ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ!

ಕಾಲಗರ್ಭದಲಿ ಮರೆಯಾಗುತಿಹುದು ಈಗ ಮತ್ತೊಂದು ವರುಷ,
ನೋವು ಇದ್ದಿದ್ದರೂ, ತಂದಿತ್ತು ನಮ್ಮ ಬಾಳಲ್ಲಿ ಬಹಳಷ್ಟು ಹರುಷ;

ಆರ್ಥಿಕ ಹಿಂಜರಿತ ಹೋಗಿ, ತೂಗತೊಡಗಿತು ಸಂತಸದ ತೊಟ್ಟಿಲು,
ವೈದ್ಯೆಯಾಗುತ್ತಿರುವ ಮಗಳು ಏರಿಹಳು ಈಗ ಎರಡನೇ ಮೆಟ್ಟಿಲು;

ಅಲ್ಲಿ ಅಮ್ಮನವರ ಆರೋಗ್ಯ ಏರುಪೇರಿಲ್ಲದೇ ಒಂದೇ ಸಮನಾಗಿದೆ,
ಸದ್ಯಕ್ಕೆ ಮನೆಯಲ್ಲಿ, ಆರೋಗ್ಯ ನೆಮ್ಮದಿ ಮನೆ ಮಾಡಿರುವಂತೆ ಇದೆ;

ನ್ಯಾಯವಾದಿ ತಮ್ಮ, ನೋಟರಿಯಾಗಿ ಮೂಡಿಸಿದ ಈ ಮನದಿ ಹೆಮ್ಮೆ,
ಮಗನಿಲ್ಲದೆನಗೆ ಮಗನಲ್ಲವೇ ಆತ, ಎಂಬ ಭಾವನೆ ನನ್ನಲ್ಲಿ ಒಮ್ಮೊಮ್ಮೆ;

ಹೊಸ ಸಂಬಂಧ ಸೇರಿಕೊಂಡಿಲ್ಲ, ಕಳಚಿಕೊಂಡವು ಒಂದೆರಡು ಸದ್ಯ,
ಸ್ನೇಹಿತರ ಸಂಖ್ಯೆ ಹೆಚ್ಚಾಗಿ, ಅದರಲ್ಲಿ ಆಪ್ತರಾದರು ಹಲವರು ಈ ಮಧ್ಯ;

ಸಮಾಜ ಲಗಾಮಿಲ್ಲದೇ, ದಿನದಿಂದ ದಿನಕ್ಕೆ ಹದಗೆಡುತ್ತಲೇ ಸಾಗುತ್ತಿದೆ,
ಭ್ರಷ್ಟಾಚಾರ ಎನ್ನುವುದೇ ರಾಜಕೀಯಕ್ಕೆ ಪರ್ಯಾಯ ಪದವಾಗಿಬಿಟ್ಟಿದೆ;

ವರುಷದ ಬಹುಪಾಲು ನಮ್ಮ ನಾಡು, ಕಳೆಯಿತು ಅರಾಜಕತೆಯಲ್ಲಿಯೇ,
ಭ್ರಷ್ಟ ರಾಜಕಾರಣಿಗಳಲ್ಲೀಗ, ದುಸ್ತರವಾಗಿದೆ ನಿಷ್ಠಾವಂತರ ಆಯ್ಕೆಯೇ;

ಕಾಂಗ್ರೇಸಿನ ಅವಿವಾಹಿತ ಗೂಳಿ, ದೇಶದುದ್ದಕ್ಕೂ ಧೂಳೆಬ್ಬಿಸಿ ಸೋತಿತು,
ದೇಶೀಯರ ದೂಷಿಸಿ, ತಾನೊಬ್ಬ ವಿದೇಶಿ ಎಂಬುದ ಸಾಬೀತು ಪಡಿಸಿತು;

ದಿಲ್ಲಿಯಲಿ ಆಟ ಆಡಿಸಲು ನಿಂತವರೂ, ಕೋಟಿ ಕೋಟಿ ಕೊಳ್ಳೆ ಹೊಡೆದರು,
ಚೀನಾದಲಿ ಚಿನ್ನದ ಬೇಟೆಯಾಡಿ ಮರಳಿದರು, ಕನ್ನಡನಾಡಿನ ಕುವರಿಯರು;

ಎಲ್ಲರದೂ ಮುಖವಾಡ, ಹೇಳುವುದೊಂದಾದರೆ ಮಾಡುವುದು ಮತ್ತೊಂದು,
ಮಾಧ್ಯಮದವರು ಗುದ್ದಿದರು ಜನರನ್ನು, ದಿನವೂ ನೀಡಿ ಸುದ್ದಿ ಹೊಸತೊಂದು;

ಸತ್ಯಾಸತ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳಲು, ಅವಕಾಶವೇ ಇಲ್ಲವಾಗಿದೆ ಇಲ್ಲಿ,
ಒಂದರ ಹಿಂದೆ ಇನ್ನೊಂದು ಸುದ್ದಿ, ಸ್ಫೋಟಗೊಳ್ಳುತ್ತಲೇ ಇರುತ್ತದೀ ನಾಡಲ್ಲಿ;

ನಿತ್ಯಾನಂದ ಸ್ವಾಮಿಯ ಕಾಮಕಾಂಡದ ಮೇಲಿಂದ ಸರಿಯಿತು ಪರದೆ ಮೆಲ್ಲಗೆ,
ಪತ್ನಿ-ಮಿತ್ರನ ಅಕ್ರಮ ಸಂಬಂಧ, ಹಾದಿಯಾಯ್ತು ಅತ್ತ ಕೋಟಿಗಟ್ಟಲೆ ಸುಲಿಗೆಗೆ;

ಕನ್ನಡ ಪತ್ರಿಕೋದ್ಯಮದಲ್ಲಿ, ಸುಂಟರಗಾಳಿಯೇ ಬೀಸಿದಂತಾಯ್ತು ಒಮ್ಮೆಗೇ,
ಓದುಗರಿಗೂ ಬೇಸರವಾಯ್ತು,  ಭಟ್ಟರ ತಂಡ ವಿಕದಿಂದ ತೆರಳಿದಾಗ ಹೊರಗೆ;

ಸುಳ್ಳು ಅಪವಾದಕ್ಕೆ ಗುರಿಯಾದ, ಬೆತ್ತಲೆ ಜಗತ್ತಿನ ಸಿಂಹ ನೋಡ ನೋಡುತ್ತಲೇ,
ನೀತಿಯ ಪಾಠ ಮಾಡುತ್ತಿದ್ದ ರವಿಯ ಕಾಮ ಕಥೆ ಬಯಲಾಗಿ, ಆತನಾದ ಬೆತ್ತಲೆ;

ಹೊಸ ವರುಷ, ಹೊಸ ಹರುಷ ತರಲಿ, ನಮ್ಮೆಲ್ಲರ ಬಾಳಿನಲ್ಲೆಂಬುದೇ ಆಶಯ,
ಭ್ರಷ್ಟರ ದುಷ್ಟರ ಅರಾಜಕತೆ ಮುಗಿದು, ಜನ ಕಾಣುವಂತಾಗಲಿ ನೆಮ್ಮದಿಯ!

*************************************

14 Responses to ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ!

 1. Bharath Kumar ಹೇಳುತ್ತಾರೆ:

  ಕಾಲಗರ್ಭ= ಹೊತ್ತಿನ ಹೊಟ್ಟೆ
  ’ವರುಷ’ದ ಬದಲು ಅಲ್ಲಿ ’ವರುಶ’ ಅಂತ ಬರೆದು ನೋಡಿ ನಿಮ್ಮ ಉಲಿಯುವಿಕೆಯಲ್ಲಿ ಏನಾದರೂ ಬೇರೆತನವಿದಿಯೇ?

 2. shamala ಹೇಳುತ್ತಾರೆ:

  ಸುರೇಶ್…
  ವರ್ಷಾವಲೋಕನ ಎಲ್ಲರಿಗಿಂತ ಮೊದಲು ಮಾಡಿಬಿಟ್ಟಿದ್ದೀರಿ. ವೈಯುಕ್ತಿಕವಾಗಿಯೂ ನಿಮ್ಮ ಕೆಲಸ ಸಮಯಕ್ಕೆ ಮೊದಲೇ ಮಾಡಿ ಮುಗಿಸಿದ್ದೀರಿ… ಇಲ್ಲಿ ಎಂದಿನಂತೆ ನಿಮ್ಮ ಸಮಯ ಪ್ರಜ್ಞೆ ಮೆರೆದಿದ್ದೀರಿ. ನಾವುಗಳೂ.. ಈಗಾದರೂ ಎಚ್ಚೆತ್ತು… ವರುಷದ ಆಗುಹೋಗುಗಳತ್ತ ಒಂದು ನೋಟ ಬೀರುವುದು ಒಳ್ಳೆಯದೆಂದು ನೆನಪಿಸಿದ್ದೀರಿ….. !!!

  ಶ್ಯಾಮಲ

 3. veda ಹೇಳುತ್ತಾರೆ:

  Hegdeyavare kavana sundaravagidhe. Varshada mukhya aguhogugalanella chokkavagi niroopisiddeeri.Hosa varsha arogya,shanthi,sukha,santoshadinda koodirali endu harisuve.

 4. Venkatesh Murthy VS ಹೇಳುತ್ತಾರೆ:

  ತು೦ಬಾ ಚೆನ್ನಾಗಿದೆ. ಇಡೀ ವರುಷದ ಸಾರಾ೦ಶವನ್ನು ಕೆಲವೇ ಸಾಲಿನಲ್ಲಿ ಚೆನ್ನಾಗಿ ವಿವರಿಸಿದ್ದೀರಿ.
  ನಿಮಗೂ ನಿಮ್ಮ ಕುಟು೦ಬದವರಿಗೂ ಮು೦ಬರುವ ನವ ವರುಷದ ಶುಭಾಷಯಗಳು.
  ಧನ್ಯವಾದಗಳು…

 5. ksraghavendranavada ಹೇಳುತ್ತಾರೆ:

  ವರುಷವೊ೦ದರ ಯಶೋಗಾಥೆ(?) ಯನ್ನು ಚೆನ್ನಾಗಿ ಎರಡೆರಡೇ ಸಾಲುಗಳಲ್ಲಿ ವಿವರಿಸಿದ್ದೀರಿ. ಆಗಮಿಸುವ ಹೊಸ ವರುಷ ನಿಮಗೂ ನಿಮ್ಮ ಕುಟು೦ಬಕ್ಕೂ ಸ೦ತಸವನ್ನೇ ನೀಡಲೆ೦ಬುದು ಈ ಕಿರಿಯನ ಹಾರೈಕೆ..
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 6. KannadaBlogList ಹೇಳುತ್ತಾರೆ:

  ನೀವು ಒಂದು ಕವನದಲ್ಲಿ ಈ ವರುಷ ನಿಮ್ಮ ವಯಕ್ತಿಕ, ರಾಜ್ಯ…. ಎಲ್ಲಾ ಘಟನೆಗಳನ್ನು ಉತ್ತಮವಾಗಿ ವಿವರಿಸಿದ್ದೀರಿ ಧನ್ಯವಾದಗಳು…

 7. Narendra Kumar.S.S ಹೇಳುತ್ತಾರೆ:

  ನಿಮ್ಮ ಪ್ರಾಸಬದ್ಧ ಕಾವ್ಯ ಮನಮುಟ್ಟುವಂತಿದೆ.
  ಮುಂದಿನ ವರುಷವೂ ಅದು ನಿರಂತರ ಹರಿದು ಬರಲಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: