ತನಗೆ ಮತ್ತಾ ಸ್ಥಾನಕ್ಕೇ ಅಗೌರವ ತಂದಿಹರಿವರು!

 

ಗೌರವದ ಸ್ಥಾನದಲ್ಲಿದ್ದುಕೊಂಡು
ತನ್ನ ಗೌರವವನ್ನು ಉಳಿಸಿಕೊಂಡು
ನಿಷ್ಪಕ್ಷಪಾತಿಯಾಗಿ ಇದ್ದಿರಬೇಕಾದವರು

ದಿನ ಪ್ರತಿದಿನ ಹೇಳಿಕೆಗಳ ನೀಡಿ
ಸರಕಾರವನ್ನು ಎಡೆಬಿಡದೇ ಕಾಡಿ
ಮೆರೆಯಲು ಹೋಗಿ ಈಗ ಎಡವಿಬಿದ್ದಿಹರು

ವಿರೊಧಪಕ್ಷದವರ ಮಾತೇ ಬೇಕಿಲ್ಲ
ಮಾತೃ ಪಕ್ಷದವರೇ ಬೆಲೆಕೊಡುತ್ತಿಲ್ಲ
ಎಲ್ಲಾ ಕಡೆಯಿಂದಲೂ ಉಗಿಸಿಕೊಳ್ಳುತಿಹರು

ಸಭಾಪತಿಗೆ ಬರೆದ ಪತ್ರ ಕಸದಬುಟ್ಟಿಗೆ
ಬೆಲೆಯಿಲ್ಲ ದಿಲ್ಲಿಯಲ್ಲೀತನ ಶಿಫಾರಸ್ಸಿಗೆ
ಉಳಿವಿಗಾಗಿ ಓಲೈಕೆಯ ನಾಟಕವಾಡುತಿಹರು

ಗೌರವದ ಸ್ಥಾನ ಪಡೆಯುವವರು ಹಲವರು
ಆ ಸ್ಥಾನಕ್ಕೇ ಗೌರವ ತರುವವರು ಕೆಲವರು
ತನಗೆ ಮತ್ತಾ ಸ್ಥಾನಕ್ಕೇ ಅಗೌರವ ತಂದಿಹರಿವರು

ಪಕ್ಷಾತೀತ ಸ್ಥಾನಕ್ಕೇರಿದ ಮೇಲೆ ಮಂದಿ
ಪಕ್ಷದ ತಂತ್ರಗಳಿಗೆ ಆಗಿರಬಾರದು ಬಂಧಿ
ತನ್ನನ್ನು ತಾನೇ ಕೆಡಿಸಿಕೊಂಡೀಗ ಮರುಗುತಿಹರು
****

4 Responses to ತನಗೆ ಮತ್ತಾ ಸ್ಥಾನಕ್ಕೇ ಅಗೌರವ ತಂದಿಹರಿವರು!

 1. sridhar R ಹೇಳುತ್ತಾರೆ:

  Very good Suresh….Keep it going

 2. ksraghavendranavada ಹೇಳುತ್ತಾರೆ:

  ಇದು ಆವ್ಯಕ್ತಿಯಲ್ಲಿರುವ ಆತಿಯಾದ ಆತ್ಮವಿಶ್ವಾಸದ ಫಲ! ತಾನೇನು, ತನ್ನ ಸ್ಥಾನವೇನು ಎ೦ಬುದನ್ನರಿಯದುದರ ಫಲ!ಸದಾ ಸ೦ಚಲನ ಬಯಸುವ ಮನಸ್ಸಿನ ಫಲ!
  ಚೆನ್ನಾಗಿದೆ, ಉತ್ತಮ ವಿಡ೦ಬನೆ. ಇಷ್ಟವಾಯಿತು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: