ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ!

 

ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ,
ನಿನ್ನ ಕೇಶರಾಶಿಯ ನೆರಳಿನಲ್ಲಿ ನನ್ನ ಪಯಣ ಸಾಗಿದ್ದಲ್ಲಿ,
ನನ್ನೀ ಜೀವನ ಇಷ್ಟೊಂದು ನೀರಸವಾಗಿರದೇ ಇರುತ್ತಿತ್ತೇನೋ…
ಮನವ ಮುಸುಕಿರುವ ಈ ನಿರಾಸೆಯ ಛಾಯೆ ಮರೆಯಾಗುತ್ತಿತ್ತೇನೋ…

ಆದರೆ, ಅದೊಂದೂ ನಾನೆಣಿಸಿದಂತೆ ಆಗಲೇ ಇಲ್ಲ,
ಈಗ, ಏಕಾಂಗಿಯಾದ ನನ್ನ ಪರಿಸ್ಥಿತಿ ಹೇಗಾಗಿದೆಯೆಂದರೆ,
ನನಗೆ ನಿನ್ನ ಜೊತೆಯೂ ಇಲ್ಲ, ನಿನ್ನ ದುಃಖವೂ ಇಲ್ಲ,
ಅಲ್ಲದೇ, ನನ್ನಲ್ಲಿ ನಿನ್ನ ನಿರೀಕ್ಷೆಯೂ ಇಲ್ಲವಾಗಿದೆ…

ಈ ಜೀವನದ ಪಯಣ ಎಷ್ಟೊಂದು ನೀರಸವಾಗಿದೆಯೆಂದರೆ,
ನನ್ನಲ್ಲಿ ಇದೀಗ ಯಾರೊಬ್ಬರ ಆಸರೆಯ ನಿರೀಕ್ಷೆಯೂ ಇಲ್ಲ,
ಇಲ್ಲಿ ಹಾದಿಯೂ ಇಲ್ಲ, ಗಮ್ಯವೂ ಇಲ್ಲ, ಬೆಳಕಿಂಡಿಯೂ ಇಲ್ಲ,
ನನ್ನ ಬದುಕು ಕತ್ತಲಿನಲ್ಲಿ ವಿಚಲಿತಗೊಂಡು ಅಲೆಯುತ್ತಿದೆ…

ಮುಂದೊಮ್ಮೆ, ಇದೇ ಕತ್ತಲಿನಲ್ಲೇ ಕಳೆದುಹೋಗುತ್ತೇನೆ ನಾನು,
ಎಂದೆಂಬ ಅರಿವು, ನನಗೆ ಸದಾ ಇದೆಯಾದರೂ, ಸಖೀ,
ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ…
***

ದಿ. ಸಾಹಿರ್ ಲೂಧಿಯಾನ್ವಿಯವರಿಂದ ರಚಿತವಾಗಿದ್ದ, ೧೯೭೫ರ  “ಕಭೀ ಕಭೀ” ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಆಡುವ, ಈ ಮಾತುಗಳು ನನಗೆ ಬಹಳ ಇಷ್ಟ.
ಇದು ಆ ಮಾತುಗಳ ಭಾವಾನುವಾದದ ಚಿಕ್ಕ ಪ್ರಯತ್ನ ಅಷ್ಟೇ.

ಮೂಲ ಹಿಂದೀ ರೂಪ ಇಲ್ಲಿದೆ:

कभी कभी मेरे दिल मैं ख्याल आता हैं
कि ज़िंदगी तेरी जुल्फों कि नर्म छांव मैं गुजरने पाती
तो शादाब हो भी सकती थी।
यह रंज-ओ-ग़म कि सियाही जो दिल पे छाई हैं
तेरी नज़र कि शुओं मैं खो भी सकती थी।

मगर यह हो न सका और अब ये आलम हैं
कि तू नहीं, तेरा ग़म तेरी जुस्तजू भी नहीं।

गुज़र रही हैं कुछ इस तरह ज़िंदगी जैसे,
इससे किसी के सहारे कि आरझु भी नहीं.

न कोई राह, न मंजिल, न रौशनी का सुराग
भटक रहीं है अंधेरों मैं ज़िंदगी मेरी.

इन्ही अंधेरों मैं रह जाऊँगा कभी खो कर
मैं जानता हूँ मेरी हम-नफस, मगर यूंही

कभी कभी मेरे दिल मैं ख्याल आता है.
***

7 Responses to ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ!

 1. ವೇದ ಹೇಳುತ್ತಾರೆ:

  ಹೆಗ್ಡೆಯವರೇ,
  ಸುಮಾರು ಜನರ ನೆಚ್ಚಿನ ಹಾಡು ಇದು.
  ಮೂರೂಪಕ್ಕೆ ಧಕ್ಕೆ ಆಗದಿದ್ರೂ, ಮತ್ತಷ್ಟು ಕಾಯ್ವಮಯವಾಗಿರಬಹುದಿತ್ತು ಅಂತ ನನಗನಿಸಿತು.
  ನೀವು ಯಾಕೆ ಸಿಲ್‍ಸಿಲಾ ಚಿತ್ರದ ’ಯೆ ಕಹಾಂ ಆ ಗಯೇ ಹಮ್” ನ ಅನುವಾದ ಮಾಡಬಾರದು?

  • ಆಸು ಹೆಗ್ಡೆ ಹೇಳುತ್ತಾರೆ:

   ವೇದಾ,
   ಇದು ಗೀತೆ ಅಲ್ಲ, ಮಾತುಗಳು (“ಡೈಲಾಗ್ಸ್”). ಗೀತೆ ಬೇರೆ ಇದೆ.
   ಹಾಗಾಗಿ ಇದು ಹೆಚ್ಚು ಕಾವ್ಯಮಯವಾಗಿಲ್ಲ. ಕ್ಷಮಿಸಿ.
   ನೀಸು ಸೂಚಿಸಿದ ಸಿಲ್‍ಸಿಲಾದಾ ಗೀತೆಯ ಭಾವಾನುವಾದ ಮಾಡಲು ಯತ್ನಿಸುತ್ತೇನೆ.
   ಧನ್ಯವಾದಗಳು.

  • veda ಹೇಳುತ್ತಾರೆ:

   ಹೆಗ್ಡೆಯವರೇ ತಡವಾಗಿ ಉತ್ತರಿಸಿರುವುದಕ್ಕೆ ಕ್ಷಮೆ ಇರಲಿ. ನೀವು ಅನುವಾದಿಸಿರುವುದು ಮಾತುಗಳೇ ಆದರೂ ಅನುವಾದಿಸಿರುವ ಶೈಲಿ ಕಾವ್ಯಮಯವಾಗಿದ್ದುದರಿಂದ ಅದು ಇನ್ನಷ್ಟು ಕಾವ್ಯಮಯವಾಗಿದ್ದಿದರೆ ಸೊಗಸಾಗಿರುತ್ತಿತ್ತು ಎಂದು ಅನ್ನಿಸಿತು ಅಷ್ಟೇ ತಪ್ಪಿದ್ದರೆ ಮನ್ನಿಸಿ

   ವೇದ

 2. H. Anandarama Shastry ಹೇಳುತ್ತಾರೆ:

  ಪ್ರಿಯಮಿತ್ರ ಆಸು ಅವರೇ, ’ಸಂಪದ’ ಜಾಲತಾಣದಲ್ಲಿ ಇದೇ ಮುಕ್ತಕದ ಬಗ್ಗೆ ಪ್ರತಿಕ್ರಿಯೆ ಮತ್ತು ಕಿರುಲೇಖ ಎರಡನ್ನೂ ದಾಖಲಿಸಿದ್ದೇನೆ, ನೋಡಿ.

 3. ksraghavendranavada ಹೇಳುತ್ತಾರೆ:

  ಮೂಲ ಸಾಲುಗಳಿಗೆ ಯಾವ ರೀತಿಯಲ್ಲಿಯೂ ಮೋಸ ಮಾಡದ ಹಾಗೆ ಅನುವಾದ ಸೊಗಸಾಗಿ ಹೊರ ಹೊಮ್ಮಿದೆ.
  ಇದೇ ಚಿತ್ರದ ಇಬ್ಬರೂ ಹಾಡುವ ಯುಗಳ ಗೀತೆ ನನ್ನ ಮೆಚ್ಚಿನ ಹಾಡು. ನಾನು ಹೆಚ್ಚಾಗಿ ಏಕಾ೦ತ ದಲ್ಲಿ ಗುನುಗುನಿಸುವ ಹಾಡು ಅದೊ೦ದೇ ಎ೦ದರೆ ತಪ್ಪಾಗ ಲಾರದು. ಆ ಹಾಡಿನ ಹುಚ್ಚು ನನಗೆ ಎಷ್ಟೆ೦ದರೆ, ನನ್ನ ಮಗನಿಗೆ ಈಗಲೂ ಮಲಗುವಾಗ ನನ್ನ ಚರವಾಣಿಯಲ್ಲಿ ಇದೇ ಹಾಡನ್ನು ಹಾಕೋದು. ಆ ಮೂಲಕ ನಾನೂ ಈ ಹಾಡನ್ನು ಗುನುಗುನಿಸುವುದು. ಏಕಾ೦ತದಲ್ಲಿ ಈ ಹಾಡು ಕೊಡುವ ಮಜವೂ ಹಾಗೂ ಉ೦ಟುಮಾಡುವ ಭಾವನೆಗಳೇ ಅ೦ಥಹದ್ದು! ಅನುವಾದವೂ ಸೊಗಸಾಗಿದೆ. ಒ೦ದೊಳ್ಳೆಯ ಸ೦ಭಾಷಣೆಯ ಸಾಲುಗಳ ಕನ್ನಡ ಅನುವಾದವನ್ನು ನಮಗೆ ನೀಡಿದ ಪುಣ್ಯ ನಿಮ್ಮದು. ಅನುವಾದ ಕಾರ್ಯ ಸಾಧ್ಯವಿದ್ದಾಗಲೆಲ್ಲ ಮು೦ದುವರೆಸುತ್ತಿರಿ. ಅನುವಾದ ಕಲೆ ನಿಮಗೆ ಸಿಧ್ಧಿಸಿದೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: