ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ದುರ್ದೈವಿ!

ಆಳು ಕಾಳುಗಳಿದ್ದೂ, ಇನ್ನಾವ ಆಳುವವರೂ, ಮಾಡಿರದ ಮಹತ್ಕಾರ್ಯ
ಡಾ. ಮೋಹನ ಆಳ್ವರು ಮಾಡಿ ತೋರಿಸುತ್ತಿದ್ದಾರಲ್ಲಿ ಕನ್ನಡದ ಕೈಂಕರ್ಯ

ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡದ ಸಿರಿಯೆಮ್ಮ ಮೈಮನ ತುಂಬುವುದು
ರೋಮಾಂಚನಗೊಳಿಸುವ ಹೊಸ ಹೊಸ ಅನುಭವ ನಮಗಾಗುವುದು

ಮೂಡಬಿದರೆಯ ವಿದ್ಯಾಗಿರಿಗೆ ಕಾಲಿಟ್ಟ ಕ್ಷಣದಿಂದ ಭಾವನಾ ಲೋಕದಲ್ಲಿ
ತಂತಾನೇ ಸಾಗಿ ಭಾವ ಬಂಧನದಲ್ಲಿ ಬಂಧಿಯಾಗುವರು ಎಲ್ಲರೂ ಅಲ್ಲಿ

ಮೂರು ದಿನಗಳಲ್ಲಿ ಹತ್ತಿಪ್ಪತ್ತು ಗ್ರಂಥಗಳ ಓದಿದಂತಹ ಅನುಭವ ನಮಗೆ
ಯಾವುದೋ ಸೆಳೆತಕ್ಕೊಳಗಾಗಿ ಎತ್ತಲೋ ಸಾಗುತ್ತಿರುವನುಭವ ನಮಗೆ

ಕರಾವಳಿಯ ಕಲೆಗಳಾದ ಯಕ್ಷಗಾನ, ಭೂತಾರಾಧನೆ, ಡೋಲು ವಾದನ
ಇವೆಲ್ಲದರ ನಡುವಿನ ಸಾಹಿತ್ಯ ಲೋಕದಲ್ಲಿ ಅರಳುವುದು ಅಲ್ಲಿ ಎಲ್ಲರ ಮನ

ಯಾವುದೂ ಅತಿಯಲ್ಲ ಯಾವುದಕ್ಕೂ ಮಿತಿಯಿಲ್ಲ ಅನ್ನುವ ವಿಶಿಷ್ಟ ಶೈಲಿಯಲಿ
ಸಂಯೋಜನೆಗೊಂಡ ಈ ಹಬ್ಬ ಬೇರೆ ಎಲ್ಲೂ ನಡೆದಿರಲಾರದು ಈ ನಾಡಿನಲಿ

ಅಚ್ಚುಕಟ್ಟಿನ ನಿರ್ವಹಣೆಯೇ ಎಲ್ಲಾ  ಕಾರ್ಯಕ್ರಮಗಳಲ್ಲೂ ಪ್ರಮುಖಾಕರ್ಷಣೆ
ಎಲ್ಲೂ ಯಾರ ಮನದಲ್ಲೂ ಬೇಸರ ಮೂಡಿಸದ ತೆರದಿ, ಇದೆ ಸಂಯೋಜನೆ

ನೂರು ರೂಪಾಯಿಗಳಿಗೆ ಮೂರು ದಿನವೂ ವಾಹನ ವಸತಿ ಊಟೋಪಚಾರ
ಆ ಮೂರು ದಿನಗಳಲ್ಲೂ ಅಲ್ಲಿ ಯಾರೂ ತೋರಿದ್ದೇ ಇಲ್ಲ ಕಿಂಚಿತ್ತೂ ತಿರಸ್ಕಾರ

ಜೋಗವ ಮರೆತರೂ ಪರವಾಗಿಲ್ಲ, ಆಳ್ವಾಸ್ ನುಡಿಸಿರಿಯಲಿ ಭಾಗಿಯಾಗಿ ಬನ್ನಿ
ಆಳ್ವಾಸ್ ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ನಿಜಕ್ಕೂ ದುರ್ದೈವಿಯೇ ಅನ್ನಿ
********

7 Responses to ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ದುರ್ದೈವಿ!

 1. ವಂಟಿಮಾರು ಮಧುಸೂದನ ಹೇಳುತ್ತಾರೆ:

  ಹುಂ… ನಿಮ್ಮ ಆಸನದ ಮೇಲೆ ಕುಳಿತ ಮೇಲೆ
  ಆನುಮನಕೆ ಬಂತು ಕವನ ಬರೆಯುವ ಭಾವದ ಅಲೆ

  ಚೆನ್ನಾಗಿ ಬರೆದಿದ್ದೀರಿ, ನುಡಿಸಿರಿಯ ಸಾರಾಂಶ ಮೂಡಿಬಂದಿದೆ.

 2. shamala ಹೇಳುತ್ತಾರೆ:

  ಸುರೇಶ್…
  ನಿಮ್ಮ ಮಾತುಗಳನ್ನು ಓದಿ.. ನಿಜಕ್ಕೂ ಅಮೂಲ್ಯವಾದದ್ದು ಕಳೆದುಕೊಂಡೆನೇನೋ ಅನ್ನಿಸಿ ಉದಾಸ ಭಾವ ಆವರಿಸಿತು. ನಾನೂ ಮುಂದಿನ ವರ್ಷದವರೆಗೆ ಕಾಯದೇ ಬೇರೆ ದಾರಿಯೇ ಇಲ್ಲ.. ನೋಡೋಣ ಮುಂದಿನ ವರ್ಷಕ್ಕೆ ಏನಾಗಿರತ್ತೆಂದು. ಭಾಗವಹಿಸಬೇಕೆಂಬ ಆಸೆಯ ಪುಟ್ಟ ಸಸಿಯನ್ನಂತೂ ನೀವು ನೆಟ್ಟಿದ್ದೀರಿ… ಮರವಾಗುವುದೇ.. ಹೂ ಬಿಡುವುದೇ… ಕಾಯ್ದು ನೋಡೋಣ.. 🙂

  ಶ್ಯಾಮಲ

 3. ksraghavendranavada ಹೇಳುತ್ತಾರೆ:

  ಎರಡು ವರ್ಷದ ಹಿ೦ದೆ ನಾನು ‘ನುಡಿಸಿರಿ‘ಗೆ ಹೋಗಿದ್ದೆ. ಕೇವಲ ಒ೦ದು ದಿನ ಮಾತ್ರ ತ೦ಗಿದ್ದೆ. ಆ ನ೦ತರ ನನ್ನಲ್ಲಿ ಮೂಡಿದ ಅನಿಸಿಕೆ- ಆಳ್ವರ ನುಡಿಸಿರಿಯ ಮು೦ದೆ ನಮ್ಮ ಸಾಹಿತ್ಯ ಸಮ್ಮೇಳನವೂ ನಾಚಬೇಕು! ಅವರ ಸ೦ಘಟನಾ ಸಾಮರ್ಥ್ಯದ ಮು೦ದೆ ಎ೦ಥವರೂ ತಲೆ ತಗ್ಗಿಸಬೇಕು.
  ಕಾರಣಾ೦ತರಗಳಿ೦ದ ನನಗೆ ಈ ವರ್ಷ ಪಾಲ್ಗೊಳ್ಳಲಾಗಿಲ್ಲ.ಆರೋಗ್ಯವೂ ಹಠಾತ್ತನೆ ಕೈಕೊಟ್ಟಿತು. ಮು೦ದಿನ ವರುಷದ ವರೆಗೆ ಕಾಯದೇ ವಿಧಿಯಿಲ್ಲ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: