ಅನ್ಯಾಯ ಅಸಂವಿಧಾನಿಕ ಎಲ್ಲಾ ಮಣ್ಣಾಂಗಟ್ಟಿ!

ರಾಜ್ಯಪಾಲರು ತರಾತುರಿಯ ನಡವಳಿಕೆಯಿಂದ
ಈ ರೀತಿ ನಿಜದಿ ನಗೆಪಾಟಲಿಗೆ ಈಡಾಗಬಾರದಿತ್ತು

ಕಾನೂನು ತಜ್ಞನೆನಿಸಿ ರಾಷ್ಟ್ರಪತಿ ಆಳ್ವಿಕೆಗೆ
ಶಿಫಾರಸ್ಸು ಮಾಡಿ, ಈಗ ಮಾತು ಬದಲಿಸಬಾರದಿತ್ತು

ನಿನ್ನೆಯ ತನಕ ನಮ್ಮ ಮಾನ್ಯ ರಾಜ್ಯಪಾಲರು
ಕಾಂಗ್ರೇಸ್-ದಳದವರ ಪಾಲಿಗೆ ಆಗಿದ್ದರಲ್ಲಾ ದೇವರು

ಇಂದು ನೋಡಿದರೆ ಅದೇ ಹಂಸರಾಜರು
ಅವರೆಲ್ಲರ ಪಾಲಿಗೆ ಆಗಿಬಿಟ್ಟಿದ್ದಾರೆ ಕ್ರೂರ ಕಂಸರಾಜರು

ಮೊನ್ನೆ ಮೊನ್ನೆ, ಆತನಿಗಿರುವ ದೀರ್ಘ ಕಾನೂನು
ಅನುಭವವನ್ನು ಕೊಂಡಾಡಿ ಏರಿಸಿದ್ದರು ಆತನನು ಅಟ್ಟಕ್ಕೆ

ಈಗ ನೋಡಿದರೆ ಬೀದಿ ಬೀದಿಯಲ್ಲೆಲ್ಲಾ
ಜರೆದು ಏರಿಸುತ್ತಿದ್ದಾರೆ ಆತನನಿನ್ನೇನು ಜೀವಂತ ಚಟ್ಟಕ್ಕೆ

ಆತನ ಕಷ್ಟ, ಅಲ್ಲಿನ ಒಳಗುಟ್ಟು ಆತನಿಗೇ ಗೊತ್ತು
ಕೈ-ಕಮಾಂಡಿನ ಮಾತ ಪಾಲಿಸದೇ ಆತನಿಂದ ಇರಲಾಗದು

ಉತ್ತರ ಭಾರತದಲಿ ಚುನಾವಣೆಗಳಿವೆ ಹಾಗಾಗಿ
ಕಾಂಗ್ರೇಸಿಗೆ ಭಾಜಪ ಸರಕಾರವನ್ನು ಉರುಳಿಸಲೂ ಆಗದು

ಅನ್ಯಾಯ ಅಸಂವಿಧಾನಿಕ ಎಲ್ಲಾ ಬರಿ ಮಣ್ಣಾಂಗಟ್ಟಿ,
ಆ ಚುನಾವಣೆಗಳಷ್ಟೇ ಇವೆ ಈಗ ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ

ಹಾಗಾಗಿ ಭಾಜಪಕ್ಕೆ ಕೊಟ್ಟು ಈ ಮರು ಅವಕಾಶ
ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ತಾರೆ ಚುನಾವಣ ಪ್ರಚಾರದಲ್ಲಿ
******

4 Responses to ಅನ್ಯಾಯ ಅಸಂವಿಧಾನಿಕ ಎಲ್ಲಾ ಮಣ್ಣಾಂಗಟ್ಟಿ!

 1. sridhar R ಹೇಳುತ್ತಾರೆ:

  Awesome suresh

 2. ksraghavendranavada ಹೇಳುತ್ತಾರೆ:

  ಕಾ೦ಗ್ರೆಸ್ ಗೆ ಲೋಕಸಭೆಯಲ್ಲಿ ,ಅಣು ಒಪ್ಪ೦ದವನ್ನು ಜಾರಿಗೆ ತರಲು ಬಹುಮತವನ್ನು ಪಡೆಯ ಬೇಕಾದರೆ, ಬಿ.ಜೆಪಿ.ಯವರ ಬೆ೦ಬಲವಿಲ್ಲದೆ ಸಾಧ್ಯವಿಲ್ಲ!, ಬಿಹಾರದ ಚುನಾವಣೆ, ಚುನಾಯಿತ ಸರ್ಕಾರವನ್ನು ಕಿತ್ತೊಗೆದ ಅಪಕೀರ್ತಿಯನ್ನು ಪಡೆಯದಿರುವುದು, ಮು೦ದಿನ ಮಹಾ ಚುನಾವಣೆಗಳು ಎಲ್ಲವೂ ಕಾ೦ಗ್ರೆಸ್ ನ ದೃಷ್ಟಿಯಲ್ಲಿವೆ! ಆದರೂ ಅಧಿಕಾರವನ್ನು ದುರುಪಯೋಗ ಪಡಿಸಿಕೊ೦ಡು, ತನ್ನ ವ್ಯಾಪ್ತಿಯನ್ನು ಮೀರಿದ ಎಲ್ಲರಿಗೂ ಆಗಬೇಕಾದದ್ದೇ ಇದು. ಚೆನ್ನಾಗಿದೆ ಆಸುಮನದ ಛಾಟಿಯೇಟು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  • ಆಸು ಹೆಗ್ಡೆ ಹೇಳುತ್ತಾರೆ:

   ರಾಘವೇಂದ್ರ,
   ಸದುಪಯೋಗ ಪಡಿಸಿಕೊಂಡ ರಾಜ್ಯಪಾಲರುಗಳು ಇಲ್ಲವೆನ್ನುವಷ್ಟು ವಿರಳ
   ಕೇಂದ್ರ ಸರಕಾರದ ಕೈಗೊಂಬೆಗಳೇ ಆಗಿರುತ್ತಾರೆ ಅವರು ಎಲ್ಲರೂ ಬಹಳ

   ತಮ್ಮ ಸದಭಿಪ್ರಾಯದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: