ಎಲ್ಲವೂ ರೂಢಿಯಾಗುತ್ತಿದೆ…!

ಎಲ್ಲವೂ ರೂಢಿಯಾಗುತ್ತದೆ
ಇಂದಿನ ತನಕ ಏನೂ ಅಲ್ಲದ್ದು ನಾಳೆ ಜೀವಕ್ಕಿಂತ ಹೆಚ್ಚಾಗುತ್ತದೆ
ಇಂದಿನ ತನಕ ಜೀವವೇ ಆಗಿದ್ದದ್ದು ನಾಳೆ ಬರಿಯ ನೆನಪಾಗಿ ಉಳಿದು ಬಿಡುತ್ತದೆ

ಎಲ್ಲವೂ ರೂಢಿಯಾಗುತ್ತಿದೆ
ಜೊತೆಜೊತೆಗೆ ನಡೆದಿದ್ದ ಹಾದಿಯಲ್ಲೀಗ ಒಂಟಿಯಾಗಿ ಸಾಗಬೇಕಿದೆ
ದಿನವೆಲ್ಲಾ ಮಾತನಾಡುತ್ತಿದ್ದ ನಾವೀಗ ಮೌನಕ್ಕೆ ಶರಣಾಗಿ ಸುಮ್ಮನಿರಬೇಕಾಗಿದೆ

ಎಲ್ಲವೂ ರೂಢಿಯಾಗುತ್ತಿದೆ
ಬಿಟ್ಟು ಬದುಕುವುದೇ ಕಷ್ಟ ಎಂದೆಣಿಸಿದ್ದ ನಾವೂ ದೂರವಾಗಿರಬೇಕಾಗಿದೆ
ನೆನಪುಗಳು ನೋವಾಗಿ ಕಾಡುತ್ತಿದ್ದರೂ, ಆ ನೋವಿನೊಂದಿಗೇ ಬಾಳಬೇಕಾಗಿದೆ

ಎಲ್ಲವೂ ರೂಢಿಯಾಗುತ್ತಿದೆ
ಹೃದಯವನ್ನು ಕಲ್ಲಾಗಿಸಿ ಬಾಳುವುದೂ ನಮಗೀಗ ರೂಢಿಯಾಗುತ್ತಿದೆ
ಸಂಬಂಧಗಳ ಮೇಲಿನ ನಂಬಿಕೆಯ ತೊರೆದು ಬಾಳುವುದೂ ನಮಗೀಗ ರೂಢಿಯಾಗುತ್ತಿದೆ

ಎಲ್ಲವೂ ರೂಢಿಯಾಗುತ್ತಿದೆ
ಬದಲಾವಣೆಯೇ ಜಗದ ನಿಯಮ ಎಂಬ ಮಾತೆಮಗೆ ರೂಢಿಯಾಗುತ್ತಿದೆ
ಹೊಸ ಹೊಸತರ ನಡುವೆ ಹಳೆಯದನ್ನು ಕಳೆದುಕೊಳ್ಳುವುದೂ ನಮಗೀಗ ರೂಢಿಯಾಗುತ್ತಿದೆ

ಎಲ್ಲವೂ ರೂಢಿಯಾಗುತ್ತಿದೆ
ಏನೂ ಇಲ್ಲದ ಬಾಳಿನಲಿ ಬಂದ ನೀನೇ ನನ್ನ ಜೀವನವಾಗಿದ್ದಿದೆ
ಜೊತೆ ಇಲ್ಲದಿದ್ದರೂ ಒಬ್ಬರೊಳಗೊಬ್ಬರು ಇರುವೆವೆಂಬ ಭ್ರಮೆಯೊಂದಿಗೀ ಜೀವನ ಸಾಗುತ್ತಿದೆ
**************

24 Responses to ಎಲ್ಲವೂ ರೂಢಿಯಾಗುತ್ತಿದೆ…!

 1. shamala ಹೇಳುತ್ತಾರೆ:

  ಚೆನ್ನಾಗಿದೆ ಸುರೇಶ್..
  ನಿಜ ಎಲ್ಲವನ್ನೂ ಜೀವನ ಅಭ್ಯಾಸ ಮಾಡಿಸಿ ಬಿಡುತ್ತದೆ. ಅನುಭವಗಳು ಪಾಠ ಕಲಿಸುತ್ತಲೇ ಇರುತ್ತವೆ. ಎಷ್ಟು ಕಲಿತರೂ ನಾವೂ ಮತ್ತೆ ಮತ್ತೆ ಭಾವುಕರಾಗಿ ತಪ್ಪು ಮಾಡಿ ಮಾಡಿ, ಮನಸ್ಸು ಪೆಟ್ಟು ತಿಂದು ಕೊನೆಗೆ ಇಷ್ಟೇ ಅಲ್ಲವೇ ಜೀವನ ಎಂದು ಅದನ್ನೇ ಒಪ್ಪಿಕೊಂಡು, ನೋವಿನ ಜೊತೆ ಬದುಕು ಸಹ್ಯವಾಗ ತೊಡಗುತ್ತದೆ.

  ಶ್ಯಾಮಲ

 2. shivu.k ಹೇಳುತ್ತಾರೆ:

  ಚೇತನ ಬಜ್‍ನಲ್ಲಿ ಹಾಕಿದ್ದನ್ನು ನೋಡಿ ಬಂದೆ. ತುಂಬಾ ಅನುಭವದ ಕವನವೊಂದನ್ನು ಓದಿದ ಅನುಭವವಾಯಿತು..ಚೆನ್ನಾಗಿದೆ..

  • ಶಿವು,
   ಓದಿ, ಮೆಚ್ಚಿ, ಮೆಚ್ಚುಗೆಯ ಮಾತುಗಳನ್ನಾಡಿದ ತಮಗೆ ಹೃತ್ಪೂರ್ವಕ ಕೃತಜ್ಞತೆಗಳು.
   ಆಸುಮನದಲ್ಲಿನ ಮಾತುಗಳಲ್ಲಿ ನೂರಕ್ಕೆ ತೊಂಭತ್ತಕ್ಕೂ ಹೆಚ್ಚಿನವು, ಮನಸ್ಸು ಅನುಭವಿಸಿ, ಮಂಥನ ನಡೆಸಿ ಹೊರ ಬಂದವುಗಳೇ ಆಗಿವೆ.
   ಆಗಾಗ ಭೇಟಿ ನೀಡಿ, ಓದಿ ವಿಮರ್ಶಿಸಿ, ಪ್ರೋತ್ಸಾಹಿಸುತ್ತಾ ಇರಿ ಎನ್ನುವುದೇ ನನ್ನ ಕೋರಿಕೆ.

 3. mshebbar ಹೇಳುತ್ತಾರೆ:

  Can I mail this to my friends?
  -msh

 4. Bellala Gopinatha Rao ಹೇಳುತ್ತಾರೆ:

  ಹೆಗ್ಡೆಯವರೇ
  ಮಾತಿನ ಮುತ್ತುಗಳ ಚಂದದ ಹಾರ
  ಹೌದು ನಾವೆಣಿಸಿದ್ದು ನಡೆಯಲಿಲ್ಲ ಎಂದುಕೊಳ್ಳುವ ಮಾತೇ
  ಕಾಲದ ಜತೆಗೆರೂಢಿಯಾಗುತ್ತಾ ಆಗುತ್ತಾ ಸಾಗುತ್ತಿದೆ ಜೀವನ.
  ಇದುವೇ ನಮ್ಮ ಜೀವನ-ಬದುಕು
  ಈಗಂತೂ ಕನಸುಗಳನ್ನು ಕಾಣುವ ಕಾಲ ಹೋಯ್ತು ಅಂದ್ಕೊಳ್ಳುವಾಗಲೇ
  ಹೊಸ ಕನಸುಗಳು ಅರಳಿಕೊಳ್ಳುತ್ತಾ ಇದನ್ನೂ ರೂಢಿಯಾಗಿಸಿ ಬಿಟ್ಟಿವೆ
  ಪ್ರತಿ ಬೆಳಗಿನ ಜತೆ ಹೊಸ ಹೊಸ ಹೊಸತು, ಹಳೆಯ ನೆನಪಿನ ಜತೆಗೇ ರೂಡಿಯಾಗುತ್ತಿದೆ
  ಧನ್ಯವಾದಗಳು

  • ಆಸು ಹೆಗ್ಡೆ ಹೇಳುತ್ತಾರೆ:

   ಕನಸುಗಳೇ ಜೀವನವಾಗಿದ್ದುದೂ ರೂಢಿಯಾಗಿದ್ದಿದೆ
   ಕನಸುಗಳಿಲ್ಲದ ಜೀವನವೂ ರೂಢಿಯಾಗುತ್ತದೆ
   ನನಗೆ ತಮ್ಮೆಲ್ಲರ ಈ ಅಭಿಮಾನಭರಿತ ಪ್ರತಿಕ್ರಿಯೆಗಳು ರೂಢಿಯಾಗಿವೆ
   ಮನತುಂಬಿ ಧನ್ಯವಾದಗಳನರ್ಪಿಸುವುದೂ ಈಗ ರೂಢಿಯಾಗಿದೆ.

 5. Rachana ಹೇಳುತ್ತಾರೆ:

  ಕವಿತೆ ಚೆನ್ನಾಗಿ ಇದೆ ಸರ್

  ಎಲ್ಲವೂ ರೂಢಿಯಾಗುತ್ತಿದೆ
  ಬಿಟ್ಟು ಬದುಕುವುದೇ ಕಷ್ಟ ಎಂದೆಣಿಸಿದ್ದ ನಾವೂ ದೂರವಾಗಿರಬೇಕಾಗಿದೆ
  ನೆನಪುಗಳು ನೋವಾಗಿ ಕಾಡುತ್ತಿದ್ದರೂ, ಆ ನೋವಿನೊಂದಿಗೇ ಬಾಳಬೇಕಾಗಿದೆ

  ಈ ಸಾಲು ತುಂಬಾ ಇಷ್ಟವಾಗಿದೆ

 6. shashi jenny ಹೇಳುತ್ತಾರೆ:

  suresh,
  really tumbha chennagi kavithe moodide congratts yaar

 7. Chetana ಹೇಳುತ್ತಾರೆ:

  ಕವನ ಬಹಳ ಚೆನ್ನಾಗಿದೆ ಸರ್….ತುಂಬಾ ಇಷ್ಟವಾಯ್ತು ..( ನಿಮ್ಮ ಎಲ್ಲ ಕವನಗಳೂ ತುಂಬಾ ಇಷ್ಟವಾಗುತ್ತವೆ..)

 8. Santhosh Acharya ಹೇಳುತ್ತಾರೆ:

  ಏನೂ ಮಾಡಲಾಗದಿದ್ದಾಗ ಆಗುವುದು ಒಂದೇ ’ರೂಢಿ’!

 9. HEMA ಹೇಳುತ್ತಾರೆ:

  Hegdeyavare,ellavannu manasu heluthiruthade.sambandagalu iddalle iruthade.kavana anubhavisi baredanthide.
  chennagide.

 10. Rohan Shetty ಹೇಳುತ್ತಾರೆ:

  Lifeu Ashtene………

 11. Ravi ಹೇಳುತ್ತಾರೆ:

  ತುಂಬಾ ಅನುಭವಿಸಿ ಬರೆದಿರುವಂತಿದೆ ಆ ಸು ಹೆಗಡೆಯವರೇ.. ಕವನದ ಮೂಲಕ ಬಹಳ ಚೆನ್ನಾಗಿ ಹೇಳಿದ್ದಿರಿ..

 12. shashijois ಹೇಳುತ್ತಾರೆ:

  ಸೊಗಸಾಗಿದೆ ಸರ್..
  ಜೀವನವೇ ಹಾಗೇ ಅಲ್ವ!!ಕೊನೆಯ ಸಾಲುಗಳು ತುಂಬಾ ಹಿಡಿಸಿತು

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: