ಈ ಜೀವನ ಇಷ್ಟೇನಾ… ಅಷ್ಟೇನಾ…?

 

“ಸಖೀ,

ಈ ಜೀವನ

ಇಷ್ಟೇನೇ

ಈ ಜೀವನ

ಅಷ್ಟೇನೇ

ಅನ್ನದಿರು

ಸುಮ್ಮನೇ

ನಿಜವಾಗಿ

ಹೇಳು

ಈ ಜೀವನ

ನಿನಗಿಷ್ಟಾನಾ?”

 

“ಇಷ್ಟೇ ಆಗಲೀ

ಅಷ್ಟೇ ಆಗಲೀ

ನಿಜವಾಗಿಯೂ

ನೀ ಜೊತೆಗಿರಲು

ಈ ಜೀವನವೂ

ನನಗಿಷ್ಟಾನೇ,

ನೀ ಹೇಳು

ಈ ಜೀವನ

ನಿನಗಿಷ್ಟಾನಾ?”

 

“ಈ ಜೀವನ

ನಿನಗಿಷ್ಟ

ಅನ್ನುವ

ನೀನು ನನಗಿಷ್ಟ,

ನನಗಿಷ್ಟಳಾದ

ನೀನು ನನ್ನ

ಜೊತೆಗಿರಲು,

ನಿಜವಾಗಿಯೂ

ಸಖೀ,

ಈ ಜೀವನವೂ

ನನಗಿಷ್ಟಾನೇ!”

****

4 Responses to ಈ ಜೀವನ ಇಷ್ಟೇನಾ… ಅಷ್ಟೇನಾ…?

 1. shamala ಹೇಳುತ್ತಾರೆ:

  ಸುರೇಶ್…
  ಈ ಜೀವನ ಇಷ್ಟೇನಾ… ಅಷ್ಟೇನಾ… ಇಷ್ಟಾನಾ… ಎಂದು ನಿಮ್ಮ ಸಖಿಯ ಜೊತೆ ನಮ್ಮನ್ನೂ ಪ್ರಶ್ನೆ ಕೇಳುತ್ತಾ… ಕೇಳುತ್ತಾ… ಕವನ ಬರೆದು ಜೀವನ ನಿಮಗಿಷ್ಟ… ಎಂದು ಹೇಳಿದ ನಿಮ್ಮ ಮನದ ಭಾವ ನನಗೂ ಇಷ್ಟವಾಯಿತು….!!!!

  ಶ್ಯಾಮಲ

  • ಆಸು ಹೆಗ್ಡೆ ಹೇಳುತ್ತಾರೆ:

   ಈ ಜೀವನ ಇಷ್ಟೇನೇ ಅಷ್ಟೇನೇ ಎನ್ನುತ್ತಾ ನಿರಾಶಾವಾದಿಯಾಗಿ ಬಾಳುವುದಕ್ಕಿಂತ, ಹೇಗಿದ್ದರೂ ಈ ಜೀವನ ನನಗಿಷ್ಟ, ಎಂದು ಆಶಾವಾದಿಯಾಗಿ ಬಾಳೋದು ನನಗಿಷ್ಟ.
   ಓದಿ, ಮೆಚ್ಚಿ, ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು, ಶ್ಯಾಮಲಾ.

 2. ksraghavendranavada ಹೇಳುತ್ತಾರೆ:

  ಒ೦ಥರಾ ಇಷ್ಟವಾಯ್ತು…

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: