ಆಕೆ ಅಮ್ಮಳಾಗಿಹಳು!

ನನ್ನ ಕಣ್ಮುಂದೆ ನುಡಿ ನಡೆಯ ಕಲಿತಿದ್ದವಳು,
ಚಿತ್ರ ಬಿಡಿಸಿ ತಂದು ನನಗೆ ಒಪ್ಪಿಸುತ್ತಿದ್ದವಳು,
ನನ್ನಿಂದ ಕೈಹಿಡಿಸಿಕೊಂಡು ಬರೆಯ ಕಲಿತ್ತಿದ್ದವಳು,
ತನ್ನ ನೃತ್ಯಕ್ಕೆ ನನ್ನನ್ನು ಸಾಕ್ಷಿಯಾಗಿಸುತ್ತಿದ್ದವಳು,
ಅಕ್ಕರೆಯಿಂದ ತೊಡೆಗಳನೇರಿ ಕೂರುತ್ತಿದ್ದವಳು,
ನನ್ನೆಲ್ಲಾ ಕತೆಗಳಿಗೆ ಕಿವಿಯಾಗಿ ಆಲಿಸುತ್ತಿದ್ದವಳು,
ಇಂದು ತನ್ನದೇ ಕಂದಮ್ಮನಿಗೆ ತಾಯಿಯಾಗಿ,
ಅಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಹಳು;

ಅಬ್ಬಬ್ಬಾ ಕಾಲದ ಮಹಿಮೆಯೇ!
ಅಬ್ಬಬ್ಬಾ ಈ ಕಾಲದ ವೇಗವೇ!


ವಾಯುಸೇನೆಯಲ್ಲಿ ನನ್ನ ಜೊತೆಗಿದ್ದ,
ನಮ್ಮ ಆತ್ಮೀಯ ಸ್ನೇಹಿತರಾದ
ನಾಣಯ್ಯ-ಹೇಮಕ್ಕನವರ ಮಗಳು,
ನಮ್ಮ ಪಾಲಿಗೂ ಆಕೆ ಮಗಳೇ ಆಗಿರುವವಳು,
ಕಣ್ಮುಂದೆ ಬೆಳೆದು ಆಯುರ್ವೇದ ವೈದ್ಯೆಯಾಗಿ,
ವರುಷದ ಹಿಂದೆ ಸುಂದರನೋರ್ವನ ಪತ್ನಿಯಾಗಿ,
ಈ ಭಾನುವಾರ ಪುಟ್ಟಮ್ಮನಿಗೆ ಅಮ್ಮನಾಗಿಹಳು;

ನಾನು ನಿಂತಲ್ಲೇ ಇದ್ದೇನೆ,
ಇದ್ದ ಹಾಗೆಯೇ ಇದ್ದೇನೆ,
ಎಂಬುದು ಬರಿಯ ಭ್ರಮೆ ನನ್ನೊಳಗೆ,
ಬದಲಾಗಿದೆ ಕಾಲ,
ಬದಲಾಗಿಹರು ನನ್ನವರು,
ಎನ್ನುವುದಷ್ಟೇ ವಾಸ್ತವದರಿವಿನ ಹಾಗೆ!
******************

7 Responses to ಆಕೆ ಅಮ್ಮಳಾಗಿಹಳು!

 1. HEMA ಹೇಳುತ್ತಾರೆ:

  Athmiya Hegdeyavare,nimma prathikriye nodi hindina nenapu marukalisitu.magalu amma aagiddalendu,mommagalu “ajji” endu karedaaga nanagaaga arivaaditu.ha ha ha….nimma kavana maathra
  wah! lajawab.

 2. ಲಿಖಿತ-ಭರತ್ ಮದುವೆಯಾದಾಗ
  ನವ ದಂಪತಿಗಳಿಗೆ ಶುಭ ಆಶೀರ್ವಾದ!!!
  https://athradi.wordpress.com/2009/05/05/wishes/

 3. ksraghavendranavada ಹೇಳುತ್ತಾರೆ:

  ಹೂ೦… ಕಾಲಾಯ ತಸ್ಮೈ ನಮ:
  ನನಗಿನ್ನೂ ನಿನ್ನೆ-ಮೊನ್ನೆ ಮದುವೆಯಾದ ಹಾಗಿದೆ. ಆದರೆ ಈಗಾಗಲೇ ನಾಲ್ಕು ವರ್ಷ ಸ೦ದು ಹೋದವು!
  ಚೆನ್ನಾಗಿದೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 4. shashijois ಹೇಳುತ್ತಾರೆ:

  ಹ್ವಾಯ್ ಲಾಯಿಕಿತ್ತು ಮರ್ರೆ ಕವನ..
  ಕಾಲ ಇದ್ದಲ್ಲೇ ಇರುತ್ತೆ ನಾವೇ ಬದಲಾಗಬೇಕು ಆಲ್ವಾ!!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: