ನಮಗಿಷ್ಟು ಶಕ್ತಿಯ ನೀಡು ಓ ಧಾತಾ…!

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ಅಪರಾಧಗಳಿಂದ ಆವರಿಸಿಕೊಂಡು ಅಸಹಾಯಕನಾಗಿರುವ ಮನುಜನಿಗೆ ಉಸಿಗಟ್ಟಿಸುವಂತಿದೆ
ಹೆಚ್ಚುತಲೇ ಇರುವ ಪಾಪದ ಭಾರವನ್ನು ಹೊತ್ತ ಈ ಭೂಮಿ ಅದು ಹೇಗೋ ಇನ್ನೂ ಉಳಿದಿದೆ
ಆ ಎಲ್ಲಾ ಭಾರವನ್ನೂ ನೀನೇ ಹೊತ್ತು, ನಿನ್ನ ಸೃಷ್ಟಿಯನ್ನು ಈಗ ನೀನೇ ಕಾಪಾಡಿಕೊಳ್ಳಬೇಕಿದೆ
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…

ಅಂಧಕಾರದಲ್ಲಿರುವ ನಮಗೆ ಬೆಳಕ ನೀಡು ದೇವಾ, ವೈರತ್ವದಲಿ ನಮ್ಮನ್ನೇ ಕಳೆದುಕೊಳ್ಳದಂತೆ
ನಮ್ಮ ಅಪರಾಧಗಳಿಗೆ ಶಿಕ್ಷೆ ಅನುಭವಿಸಲೂ ಸಿದ್ಧ, ಸಾವೇ ನಿರ್ಧರಿತವಾದರೂ ಸಂತೋಷವಂತೆ
ಕಳೆದ ನಿನ್ನೆಗಳು ಮತ್ತೆ ಮರುಕಳಿಸದಿರಲಿ, ಬರುವ ಎಲ್ಲಾ ನಾಳೆಗಳು ನಿನ್ನೆಗಳಂತಿಲ್ಲದಿರಲಂತೆ
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…

ಜ್ಞಾನದ ಬೆಳಕನ್ನು ನೀಡು ನೀನು ನಮಗೆ, ಅಜ್ಞಾನದ ಕತ್ತಲ ದೂರ ಸರಿಸುವಂತೆ
ನಮಗೆ ಒಂದೊಳ್ಳೆಯ ಜೀವನವ ನೀಡು, ಕೆಟ್ಟದ್ದಲ್ಲೆದ್ದರಿಂದ ಬಚಾವಾಗಿ ಇರುವಂತೆ
ಮನಗಳಲ್ಲಿ ಹಗೆಯ ಭಾವ ಮೂಡದಂತೆ, ಯಾರಿಗಾರ ಮೇಲೂ ವೈರತ್ವವಿರದಂತೆ,
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…

ನಮಗೇನು ದೊರೆತಿದೆ ಎಂದು ಯೋಚಿಸದೇ, ನಾವೇನನ್ನು ಅರ್ಪಿಸಿದ್ದೇವೆ ಎಂದು ಯೋಚಿಸುವಂತೆ
ಎಲ್ಲರಿಗೂ ಸಂತಸದ ಸುಮಗಳನು ಹಂಚುತ್ತಾ, ಎಲ್ಲರ ಜೀವನವನ್ನೂ ಮಧುವನವನ್ನಾಗಿಸುವಂತೆ
ನಿನ್ನ ಕರುಣಾರಸವನ್ನು ನೀ ಹರಿಯಬಿಡು, ಪ್ರತೀ ಮನದ ಮೂಲೆ ಮೂಲೆಯೂ ಪಾವನವಾಗುವಂತೆ
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ,  ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…

*****

9 Responses to ನಮಗಿಷ್ಟು ಶಕ್ತಿಯ ನೀಡು ಓ ಧಾತಾ…!

 1. veda ಹೇಳುತ್ತಾರೆ:

  Hegdeyavare
  Idannu odhida thakshana.Thande nee needu ba shakthi manasige haadu gnapakakke banthu.
  chendada kavanada olleya anuvada.Heege inashtu ,mathashtu sogasagi bareyuva shakthi nimage dorakali.

 2. ksraghavendranavada ಹೇಳುತ್ತಾರೆ:

  “ದೋ ಆ೦ಖೇ ಬಾರಾ ಹಾತ್“ ಚಿತ್ರದಲ್ಲಿ ಇದನ್ನೇ ಹೋಲುವ ಒ೦ದು ಗೀತೆಯಿರುವ ನೆನಪು. ನಾನು ಬಹಳ ಇಷ್ಟಪಡುವ ಪ್ರಾರ್ಥನಾ ಗೀತೆಗಳಲ್ಲಿ ಇದೂ ಒ೦ದು.
  ಚೆ೦ದದ ಅನುವಾದ.ಖುಷಿ ಕೊಟ್ಟಿತು.ಮೂಲ ಗೀತೆಯ ಸೊಗಸೂ ಅಷ್ಟೇ! ಯಾರನ್ನೂ ಭಾವಪರ ವಶರನ್ನಾಗಿಸದೇ ಇರದು.ಕನ್ನಡದಲ್ಲಿ ಇದನ್ನೇ ಒ೦ದು ಪ್ರಾರ್ಥನಾಗೀತೆಯಾಗಿ ಬಳಸ ಬಹುದು. ನನ್ನ ಮಗನಿಗೆ ಇದನ್ನು, ಮೂಲರಾಗದ ಧಾಟಿಯಲ್ಲಿಯೇ ಹೇಳಿಕೊಡಲು ಇದರ ಒ೦ದು ಕಾಪಿ ತೆಗೆದುಕೊಳ್ಳಲು ಅನುಮತಿಯಿದೆಯೇ?
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  • ಆಸು ಹೆಗ್ಡೆ ಹೇಳುತ್ತಾರೆ:

   ರಾಘವೇಂದ್ರ,
   ತಮ್ಮ ಮೆಚ್ಚುಗೆಯ ನುಡಿಗಳಿಗಾಗಿ ಧನ್ಯವಾದಗಳು.
   ನೀವು “ಕಾಪಿ” ತೆಗೆದುಕೊಳ್ಳಲು ನಾನೇಕೆ ಅಭ್ಯಂತರ ವ್ಯಕ್ತಪಡಿಸಲಿ?
   ನೀವು “ಕಾಪಿ” ತೆಗೆದುಕೊಂಡರೆ ನನ್ನ ಮನೆ ಮೇಲೆ “ರೈಡ್” ಆಗುವ ಸಾಧ್ಯತೆಗಳು ಇಲ್ಲ ತಾನೇ?
   🙂

 3. vijayashree ಹೇಳುತ್ತಾರೆ:

  tejasviniyavara buzz nalli eegashte ee nimma bhaavaanuvaada nodtaa idde..!

  nice.. 8ne taragati hindi pustakadalli ee kavite odidde.. tumbaa ishtavaagittu..

  thanks

 4. H. Anandarama Shastry ಹೇಳುತ್ತಾರೆ:

  इतनी शक्ती हमे देना दाता मन का विश्वास कमजोर हो ना
  ಭಾವಪೂರ್ಣ ಕೃತಿ; ಮೂಲವೂ, ನಿಮ್ಮದೂ ಎರಡೂ. ಭೇಷ್!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: