ನನಗೇನು ಬೇಕು ಎಂಬುದ ನಾ ಅರಿತರೆ…!

ನಿನ್ನ – ನನ್ನ ಭೇಟಿಗೆ ತೊಡಕುಗಳು ಕಂಡು ಬಂದಾಗ
ನನ್ನ ಈ ಮನ ನೊಂದು ಮುದುಡಿ ಹೋಗಿದ್ದೂ ಇದೆ

ಛೇ! ಇದೆಂಥಾ ಜೀವನವಪ್ಪಾ! ಎಂದು ಜಿಗುಪ್ಸೆ ಮೂಡಿ
ನಾ ಒಳಗೊಳಗೇ ಮರುಗುತ್ತಾ ಕೂತುಬಿಟ್ಟಿದ್ದೂ ಇದೆ

ಆದರೂ ನನ್ನೊಳಗಿನ ನಿನ್ನ ನೆನಪು ಮರೆಯಾಗಿರಲಿಲ್ಲ
ನಿನ್ನನ್ನು ನೋಡುವ ಹಂಬಲ ಕಡಿಮೆಯಾದದ್ದೇ ಇಲ್ಲ

ತೊಡಕುಗಳ ಪರಿಹಾರಕ್ಕೆ ಹೊಸ ಹೊಸ ಹಾದಿಗಳ
ಕಂಡುಕೊಳ್ಳುವ ಪ್ರಯತ್ನವನ್ನು ನಾ ನಿಲ್ಲಿಸಿರಲೇ ಇಲ್ಲ

ನಿನ್ನ ಮುಖ ದರುಶನವಾಗದ ದಿನಗಳು ನನಗೆ ರೂಢಿ
ಆಗುತ್ತಿದೆ ಎಂದೆನಿಸಿದಾಗ ಸಿಡಿದೆದ್ದೆ ನಾ ಸೈನಿಕನಂತೆ

ಏನೇ ಗಂಡಾಂತರ ಬಂದರೂ ಎದುರಿಸೋಣ ಎಂದು
ಉಪಾಯವ ಕಂಡು ಹಿಡಿದು ನಕ್ಕೆ ವಿಜಯಶಾಲಿಯಂತೆ

ಅವರಿವರ ಅವಲಂಬಿಸಿ ಕೂತರೆ ನನ್ನ ಸಮಸ್ಯೆಗೆ ನಾ
ಪರಿಹಾರ ಕಂಡುಕೊಳ್ಳಲಾಗದೆಂಬುದರ ಅರಿವಾಯ್ತು

ನನಗೇನು ಬೇಕೆಂಬುದ ಅರಿತು ನಾ ಯತ್ನವ ಮಾಡಿ
ಮುನ್ನುಗ್ಗಿದರಷ್ಟೇ ನನ್ನೀ ಜೀವನವೂ ಸಫಲ ಆದೀತು
*****************************

6 Responses to ನನಗೇನು ಬೇಕು ಎಂಬುದ ನಾ ಅರಿತರೆ…!

 1. veena ಹೇಳುತ್ತಾರೆ:

  ನನಗೇನು ಬೇಕು ಎಂಬುದ ನಾ ಅರಿತರೆ…!
  ಅದನ್ನು ಪಡೆಯಲು ಸುಲಭವಾಗುತ್ತಿತ್ತು
  ಒಂದು ವೇಳೆ ಅರಿಯದೆ ಹೋದರೆ…
  ಅದನ್ನು ಅರಿಯಲು ಸಮಯ ವ್ಯಯವಾಗುತ್ತಿತ್ತು!

 2. shamala ಹೇಳುತ್ತಾರೆ:

  ಕೊನೆಯ ಸಾಲುಗಳು ನಿಜಕ್ಕೂ ಎಲ್ಲರಿಗೂ ಅನ್ವಯಿಸುತ್ತದೆ. ಎಲ್ಲರೂ ಒಮ್ಮೆ ನಮಗೇನು ಬೇಕು ಎಂದು ಆತ್ಮಾವಲೋಕನ ಮಾಡಿಕೊಂಡರೆ ಸಾಕು… ನಮ್ಮದೇ ಎಷ್ಟೊ ಸಮಸ್ಯೆಗಳು ಪರಿಹಾರ ಕಂಡು ಬಿಡುತ್ತವೆ. ಆದರೆ ನಾವು ಅದೊಂದನ್ನು ಬಿಟ್ಟು… ಬೇರೆಲ್ಲವನ್ನೂ ಮಾಡುತ್ತೇವೆ… ಅದೇ ನಮ್ಮ ಬಹುದೊಡ್ದ ಸಮಸ್ಯೆ.. ಸತ್ಯವಾದ ಮಾತುಗಳು ಸುರೇಶ್..

  ಶ್ಯಾಮಲ

 3. KannadaBlogList ಹೇಳುತ್ತಾರೆ:

  Olleya ಕವನ, ನಿಮ್ಮ ಕವನದ ಕೊನೆಯ ಸಾಲುಗಳು ಜೀವನದ ಮೊದಲ ಸಾಲದರೆ ಮಾತ್ರ ಜೀವನ ಸುಂದರವಾಗಲು ಸಾಧ್ಯ ಅಲ್ಲವೇ… Danyavaadagu ondu olleya ಕವನke…

  • ಆಸು ಹೆಗ್ಡೆ ಹೇಳುತ್ತಾರೆ:

   ಆಸುಮನದ ಮಾತುಗಳನ್ನು ಓದಿ, ಮೆಚ್ಚಿ ಪ್ರತಿಕ್ರಿಯಿಸುವ ತಮ್ಮ ಈ ಅಭಿಮಾನಕ್ಕೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
   ಹಾಗೆಯೇ ತಮ್ಮ ಪರಿಚಯವನ್ನೂ ನೀಡಿದ್ದರೆ ಇನ್ನೂ ಸಂತಸವಾಗುತ್ತಿತ್ತು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: