ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ …!

ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ
ನಿನಗಲ್ಲಿ ಸುಖೀ ಸಂಸಾರವೇ ಸಿಗಲಿ,
ತವರಿನ ನೆನಪೆಂದೂ ಕಾಡದಿರುವಂತೆ
ಸದಾ ಪ್ರೀತಿಯ ವರ್ಷಾಧಾರೆಯೇ ಇರಲಿ;

ಮುದ್ದು ಮುದ್ದಾದ ಹೂವಿನಂಥ ನಿನ್ನನ್ನು
ಬಲು ಜೋಪಾನವಾಗಿ ಬೆಳೆಸಿದ್ದೆ ನಾನು,
ಈ ಬಾಹುಗಳನ್ನೇ ತೊಟ್ಟಿಲಾಗಿಸಿಕೊಂಡು
ಹಲವೊಮ್ಮೆ ತೂಗಿಸಿ ಮಲಗಿಸಿದ್ದೆ ನಾನು,
ನನ್ನ ಹೂದೋಟದ ಕೋಮಲ ಲತೆಯೇ
ನಿನ್ನ ಬಾಳಲ್ಲಿ ಸದಾ ವಸಂತ ಚೈತ್ರವಿರಲಿ;

|| ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ
ನಿನಗಲ್ಲಿ ಸುಖೀ ಸಂಸಾರವೇ ಸಿಗಲಿ||

ನೀನು ಹೋಗಿ ಸೇರುತಿರುವಾ ಮನೆಯಲ್ಲಿ
ಕಂದಾ, ನಿನ್ನ ಮಾತಿಗೆಂದೂ ಬೆಲೆ ಇರಲಿ,
ನಿನ್ನಾ ತುಟಿಗಳಲ್ಲಿ ನಗುವಿನ ಹೊಂಬಿಸಿಲು
ನಿನ್ನ ಹಣೆಯಲಿ ಖುಷಿಯ ಸಿಂಧೂರವಿರಲಿ,
ಎಂದಿಗೂ ಕಳೆಗುಂದದ ಸುಂದರ ರೂಪ
ಶೃಂಗಾರದ ಸೌಭಾಗ್ಯವು ನಿನ್ನದಾಗಿರಲಿ,

|| ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ
ನಿನಗಲ್ಲಿ ಸುಖೀ ಸಂಸಾರವೇ ಸಿಗಲಿ||

ನಿನ್ನ ಜೀವನದ ಪ್ರತಿಯೊಂದೂ ಕ್ಷಣವೂ
ಆರಾಮದ ತಂಪು ನೆರಳಿನಲ್ಲೇ ಕಳೆಯಲಿ,
ನನ್ನ ಮುದ್ದಿನ ಮರಿಯೇ ನಿನ್ನ ಕೋಮಲ
ಪಾದಗಳಿಗೆ ಮುಳ್ಳುಗಳೆಂದೂ ಚುಚ್ಚದಿರಲಿ,
ನೀನು ಹಾದು ಹೋಗುವ ಬಾಗಿಲುಗಳಿಂದ
ಕಷ್ಟಕಾರ್ಪಣ್ಯಗಳೆಲ್ಲಾ ಸದಾ ದೂರವಿರಲಿ!

|| ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ
ನಿನಗಲ್ಲಿ ಸುಖೀ ಸಂಸಾರವೇ ಸಿಗಲಿ||

******************

 


Hindi Song: Baabul Kee Duwaaye Letee Ja
Movie or Album: Neel Kamal
Singer(s): Mohammad Rafi
Music Director(s): Ravi
Lyricist(s): Sahir Ludhiyanvi

Hindi Lyrics

baabul kee duwaaye letee ja, ja tujhako sukhee sansaar mile
mayake kee kabhee naa yaad aaye, sasuraal me itana pyaar mile
naajo se tujhe paala maine, kaliyo kee tarah phulo kee tarah
bachapan me julaaya hain tujhako, baaho ne meree julo kee tarah
mere baag kee ai naajuk daalee, tuje harpal nayee bahaar mile

jis ghar se bandhe hain bhaag tere, uss ghar me sada teraa raaj rahe
haothon pe hansee kee dhup khile, maathe pe khushee kaa taaj rahe
kabhee jisakee jyot naa ho fikee, tuje aisa rup singaar mile

bite tere jivan kee ghadiya, aaram kee thhandee chhanv me
kaanta bhee naa chubhane paaye kabhee, meree ladalee tere paanv me
uss dwaar se bhee dukh dur rahe, jis dwaar se teraa dwaar mile

8 Responses to ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ …!

 1. ksraghavendranavada ಹೇಳುತ್ತಾರೆ:

  ಈ ಭಾವಾನುವಾದವನ್ನು ಗಮನಿಸಿರಲೇ ಇಲ್ಲ.. ನನ್ನ ಕಣ್ತಪ್ಪಿಸಿ ಆಸುಮನದ ಮಾತುಗಳು ಉಳಿಯುವುದು೦ಟೆ? ಹ.ಹ.ಹ..

  ಅಧ್ಬುತವಾದ ಭಾವಾನುವಾದ.. ಈ ಹಾಡಿನ ಶಕ್ತಿಯೇ ಅ೦ಥಹದ್ದು.. ಮೂಲ ಗೀತೆಯನ್ನು ಕೇಳುತ್ತಿರುವಾಗ ಇದು ಮನಸ್ಸಿನಲ್ಲಿ ಉ೦ಟು ಮಾಡುವ ನೋವು ಹೇಳತೀರದು.. ನಾನು ಆರ್ಕೆಸ್ಟ್ರಾದಲ್ಲಿದ್ದಾಗ, ಮಾರವಾಡಿ ಜನರ ಮದುವೆಗಳಿಗೆ ಕಾರ್ಯಕ್ರಮ ನೀಡಲೆ೦ದು ಹೋಗಿದ್ದಾಗ, ಹುಡುಗಿ ಕಳುಹಿಸಿಕೊಡುವಾಗ ನಮ್ಮ ತ೦ಡದ ಹಿ೦ದೀ ಗಾಯಕರು ಈ ಹಾಡನ್ನು ಹಾಡುತ್ತಿರುವಾಗ ಎಷ್ಟೋ ಬಾರಿ ಕಣ್ಣಿನಲ್ಲಿ ನೀರು ತು೦ಬಿಕೊ೦ಡದ್ದಿದೆ.. ಸಾಮಾನ್ಯವಾಗಿ ಹೆಣ್ಣು ಕಳುಹಿಸಿಕೊಡುವಾಗ ಇಷ್ಟೊ೦ದು ದು:ಖವಾಗುತ್ತದೆ ಎನ್ನುವುದನ್ನು ಸೂಚಿಸಲೇ ಈ ಹಾಡನ್ನು ಉಪಮೆಯಾಗಿ ಬಳಸುತ್ತಿದ್ದರ೦ತೆ! ಅಷ್ಟೊ೦ದು ಮನಕರಗಿಸುವ ಹಾಡು ಇದು.. ಇಷ್ಟೆಲ್ಲದ ನ೦ತರ ನನ್ನ ಅಚ್ಚುಮೆಚ್ಚಿನ ಹಾಡೂ ಹೌದು!
  ಶೀರ್ಷಿಕೆ ಕ೦ಡೇ ಕ್ಲಿಕ್ ಮಾಡಿದ್ದು ಮೋಸವಾಗಲಿಲ್ಲ…

  ಭಾವಾನುವಾದದ ಸೊಗಸು ಸ೦ಪೂರ್ಣ ತು೦ಬಿಕೊ೦ಡಿದೆ..ಈಗೀಗ ನಿಮ್ಮ ಭಾವಾನುವಾದಗಳು ಮೂಲ ಗೀತೆಗಳು ಹುಟ್ಟಿಸುವ ಭಾವನೆಗಳನ್ನೇ ಉ೦ಟುಮಾಡುತ್ತವೆ.

  “ನಿನ್ನ ಹಣೆಯಲಿ ಖುಷಿಯ ಸಿಂಧೂರವಿರಲಿ,
  ಎಂದಿಗೂ ಕಳೆಗುಂದದ ಸುಂದರ ರೂಪ
  ಶೃಂಗಾರದ ಸೌಭಾಗ್ಯವು ನಿನ್ನದಾಗಿರಲಿ,“

  ಎ೦ಥ ಮಗಳಿಗೂ ಈ ಸಾಲುಗಳನ್ನು ಕೇಳಿ ಕ೦ಬನಿ ಜಾರದಿರದು..

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. malathi ಹೇಳುತ್ತಾರೆ:

  ಇದ್ದಕ್ಕಿಂದಂತೆ ಈ ಕವನ ಯಾಕೆ ಅನ್ನುಸ್ತು..ಕೊನೆಗೆ ಅನುವಾದ ಅಂತ ಗೊತ್ತಾಯ್ತು..ಹೌದಲ ಪ್ರತಿ ತಂದೆ ಯೋರ್ವರ..ಬದುಕಿನ ಕ್ಷಣವಿದು…

 3. Bellala Gopinatha Rao ಹೇಳುತ್ತಾರೆ:

  ಸುಂದರ ಅತೀ ಸುಂದರ
  ವಾಹ್!!!
  ಪ್ರತಿ ಎಳೆಯ ಸಾಲೂ ಅದ್ಭುತವಾಗಿ ಚಿತ್ರಿತವಾಗಿದೆ
  ಹೆಗ್ಡೆಯವರೇ ಧನ್ಯವಾದಗಳು

  • ಆಸು ಹೆಗ್ಡೆ ಹೇಳುತ್ತಾರೆ:

   ಗೋಪೀನಾಥ್,

   ಅಂತೂ ತಮಗೂ ಇಷ್ಟವಾಯ್ತಲ್ಲಾ…!
   ಅದು ನಮಗೂ ಸಂತಸ ನೀಡಿತು.

   ತನ್ನ ಮಗಳ ಮದುವೆ ತಯಾರಿಯಲ್ಲಿದ್ದ ಮಹಮ್ಮದ್ ರಫಿ ಈ ಹಾಡಿನ ಧ್ವನಿಮುದ್ರಣ ಆಗುವಾಗ ಕಣ್ಣೀರಿಟ್ಟಿದ್ದರಂತೆ.
   ಭಾವಾನುವಾದ ಮಾಡುತ್ತಾ ಹೋದಂತೆ ನನ್ನ ಕಣ್ಣಂಚಿನಲ್ಲೂ ನೀರಿತ್ತು…
   ಇದು ನನ್ನ ಭವಿಷ್ಯದ ಒಂದು ಸಂತೋಷಮಯ ದಿನದಲ್ಲಿನ ದುಃಖಮಯ ಸನ್ನಿವೇಶವಾಗಲಿದೆ ಅನ್ನುವ ಅರಿವೂ ನನಗಾಯ್ತು.
   ಧನ್ಯವಾದಗಳು.

 4. ವೇದ ಹೇಳುತ್ತಾರೆ:

  ಹೆಗ್ಡೆಯವರೇ,
  ಎಂಥ ಹಳೆಯ ಹಾಡನ್ನು ನೆನಪಿಸಿದಿರಿ ಮತ್ತು ಸುಂದರ ಅನುವಾದ ಮಾಡಿದ್ದೀರಿ! ಥ್ಯಾಂಕ್ಸ್!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: