರೆ.:::

   ನೋಡಿದ ಕೂಡಲೇ ಕೆಟ್ಟದಾಗಿ ಪ್ರತಿಕ್ರಿಯಿಸಿದವರ ಲೆಕ್ಕ ನೀವು ಇಟ್ಟಿದ್ದೀರಿ.
   ಆದರೆ, ಲೇಖನ ಓದಿ ಒಳ್ಳೆಯ ಪ್ರತಿಕ್ರಿಯೆ ನೀಡಿದವರೂ ಇದ್ದಾರೆ. ಅವರ ಲೆಕ್ಕವನ್ನು ನಾನಿಡುತ್ತೇನೆ.

   ಒಂದು ಮಾತ್ರಾ ನನಗೆ ಖುಷಿ ನೀಡುವ ಸಂಗತಿ.
   ಅದೇನೆಂದರೆ, ತಾವು ಸತತವಾಗಿ ನನ್ನನ್ನು ಹಿಂಬಾಲಿಸುತ್ತಾ ಇದ್ದೀರಿ.
   ನನ್ನ ಬರಹ ಪ್ರತಿಕ್ರಿಯೆಗಳನ್ನೆಲ್ಲಾ ಚಾಚೂ ತಪ್ಪದೆ ಓದುತ್ತಾ ಇರುವಿರಿ.
   ನನಗೆ ಪುಕ್ಕಟೆ ಪ್ರಚಾರವನ್ನೂ ನೀಡುತ್ತಿದ್ದೀರಿ.
   ಅದಕ್ಕಾಗಿ ನಾನು ಋಣಿಯಾಗಿದ್ದೇನೆ.
   ತಮ್ಮ ಈ ತೆರನಾದ ಪ್ರೋತ್ಸಾಹವನ್ನು ಸದಾ ನಿರೀಕ್ಷಿಸುತ್ತಿರುತ್ತೇನೆ.

 3. Narendra Kumar.S.S ಹೇಳುತ್ತಾರೆ:

  ಬಹಳ ಸರಿಯಾದ ಮಾತು. ಈ ಸಂದರ್ಭದಲ್ಲಿ ಕವಿಯ ನುಡಿಯೊಂದು ನೆನಪಾಯಿತು.
  ಕಂಸ, ಪೂತನಿ, ರಾವಣರ ಅಟ್ಟಹಾಸ ನಡೆಯುವ ಕಾರಣವನ್ನು ಒಂದೆರಡು ಸಾಲಿನಲ್ಲಿ ತಿಳಿಸುವ ಕವನವದು:
  ಒಬ್ಬರಾಗುತ ಒಬ್ಬ ದೇವರು ಹುಟ್ಟಿ ಬಂದರು ಬಂದರು
  ಸಾದು ಪುರುಷರು ವೀರ ಪುರುಷರು ಬಂದು ಹೋದರು ಹೋದರು
  ಗೊಡ್ಡು ಮನದಲಿ ಅಡ್ಡಬಿದ್ದೆವು ನಮ್ಮಡಿಯ ಹಿಂದಿಟ್ಟೆವು
  ಹೂವು ಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸ ಬಿಟ್ಟೆವು||

  ಮತ್ತೊಂದು ಕವಿಯ ನುಡಿ ಎಂಥವರನ್ನೂ ಬಡಿದೆಬ್ಬಿಸುತ್ತದೆ:
  ನಮ್ಮದಾಗಿಹ ತೀರ್ಥಕ್ಷೆತ್ರವ ತುಳಿಯುತಿರಲರಿ ರಕ್ಕಸ
  ಎದ್ದು ನಿಲ್ಲಲಿ ಗ್ರಾಮ ಗ್ರಾಮದಿ ರಾಮ ಲಕ್ಷ್ಮಣ ತಾಪಸ ||

  ಎಷ್ಟೆಲ್ಲಾ ಉತ್ಸಾಹದ ಮಾತುಗಳು, ರಕ್ತ ಕುದಿಸುವ ಸುದ್ದಿಗಳು, ಬಡಿದೆಬ್ಬಿಸುವ ದೃಶ್ಯಗಳು.
  ಎಂತಹ ವೈಭವದ, ಸಾಹಸದ ಇತಿಹಾಸದ ನಾಡಿನ ಮಕ್ಕಳಾದ ನಾವು ಎಲ್ಲವನ್ನೂ ಮರೆತು ಮಲಗಿಬಿಟ್ಟಿದ್ದೇವಲ್ಲಾ ಎಂದು ಬಹಳ ದುಃಖವಾಗುತ್ತದೆ. ಅದೇ ಭಾವನೆಯನ್ನೇ ಕವಿ ಈ ಸಾಲುಗಳಲ್ಲಿ ಹಿಡಿದಿಟ್ಟಿದ್ದಾರೆ:
  ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ
  ಸಿಂಧು ಇದ್ದರೆ ಗಂಗೆ ಇದ್ದರೆ ಗಿರಿ ಹಿಮಾಲಯವಿದ್ದರೆ
  ವೇದವಿದ್ದರೆ ಭೂಮಿಯಿದ್ದರೆ ಘನ-ಪರಂಪರೆ ಇದ್ದರೆ
  ಏನು ಸಾರ್ಥಕ ಮನೆಯ ಜನರೇ ಮಲಗಿ ನಿದ್ರಿಸುತಿದ್ದರೆ ||

  ಮನೆಯ ಜನ ಹೀಗೆ “ಸತ್ತಂತಿದ್ದರೆ, ಕಚ್ಚಾಡುತ್ತಿದ್ದರೆ” ಕಂಸ-ಪೂತನಿ-ರಾವಣರ ರಾಜ್ಯವಲ್ಲದೆ, “ರೋಮ್ ರಾಜ್ಯ”ವಲ್ಲದೆ, “ರಾಮ ರಾಜ್ಯ”ವಿರಲು ಹೇಗೆ ತಾನೇ ಸಾಧ್ಯ?
  “ಸಂಘೇ ಶಕ್ತಿ ಕಲೌ ಯುಗೇ” – ಕಲಿಯುಗದಲ್ಲಿ ದೇವರ ಅವತಾರವಿಲ್ಲ; ಕೃಷ್ಣನು ಹುಟ್ಟಿ ಬರುವುದಿಲ್ಲ; ಸಂಘಟನೆಯೇ ದಾರಿ – ಸಜ್ಜನರು ಮನೆಯಲ್ಲಿ ಕುಳಿತು ಸುದ್ದಿಯನ್ನೋದುವುದನ್ನು ಬಿಟ್ಟು ಹೊರಬಂದು ಸಂಘಟಿತರಾದಾಗಲೇ ಪೂತನಿಯ ಸಂಹಾರವಾದೀತು. ಅಲ್ಲಿಯವರೆಗೆ ಪೂತನಿಯದೇ ಅಟ್ಟಹಾಸ; ಕಂಸನದೇ ರಾಜ್ಯ; ರಾವಣನದೇ ದಬ್ಬಾಳಿಕೆ; ಸಜ್ಜನರ ನರಳಿಕೆ; ಸಾಧು-ಸಂತರಿಗೆ ಕಿರುಕುಳ, ಅಪವಾದಗಳು!!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: