ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ…!

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ಈ ಗೂಡು ತನ್ನದು, ಇದರಲ್ಲಿ ತನ್ನ ಬೆವರು ಬೆರೆತಿದೆ,
ತನ್ನ ಪರಿಶ್ರಮದ ಸಾಕ್ಷಿಯಾಗಿ ಇನ್ನೂ ಸುಭದ್ರವಾಗಿಯೇ ಅದು ಉಳಿದಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ಹಕ್ಕಿ ಹೊಸ ನೆಲೆಯ ಹುಡುಕಿ ಹೊರಡಬೇಕಾಗಿದೆ,
ಇಂದಿಗೆ ತೀರಿತು ಇಲ್ಲಿಯ ಋಣ, ಎಂದು ಇನ್ನು ಹೊಸಗೂಡು ಕಟ್ಟಬೇಕಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಾನು ತನ್ನದೆಂಬ ಭಾವುಕತೆಗೆ ಅಂಟಿರಲಾಗದಾಗಿದೆ,
ಭೌತಿಕ ವ್ಯಾಮೋಹ ತೊರೆದು ಮೈಕೊಡವಿ ಎದ್ದು ಹೊರನಡೆಯಬೇಕಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ವಿಷಜಂತುಗಳ ಜೊತೆಗೆ ಕಾಲಹರಣ ವ್ಯರ್ಥವಾದುದಾಗಿದೆ,
ಮನವೊಲಿಸಿ ತನ್ನದನ್ನು ಉಳಿಸಿಕೊಂಬ ವ್ಯರ್ಥ ಪ್ರಯತ್ನ ಇನ್ನು ಬೇಡವಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,,
ಇದ್ದಲ್ಲೇ ಒಳಗೊಳಗೇ ಮರುಗಿ ಬೇಯುವುದು ಬೇಡವಾಗಿದೆ,
ಹಾವಿನ ಸಹವಾಸವ ತೊರೆದು ಸ್ವಚ್ಛಂದ ಬಾನಿನಲ್ಲಿ ತಾನೀಗ ಹಾರಾಡಬೇಕಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ನಂಬಿದ ತತ್ವಗಳ ಇಂದು ಒರೆಗೆಹಚ್ಚಿ ಪರೀಕ್ಷಿಸಬೇಕಾಗಿದೆ,
ತಾನು ಸರ್ವಸಮರ್ಥ ಎಂಬುದ ಈ ಜಗದ ಮುಂದೆ ಸಾಬೀತುಪಡಿಸಬೇಕಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಲೆಯೆತ್ತಿ, ಎತ್ತ ದೈವಚಿತ್ತವೋ ಅತ್ತ ನಡೆದುಬಿಡಬೇಕಾಗಿದೆ,
ಹೊಸದೊಂದು ಸ್ಥಾನದಲ್ಲಿ ಹೊಸ ಅಸ್ಥಿತ್ವವನ್ನು ಸ್ಥಾಪಿಸಿ ಬೆಳೆಸಿಕೊಳ್ಳಬೇಕಾಗಿದೆ!
*********************

12 Responses to ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ…!

  1. KBL ಉದಯ ಹೇಳುತ್ತಾರೆ:

    Some softwares for type kannada in computer
    1.Bookmarklet- http://goo.gl/2v6bl
    2.Type computer files in kannada- http://goo.gl/weWFY
    3.Baraha http://www.Baraha.com
    4.”Pada” (ಪದ) software http://lodyaashi.com
    5. Kannada mobile software & pc by using dis type kannada sms easily @ http:// Paninikeypad.com

  2. ಉದಯ ಸನಿಲ್ ಹೇಳುತ್ತಾರೆ:

    ಹಾವು ಗೂಡಿನೋಳಗೆ ನೆಲೆಯೂರಿದರೆ ಕಷ್ಟವಾಗುತ್ತದೆ. but ಮನಸ್ಸಿನೋಳಗೆ ನೆಲೆಯೂರಿದರೆ… ಉತ್ತಮ..ಕ್ಲೀಷ್ಟ..ಅರ್ಥಗರ್ಭೀತ..ಕವನ..ಧನ್ಯವಾದಗಳು…

  3. ಹೇಮಾ ಹೇಳುತ್ತಾರೆ:

    ತುಂಬಾ ಯೋಚಿಸಿ ಹೊರಬಮ್ದ ಅನುಭವದ ನುಡಿ ಇರಬೇಕು.
    ಇದನ್ನು ಅರ್ಥ ಮಾಡಿಕೊಳ್ಳಲು ಮೂರು ಸಲ ಓದಬೇಕಾಯ್ತು, ಹೆಗ್ಡೆಯವರೇ.
    ಅರ್ಥಪೂರ್ಣ ಕವನ.
    ಎಲ್ಲರ ಜೀವನದಲ್ಲೂ ಇರುವುದು ಇಂಥದೇ ವಿಷಯಗಳು ಅಂತ ನನ್ನ ಅನಿಸಿಕೆ.

    • ಆಸು ಹೆಗ್ಡೆ ಹೇಳುತ್ತಾರೆ:

      ಹೂಂ…ನಿಜ ಹೇಮಕ್ಕಾ
      ಎಲ್ಲರ ಜೀವನದಲ್ಲೂ ಇಂಥ ವಿಷಯಗಳು ಇರಬಹುದು
      ಎಲ್ಲರೂ ಒಂದೇ ರೀತಿಯಾಗಿ ಎದುರಿಸದೇ ಇರಬಹುದು
      ನಾನು ನನ್ನ ಜೀವನವನು ಎದುರಿಸಿ ಜೀವಿಸುವ ಪರಿ ಇದು

      ಧನ್ಯವಾದಗಳು.

  4. kiran ಹೇಳುತ್ತಾರೆ:

    ಒಂದಂತು ನಿಜ, ನೀವೇನೆ ಬರೆದರು ಅದರಲ್ಲೊಂದು ಗೂಡಾರ್ಥ ಇರುವುದಂತು ನಿಜ. ಕಳೆದ ೨ ವರ್ಷಗಳಿಂದ ನಿಮ್ಮನ್ನು ಗಮನಿಸುತಿದ್ದೇನೆ. ನೊಂದರೆ ಅದಕ್ಕೊಂದು ಕವನ, ಸಂತೋಷ ಪಟ್ಟರೆ ಅದಕ್ಕೊಂದು ಕವನ, ಬೇಸರ ವಾದರೆ ಅದ್ಕ್ಕೊಂದು ಕವನ, ಏನಾದರು ಸಂಭವಿಸಿದರು ಅದಕ್ಕೊಂದು ಕವನ ಹೀಗೆ ಏನಾದರು ಬರೀತಾಇರುತ್ತೀರ. ಕೆಲವೊಂದು ಕಡೆ ನಿಮ್ಮ ಅಭಿಪ್ರಾಯಗಳಲ್ಲಿ ದ್ವಂದ್ವ ಕಂಡರೂ ಸಹ, ತಮ್ಮನ್ನು defend ಮಾಡಿಕೊಳ್ಳೊಕೆ ಪ್ರಯತ್ನಿಸುವುದಂತು ಸತ್ಯ. ನನ್ನ ಮಟ್ಟಿಗೆ “ಅರಳಿಸಲೆತ್ನಿಸಿದಾಗ ಅರಳುವುದಿಲ್ಲ ಹೂವು, ಅನ್ಯರು ಕೆರಳಿಸಲೆತ್ನಿಸಿದಾಗ ಕೆರಳುವುದಿಲ್ಲ ನಾವು” ಅನ್ನುವುದು ಸುಳ್ಳು. ತುಂಬಾ ಭಾವುಕ ಜೀವಿ ಯಾದ ತಾವುಗಳು, ಕೆರಳಿದಾಗ ಅದ್ಕ್ಕೊಂದು ಪದ್ಯ ರೆಡಿ.
    ಬಹುಶ ನನ್ನೀ ಪ್ರತಿಕ್ರಿಯೆಗೆ ಸಹ ಕವನ ಬರಬಹುದು ಏನೋ?

    • ಆಸು ಹೆಗ್ಡೆ ಹೇಳುತ್ತಾರೆ:

      ಕಿರಣ್,
      ನನಗಿರಲು, ನನ್ನನ್ನು ನನಗಿಂತಲೂ ಚೆನ್ನಾಗಿ ಅರಿತ ಓದುಗರ ಸಂಗ
      ನಾನು ಹೀಗೆ ಬರೆಯುತ್ತಲೇ ಸಾಗುತ್ತೇನೆ, ನನಗೆಷ್ಟೇ ಅದರೂ ಭಂಗ

      ತಮ್ಮ ಮಾತುಗಳನ್ನು ನಾನು ಒಪ್ಪುತ್ತೇನೆ, ಇದು ನಿಜವಾಗಿಯೂ ಸತ್ಯ
      ತಾನು ನುಡಿದ ಮಾತುಗಳಲ್ಲಿ ದೃಢತೆ ಇದ್ದರಷ್ಟೇ, ಮಾತೆನಿಸದು ಮಿಥ್ಯ

      ದೃಢತೆ ಇದ್ದರಷ್ಟೇ ಸಮರ್ಥಿಸಿಕೊಳ್ಳಲು ಯತ್ನಿಸಿ ಸಫಲನಾಗಲೂಬಹುದು
      ನಾನಾಡಿದ ಮಾತುಗಳ ಮೇಲೆ ನನಗೇ ನಂಬಿಕೆ ಇಲ್ಲದೇ ಹೇಗಿರಬಹುದು

      ಧನ್ಯವಾದಗಳು

  5. sheshadri ಹೇಳುತ್ತಾರೆ:

    I love this poem.
    Meaningful. First poem in my life; which grasped my whole soul into it..

    Thanks a lot!!

Leave a reply to KBL ಉದಯ ಪ್ರತ್ಯುತ್ತರವನ್ನು ರದ್ದುಮಾಡಿ