ನಾವು ಎಂಬ ಭಾವ ಮೂಡಿಸುವ ಸಂದೇಶಗಳು…

ನಾನು,
ನನ್ನವರು
ಎಂದುಕೊಂಡ
ಅಷ್ಟೂ ಮಂದಿಗೆ,
ಪ್ರತಿ ದಿನ
ಶುಭೋದಯದ,
ಶುಭರಾತ್ರಿಯ,
ಪುಟ್ಟ ಪುಟ್ಟ
ಸಂದೇಶಗಳನ್ನು
ರವಾನಿಸಿದರಷ್ಟೇ
ನನಗೆ ನೆಮ್ಮದಿ;

ಆ ಅಷ್ಟೂ
ಮಂದಿಯ
ಮೊಗಗಳಲ್ಲಿ
ಹುಸಿಯಾದರೂ
ಒಂದು ನಗು
ಮೂಡಿಸಿದ,
ಜೊತೆಗೇ
ಅವರಿಗೆಲ್ಲಾ
ನನ್ನ ನೆನಪು
ಮಾಡಿಸಿದ
ಸಂತೃಪ್ತಿ ನಿಜದಿ ;

ಸಂದೇಶಗಳ
ಆಯ್ಕೆಯ ಕೆಲಸ
ಸುಲಭದ್ದೇನಲ್ಲ
ಅವರಿವರ
ಸಂದೇಶಗಳನ್ನು
ಇದ್ದ ಹಾಗೆಯೇ
ನಾನು ಮತ್ತೆ
ರವಾನಿಸಿದರೆ
ಅವುಗಳಲ್ಲಿ
ನಿಜವಾಗಿಯೂ
ನನ್ನತನವಿರದು;

ಓದುವವನನ್ನು
ಗುರಿಯಾಗಿಸಿ
ಹೇಳುವಂತಹ
ಉಪದೇಶದ
ಮಾತಾಗಿ ಅಲ್ಲ,
ನಾವು ಎಂಬ
ಭಾವ ಮೂಡಿಸಿ
ನಮಗೆ ನಾವೇ
ಹೇಳುವಂತಾಗಿಸಿ
ರವಾನಿಸದಿರೆ
ನೆಮ್ಮದಿಯಿರದು!
********

5 Responses to ನಾವು ಎಂಬ ಭಾವ ಮೂಡಿಸುವ ಸಂದೇಶಗಳು…

  1. ksraghavendranavada ಹೇಳುತ್ತಾರೆ:

    ಓದುವವನನ್ನು
    ಗುರಿಯಾಗಿಸಿ
    ಹೇಳುವಂತಹ
    ಉಪದೇಶದ
    ಮಾತಾಗಿ ಅಲ್ಲ,
    ನಾವು ಎಂಬ
    ಭಾವ ಮೂಡಿಸಿ
    ನಮಗೆ ನಾವೇ
    ಹೇಳುವಂತಾಗಿಸಿ
    ರವಾನಿಸದಿರೆ
    ನೆಮ್ಮದಿಯಿರದು!
    ಸದಾ ಮನನೀಯ ಸಾಲುಗಳು.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

  2. santhosh acharya ಹೇಳುತ್ತಾರೆ:

    ನಾನು ಹೇಳುವುದನ್ನು ಮೊದಲು ನಾವು ಒಪ್ಪಬೇಕು ಎಂಬರ್ಥದ ನಿಮ್ಮೀ ಕವಿತೆ ಇಷ್ಟವಾಯಿತು

  3. ksraghavendranavada ಹೇಳುತ್ತಾರೆ:

    ಇದರ ಅನುಭವ ನನಗಾಗಿದೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: