ತನು ಚಂದನವು, ಚಂಚಲ ಮನವು…!

ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:

ಚಿತ್ರ: ಸರಸ್ವತೀ ಚಂದ್ರ
ಗಾಯಕರು: ಮುಕೇಶ್

ತನು ಚಂದನವು, ಚಂಚಲ ಮನವು
ಬಲುಮೋಹಕ ನಿನ್ನೀ ಮುಗುಳ್ನಗು
ದೋಷಿ ನಾನೆಂದು ಹಳಿಯದಿರಿ
ನಾನಾದರೆ ಹುಚ್ಚ, ಪ್ರೀತಿಯಲಿ

ನಿನ್ನ ಹುಬ್ಬು ಕಾಮನಬಿಲ್ಲಂತೆ
ರೆಪ್ಪೆಗಳಂಚಿನಲಿ ಕಾಡಿಗೆಯಂತೆ
ಹಣೆಯ ಕುಂಕುಮ ಸವಿತಾರೂಪ
ನಿನ್ನ ತುಟಿಗಳಲಿ ಈ ಬಿಸಿ ತಾಪ
ನಿನ್ನ ನೆರಳು ಸೋಕಿದರೆ ಸಾಕು 
ಬರಡಾಗಿಹ ಹೃದಯ ಅರಳುವುದು

||ತನು ಚಂದನವು ಚಂಚಲ ಮನವು||

ತನು ಸುಂದರ ಮನವೂ ಸುಂದರ
ನೀನೇ ಸೌಂದರ್ಯದ ಮೂರುತಿಯು
ಇನ್ನಾರಿಗೂ ನೀನು ಬೇಡಾದರೂ
ನನಗಿದೆ ನಿನ್ನಯ ಬಲು ಹಂಬಲವು
ಈ ಮೊದಲೇ ಪರಿ ಪರಿ ನೊಂದಿಹುದು
ನೀನೂ ನೋಯಿಸದಿರೀ  ಮನವನ್ನು

||ತನು ಚಂದನವು ಚಂಚಲ ಮನವು||
*****************

 

ಮೂಲ ಹಿಂದೀ ಸಾಹಿತ್ಯ:

Chandan Saa Badan Chanchal Chitawan
dheere Se Teraa Ye Musakaanaa
muze Dosh Naa Denaa Jagawaalon
ho Jaaoo Agar Main Deewaanaa

ye Kaam Kamaan Bhawe Teree
palako Ke Kinaare Kajaraare
maathepar Sindooree Suraj
hothhon Pe Dahakate Angaare
saayaa Bhee Jo Teraa Pad Jaaye
aabaad Ho Dil Kaa Wiraanaa

tan Bhee Sundar, Man Bhee Sundar
too Sundarataa Kee Murat Hai
kisee Aaur Ko Shaayad Kam Hogee
muze Teree Bahot Jarurat Hai
pahale Bhee Bahot Dil Tarasaa Hai
too Aaur Naa Dil Ko Tarasaanaa

Advertisements

ತನು ಚಂದನವು, ಚಂಚಲ ಮನವು…! ಗೆ 16 ಪ್ರತಿಕ್ರಿಯೆಗಳು

  1. shamala ಹೇಳುತ್ತಾರೆ:

    ಪೂರ್ತಿ ಓದಿದ ಮೇಲೇ ಶುರುವಿನ ಸಾಲುಗಳು ತುಂಬಾ ಚೆನ್ನಾಗಿವೆ ಅಂದಿದ್ದು… :-).. ಈ ಸಾಲುಗಳು ಮಾತ್ರ ಮನದಲ್ಲಿ ಅಚ್ಚೊತ್ತಿ… ಗುನುಗುವಂತೆ ಮಾಡಿವೆ…

    ಶ್ಯಾಮಲ

  2. shamala ಹೇಳುತ್ತಾರೆ:

    ಶುರುವಿನ ಸಾಲುಗಳು ತುಂಬಾ ಚೆನ್ನಾಗಿವೆ….. 🙂

    ಶ್ಯಾಮಲ

  3. ವಿ.ಆರ್.ಭಟ್ ಹೇಳುತ್ತಾರೆ:

    ಅನುವಾದ ಚೆನ್ನಾಗಿದೆ!

  4. shashi jois ಹೇಳುತ್ತಾರೆ:

    ಅಸು ಸರ್ ಹಾಡಿನ ಭಾವಾನುವಾದ ಸೊಗಸಾಗಿದೆ….
    ನನ್ನ ಮೆಚ್ಚಿನ ಹಾಡು ಕೂಡ ಹೌದು

  5. sitaram ಹೇಳುತ್ತಾರೆ:

    tumbaa chennaagide anuvaada.

  6. H. Anandarama Shastry ಹೇಳುತ್ತಾರೆ:

    ನನ್ನ ಅಚ್ಚುಮೆಚ್ಚಿನ ಗೀತೆಯ ಚೊಕ್ಕ ಭಾವಾನುವಾದ. ಆಸು ಅವರಿಗೆ ಕಾವ್ಯಭಾಷೆಯ ಹಿಡಿತ ಸಿಕ್ಕುತ್ತಿದೆ. ಇನ್ನು ಮುಂದೆ ನಾನು ಮೂಲ ಗೀತೆಯೊಂದಿಗೆ ಈ ಭಾವಾನುವಾದದ ಕೆಲ ಸಾಲುಗಳನ್ನೂ ಗುನುಗಿಕೊಳ್ಳುತ್ತೇನೇನೋ.

  7. ksraghavendranavada ಹೇಳುತ್ತಾರೆ:

    ಚೆ೦ದದ ಭಾವಾನುವಾದ! ಖುಷಿ ಕೊಟ್ಟ ಸಾಲುಗಳು…
    ಆರ೦ಭದ ಸಾಲು ಸೊಗಸಾಗಿದೆ..
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: