ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ!

 

ಇನ್ನೊಂದು ಹಿಂದೀ ಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.

ಚಿತ್ರ: ಮಾಸೂಮ್ (೧೯೮೩)
ನಿರ್ದೇಶಕ: ಶೇಖರ್ ಕಪೂರ್
ಸಾಹಿತ್ಯ: ಗುಲ್ಝಾರ್
ಸಂಗೀತ: ರಾಹುಲ್ ದೇವ್ ಬರ್ಮನ್
ಹಾಡಿದವರು: ಅನೂಪ್ ಘೋಶಾಲ್

ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ
ಆಚ್ಚರಿಗೊಂಡಿಹೆನು ನಾನು
ಆಚ್ಚರಿಗೊಂಡಿಹೆನು ನಾನು

ನಿನ್ನ ಮುಗ್ಧ ಪ್ರಶ್ನೆಗಳಿಂದ
ನಾ ಸೋತುಹೋಗಿಹೆನು
ನಿಜಕೂ ನಾ ಸೋತುಹೋಗಿಹೆನು

ಯೋಚಿಸಿರಲೇ ಇಲ್ಲ, ಜೀವಿಸಲು ನೋವುಗಳ ಹೊರೆ ಹೊರಬೇಕಾದೀತೆಂದು
ನಕ್ಕರೆ, ಆ ನಗುವಿನ ಋಣವನ್ನೂ ತೀರಿಸಬೇಕಾದೀತೆಂದು
ನಕ್ಕಾಗಲೆಲ್ಲಾ ಅನಿಸುತ್ತಿದೆ, ಈ ತುಟಿಗಳ ಮೇಲೆ ಋಣಭಾರ ಹೊತ್ತಿರುವೆನೆಂದು

ಇಂದು ಈ ಕಂಗಳು ತುಂಬಿವೆಯಾದರೆ ಹನಿಗಳ ಮಳೆಯಾಗಬಹುದು
ನಾಳೆ ಈ ಕಂಗಳು ಇವುಗಳ ನಿರೀಕ್ಷೆಯಲ್ಲಿಯೇ ಕಾಯುತಿರಬಹುದು
ಅದೆಲ್ಲಿ ಕಾಣೆಯಾಯ್ತೋ
ಅದೆಲ್ಲಿ ಕಳೆದುಹೋಯ್ತೋ
ಕಣ್ಣೀರ ಒಂದು ಹನಿಯ ನಾ ಬಚ್ಚಿಟ್ಟಿದ್ದೆನಲ್ಲಾ …

ಜೀವನದ ನೋವುಗಳು ಅರ್ಥೈಸಿದವೆನಗೆ ಹೊಸ ಸಂಬಂಧಗಳನ್ನು
ಸುಡುಬಿಸಿಲಿನಲ್ಲಿ ಸಿಕ್ಕವರೂ ನೀಡಿದರು ನನಗೆ ತಂಪಾದ ನೆರಳನ್ನು

ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ
ಆಚ್ಚರಿಗೊಂಡಿಹೆನು ನಾನು
ಆಚ್ಚರಿಗೊಂಡಿಹೆನು ನಾನು

ನಿನ್ನ ಮುಗ್ಧ ಪ್ರಶ್ನೆಗಳಿಂದ
ನಾ ಸೋತುಹೋಗಿಹೆನು
ನಿಜಕೂ ನಾ ಸೋತುಹೋಗಿಹೆನು
******************

ಮೂಲ ಸಾಹಿತ್ಯ:
tujhase naaraaz nahi zindagi,
hairaan hoon main o hairaan hoon main
tere masoom savalon se pareshaan hooN main o pareshaan hoon main

jeene ke liye socha hi na tha, dard sambhalane honge
muskuraoon to, muskurane ke karz utaarne honge
muskuraoon kabhi to lagata hai jaise hontonn pe karz rakhaa hai
tujhase …

aaj agar bhar ayi hai, boondein baras jaayengi
kal kya pata inke liye aakhen taras jayengi
jaane kahan gum kahan khoya ek aansu chhupake rakha tha
tujhase …

zindagi tere gum ne hamain rishte naye samajhaye
mile jo hamain dhoop main mile chhaanv ke thande saaye
o tujhase …

4 Responses to ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ!

  1. H. Anandarama Shastry ಹೇಳುತ್ತಾರೆ:

    ಯಥಾನುವಾದ ಅಥವಾ ಯಥಾ ಭಾವಾನುವಾದ ಇದಲ್ಲ.
    ಒಂದಿಷ್ಟು ಸ್ವಾತಂತ್ರ್ಯ ತೆಗೆದುಕೊಂಡಿದ್ದೀರಿ. ಹಾಗಾಗಿ ನಿಮ್ಮತನವೂ ವ್ಯಕ್ತವಾಗಿದೆ.
    ಓದಿ ಮನದುಂಬಿತು.

    • ಹೂಂ.. ನಿಮ್ಮ ಮಾತು ನಿಜ.
      ಭಾಷಾನುವಾದ ಅಲ್ಲದೇ ಇರುವಾಗ ಸ್ವಲ್ಪ ನಮ್ಮತನವನ್ನು ಸೇರಿಸಿ ಉಳಿಸಿಕೊಂಡರೆ ಮೂಲ ಭಾವಕ್ಕೆ ಅನ್ಯಾಯ ಮಾಡಿದಂತಾಗದು ಎನ್ನುವ ಅನಿಸಿಕೆಯೊಂದಿಗೆ, ಆ ಸ್ವಾತಂತ್ರ್ಯವನ್ನು ಬಳಸಿಕೊಂಡೆ.
      ತಮ್ಮ ಮಾತುಗಳಿಗೆ ಹೃತ್ಪೂರ್ವಕ ಅಭಿವಂದನೆಗಳು.

  2. ksraghavendranavada ಹೇಳುತ್ತಾರೆ:

    ಭಾವಾನುವಾದ ಸೊಗಸಾಗಿದೆ.ಭಾವಪೂರ್ಣವಾಗಿದೆ.
    >>ಯೋಚಿಸಿರಲೇ ಇಲ್ಲ, ಜೀವಿಸಲು ನೋವುಗಳ ಹೊರೆ ಹೊರಬೇಕಾದೀತೆಂದು
    ನಕ್ಕರೆ, ಆ ನಗುವಿನ ಋಣವನ್ನೂ ತೀರಿಸಬೇಕಾದೀತೆಂದು
    ನಕ್ಕಾಗಲೆಲ್ಲಾ ಅನಿಸುತ್ತಿದೆ, ಈ ತುಟಿಗಳ ಮೇಲೆ ಋಣಭಾರ ಹೊತ್ತಿರುವೆನೆಂದು
    ಇಂದು ಈ ಕಂಗಳು ತುಂಬಿವೆಯಾದರೆ ಹನಿಗಳ ಮಳೆಯಾಗಬಹುದು
    ನಾಳೆ ಈ ಕಂಗಳು ಇವುಗಳ ನಿರೀಕ್ಷೆಯಲ್ಲಿಯೇ ಕಾಯುತಿರಬಹುದು
    ಅದೆಲ್ಲಿ ಕಾಣೆಯಾಯ್ತೋ
    ಅದೆಲ್ಲಿ ಕಳೆದುಹೋಯ್ತೋ
    ಕಣ್ಣೀರ ಒಂದು ಹನಿಯ ನಾ ಬಚ್ಚಿಟ್ಟಿದ್ದೆನಲ್ಲಾ …<<
    ಸಾಲುಗಳನ್ನು ಓದುವಾಗ ಕ೦ಗಳು ಹನಿಗೂಡಿದವು.ಹೃದಯ ಆರ್ದ್ರತೆಯಿ೦ದ ತು೦ಬಿತು.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: