ಹುಚ್ಚು ಹುಡುಗಿ
ಏನೇನೋ ಕೇಳುತ್ತಿರುತ್ತಾಳೆ
ಪ್ರಶ್ನೆಗಳ ಸುರಿಮಳೆಗೈಯುತ್ತಿರುತ್ತಾಳೆ
ನನ್ನ ಬಾಯ್ಕಟ್ಟಿಸಿ ತಾನು ನಗುತ್ತಾ ಇರುತ್ತಾಳೆ!
ಹುಚ್ಚು ಹುಡುಗಿ
ವಯಸ್ಸಾಗಿಲ್ಲ ನನ್ನ ಅರ್ಧದಷ್ಟೂ
ತಲೆ ತುಂಬಾ ತುಂಬಿಕೊಂಡಂತಿದೆ ಬೆಟ್ಟದಷ್ಟು
ಹೊಗಳುತ್ತಿರುತ್ತಾಳೆ ನನ್ನನ್ನು ಅಷ್ಟೊಂದು ಇಷ್ಟಪಟ್ಟು!
ಹುಚ್ಚು ಹುಡುಗಿ
ಮನದ ನೋವ ಮರೆ ಮಾಚುತ್ತಾಳೆ
ನಗುವಿನ ಮುಖವಾಡ ಹೊತ್ತು ನಗುತ್ತಿರುತ್ತಾಳೆ
ನನ್ನ ಅರಿವಿಗೆ ತಾರದಿರಲು ಯತ್ನಿಸಿ ಸೋಲುತ್ತಿರುತ್ತಾಳೆ!
ಹುಚ್ಚು ಹುಡುಗಿ
ನನಗೇ ಪಾಠ ಮಾಡುತ್ತಿರುತ್ತಾಳೆ
ನನ್ನ ಜೀವನದ ಅನುಭವ ಏನೂ ಅಲ್ಲ ಅನ್ನುತ್ತಾಳೆ
ತನ್ನ ಮುಂದೆ ನನ್ನನ್ನು ಕಿರಿದಾಗಿಸಿ ತಾನು ಹಿರಿಯಳಾಗುತ್ತಾಳೆ!
*****************
Ello hudukide illada devara
Kallu maNNugaLa guDiyoLage
Ille iruva preeti snehagaLa
Gurutisadadenu nammoLage
Manda Gini alla nanu,
Neve Sahakarisida Gini Nanu,nimma muddina gini…
Nanna dinagalu nimma nenapinondige aarambhavaguttave.
kanasugalondige konegolluttave.
ತಮ್ಮ ಪ್ರತಿಕ್ರಿಯೆಗಳು ನವ ನವೀನ!
aa hudugi nanagi irabahuda????
Mandagini
ಇರಬಹುದು ಮಂದ ಗಿಣಿ!
Good sir
ಧನ್ಯವಾದಗಳು ವರುಣ್!
Thumba channagide
ಧನ್ಯವಾದಗಳು ಸುಪ್ರಿಯಾ!
ಸುರೇಶ್..
ಕವನ ಓದಿ, ಹುಚ್ಚು ಹುಡುಗಿ ಮತ್ತಷ್ಟು ಪ್ರಶ್ನೆಗಳ ಬಾಣವನ್ನು ನಿಮ್ಮತ್ತ ಬಿಡಲಿಲ್ಲವೇ…?
ಶ್ಯಾಮಲ
ಶ್ಯಾಮಲಾ,
ಪ್ರಶ್ನೆಗಳ ಬಾಣಗಳೇನು … ಪಟಾಕಿಗಳೇ ಅನ್ನಿ
ಕಿವಿಗಳಿಗೆ ಕರ್ಕಶವಾದರೂ ಮನಕಾನಂದವೆನ್ನಿ!
ENGURU HUDGIRA SAHAVASA MADIDDIRA,CHINNAKINTA AMULYA EE SNEHA ALL D BEST
ಶಶೀ,
ಸ್ನೇಹದಲ್ಲಿ ಮೇಲಿಲ್ಲ ಕೀಳಿಲ್ಲ
ಸ್ನೇಹದಲ್ಲಿ ಮೇಲಿಲ್ಲ ಕೀಳಿಲ್ಲ
ಸ್ನೇಹಕ್ಕೆ”Male, Female” ಎಂಬುದೂ ಇಲ್ಲ!
ಇದನರಿತವನೇ ನಿಜವಾದ ಸ್ನೇಹಿತನಾಗಬಲ್ಲ!
sogasaagide
ಧನ್ಯವಾದಗಳು!
ತುಂಬಾ ಸೊಗಸಾಗಿದೆ ಸರ್ !
ಓದಿ, ಮೆಚ್ಚಿ, ನೀಡಿದ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು ಸರ್!
ತುಂಬಾ ಚನ್ನಾಗಿದೆ ಸರ್
ಹೌದು ಆ ಹುಚ್ಚು ಹುಡುಗಿ ಯಾರು ?
ಆ ಹುಡುಗಿ ಯಾರೆಂದು ಹೇಳಿದರೆ ನಿಮಗೇನು ಲಾಭವೋ ನನಗೆ ಗೊತ್ತಿಲ್ಲ…
ಆಕೆಗೂ ನನಗೂ… ಅದರಿಂದ ನಿಜಕ್ಕೂ ನಷ್ಟ… ಇದು ನಿಮಗೂ ಗೊತ್ತಲ್ಲಾ?
ಧನ್ಯವಾದಗಳು!
ಕವನ ಅರ್ಥಪೂರ್ಣ..
ಕೃತಜ್ಞತೆಗಳು ಡಾಕ್ಟ್ರೇ!