ಪ್ರಭಾವಿತ ಸಾಹಿತ್ಯ ಕೃಷಿ…!

ಕತೆ ಕವಿತೆ ಕಾವ್ಯವೆಂಬ ಸಾಹಿತ್ಯ ಕೃಷಿಯೆಂಬುದು
ವಾಹನ ಚಲಾಯಿಸಿದಂಥೆ ಎಂದೆಂಬ ಮಾತುಗಳನ್ನು ಕೇಳಿರುವೆನು ನಾನು

ವಾಹನ ಚಲಾಯಿಸಲು ತರಬೇತಿ ಪಡೆದರಷ್ಟೇ
ಉತ್ತಮ ಚಾಲಕರಾಗಬಲ್ಲರು ಎಂದೆಂಬ ಉದಾಹರಣೆಗೂ ಕಿವಿಯಾದೆ ನಾನು

ಅನ್ಯರು ಬರೆದುದೆಲ್ಲವ ಓದುತ್ತಾ ಇದ್ದು ಸಾಹಿತ್ಯ ಕೃಷಿ
ನಡೆಸಿದರಷ್ಟೇ ಉತ್ತಮ ಚಾಲಕರಂಥೆ ಉತ್ತಮ ಬರಹಗಾರರಾಗಬಲ್ಲರಂತೆ

ರಸ್ತೆ ಬದಿಯಲಿ ನಿಂತು ಓಡುವ ವಾಹನಗಳನ್ನು ನೋಡುತ್ತಾ
ವಾಹನ ಚಲಾಯಿಸಲು ಕಲಿಯಲಾದೀತೇ ಎಂಬುದೇ ನನ್ನನ್ನು ಕಾಡುವ ಚಿಂತೆ

ವಾಹನ ಚಲಾಯಿಸಲು ತರಬೇತಿ ಪಡೆದರೆ ತಪ್ಪಲ್ಲ ಬಿಡಿ
ಆದರೆ ತರಬೇತಿ ಪಡೆಯದವರೂ ಸುಕ್ಷೇಮವಾಗಿ ವಾಹನ ಚಲಾಯಿಸಬಲ್ಲರಲ್ಲಾ?

ಸಾಹಿತ್ಯ ಕೃಷಿಗೂ ತರಬೇತಿ ಪಡೆದರೆ ನಿಜಕ್ಕೂ ಶ್ರೇಷ್ಟ
ಆದರೆ ತರಬೇತಿ ಪಡೆಯದವರ ಸೃಜನಶೀಲ ಬರವಣಿಗೆ ಕೀಳೆಂದೂ ಅಲ್ಲವೇ ಅಲ್ಲ

ಅವರಿವರ ಓದಿ ಪ್ರಭಾವಿತಗೊಂಡು ಬರೆದರಷ್ಟೇ ಸಾಹಿತ್ಯ
ತನ್ನ ಮಟ್ಟವನ್ನು ಏರಿಸಿಕೊಂಡೀತು ಎಂಬ ಮಾತು ನಿಜದಿ ಹಾಸ್ಯಾಸ್ಪದವೇ ಸರಿ

ಅವರಿವರ ಸಾಹಿತ್ಯದ ಪ್ರಭಾವಕ್ಕೆ ಒಡ್ಡದೇ ತಮ್ಮದೇ ಛಾಪು
ಮೂಡಿಸಿ ಹೋದವರೇ ಈ ಕ್ಷೇತ್ರದಲಿ ದಿಗ್ಗಜರೆನಿಸಿಕೊಂಡಿಹರೆಂಬುದೂ ಅಲ್ಲವೇ ಸರಿ?
***********

4 Responses to ಪ್ರಭಾವಿತ ಸಾಹಿತ್ಯ ಕೃಷಿ…!

 1. ravindranath ಹೇಳುತ್ತಾರೆ:

  ಈ ಲೇಖನವನ್ನು ನಿಮ್ಮನ್ನು ಉದ್ದೇಷಿಸಿ ಬರೆದಿದ್ದಂತೆ ಇದೆ.
  http://navilugari.blogspot.com/2011/01/blog-post.html
  ಯಾಕೆಂದರೆ ಕೆಲ ತಿಂಗಳು ಗಳ ಹಿಂದೆ ಸಂಪದ ದಲ್ಲಿ ನೀವು ನಡೆಸಿದ ಜಟಾಪಟಿ ಬಗ್ಗೆ negative ಆಗಿ ಕೆಲವರು ಯೋಚಿಸುತಿದ್ದಾರೆ ಅಂತ ಅನ್ನಿಸುತ್ತಿದೆ. ಸಂಪದ ದಲ್ಲಿ ತಾವೇಮಾಡರೇಟರ್ ಅನ್ನುವ ಹಾಗೆ ವರ್ತಿಸುತಿದ್ದೀರಿ ಅನ್ನುವ ಆರೋಪವಿದೆ ಅದು ನಿಜವೆ.

  • ಆಸು ಹೆಗ್ಡೆ ಹೇಳುತ್ತಾರೆ:

   ರವೀಂದ್ರನಾಥ್,

   ಇದು ಸದ್ಯ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಹಿರಿಯ ಪತ್ರಕರ್ತನೋರ್ವನ ಬಗ್ಗೆ ಬರೆದ ಬರಹ ಅನ್ನುವುದು ಓದಿದ ಎಲ್ಲರಿಗೂ ಅರಿವಾಗುವಂತಿದೆ. ಇನ್ನೊಮ್ಮೆ ಓದಿ ನೋಡಿ.

   ಅಲ್ಲದೇ, ನಾನು ಸಂಪದದ ಮಾಡರೇಟರ್ ಅಲ್ಲ.

   ವಾದ ವಿವಾದಗಳು, ಅಪವಾದಗಳು, ಎಲ್ಲವೂ ಅಲ್ಲಿಗಲ್ಲಿಗೇ ಅಷ್ಟೇ.

   ಅವೆಲ್ಲವನ್ನೂ ನಾನು ನನ್ನ ತಲೆಯಲ್ಲಿ ತುಂಬಿಕೊಂಡು ನನ್ನ ತಲೆಭಾರ ಮಾಡಿಕೊಂಡು ಬಾಳುವವನಲ್ಲ.

   ಅಪವಾದಗಳನ್ನು ವಿಶ್ಲೇಷಿಸಿ ನಿಜವೇ ಅಥವಾ ಸುಳ್ಳೆ ಎಂದು ನಿಮ್ಮಂಥ ಓದುಗರೇ ತಿಳಿಸಿದರೆ ಒಳ್ಲೆಯದು.

   ಇಲ್ಲಿನ ಪುಟಗಳಿಗೆ ಸಂಬಂಧಿಸದ ಪ್ರತಿಕ್ರಿಯೆಗಳನ್ನು ಪ್ರಕಟಿಸುವುದಿಲ್ಲ ಎಂದಿದ್ದರೂ ತಮ್ಮ ತಪ್ಪು ಗ್ರಹಿಕೆಯನ್ನು ತೊಲಗಿಸಲು ಪ್ರತಿಕ್ರಿಯೆ ನೀಡಬೇಕಾಯ್ತು.

   ತಾವು ನೀಡಿರುವ ಮಿಂಚಂಚೆ ವಿಳಾಸ ಅಸ್ಥಿತ್ವದಲ್ಲಿ ಇಲ್ಲ ಅನ್ನುವ ಸಂದೇಶ ಬಂದಿದೆ.

   ಧನ್ಯವಾದಗಳು.

 2. H. Anandarama Shastry ಹೇಳುತ್ತಾರೆ:

  ’…ಅಲ್ಲವೇ ಸರಿ?’
  ಸರಿಯಾದ ಮಾತೇ ಹೇಳಿದಿರಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: