ನಕಲಿ ಗಾಂಧಿಯ ಮುಂದೆ ಅಡವಿಡುವುದೇಕೆ ತಮ್ಮ ಅಸಲಿ ಹಿರಿತನವ?

 

ಭ್ರಷ್ಟರು ರೂಪಿಸುವ ಎಲ್ಲಾ ಕಾನೂನುಗಳಲ್ಲೂ ನ್ಯೂನತೆಗಳು ನೂರಾರು

ಅವುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡು ಹಬ್ಬುವರು ಅರಾಜಕತೆ

 

ಈ ಎಲ್ಲಾ ಅರಾಜಕತೆಗೆ ಮೂಕಪ್ರೇಕ್ಷಕಿಯಾಗಿ ಸಮ್ಮತಿಯ ಸೂಚಿಸುವ

ಆ ವಿದೇಶಿ ಮಹಿಳೆಗೆ ಮಗನನ್ನು ಪ್ರಧಾನಿಯಾಗಿಸುವುದೇ ಧ್ಯೇಯವಂತೆ

 

ಆ ಮಗನೋ ಬೇಜವಾಬ್ದಾರನಾಗಿ ಮಠದ ಬಸವನಂತೆ ಊರೂರು

ಸುತ್ತಿ ಮೇಯುವುದನೇ ಮಾಡಿಕೊಂಡಂತಿದೆ ತನ್ನ ದಿನನಿತ್ಯದ ಕಾಯಕ

 

ನಾಲ್ಕು ವರುಷಗಳಲ್ಲಿ ನೋಡಿ ಆ ಬಸವನನ್ನೇ ಈ ದೇಶದ ಗದ್ದುಗೆಯಲಿ

ಕೂರಿಸಿ ವಿದೇಶಿ ಮಹಿಳೆ ಹೇಳುತ್ತಾಳೆ ಇನ್ನು ನಿಮಗೆ ಈತನೇ ನಾಯಕ

 

ಆತನ ಮುಂದೆ ಕೈಕಟ್ಟಿಕೊಂಡು ಆದೇಶಕ್ಕಾಗಿ ಕಾಯುತ್ತಾ ನಿಲ್ಲುತ್ತಾರೆ

ನಮ್ಮ ಘಟಾನುಘಟಿ ಸೂಟುಧಾರಿ ದೇಶೀ ನಾಯಕರುಗಳು ತಲೆಬಾಗಿ

 

ತಮ್ಮ ಅನುಭವ ಹಿರಿತನ ಎಲ್ಲವನ್ನೂ ನಮ್ಮ ಅಸಲಿ ದೇಶೀ ನಾಯಕರು

ನಕಲಿ ಗಾಂಧಿಮನೆತನದವರ ಮುಂದೆ ಅಡವಿಡುವುದು ಹೇಳಿ ಯಾಕಾಗಿ?

*********

One Response to ನಕಲಿ ಗಾಂಧಿಯ ಮುಂದೆ ಅಡವಿಡುವುದೇಕೆ ತಮ್ಮ ಅಸಲಿ ಹಿರಿತನವ?

  1. ಮಧುಸೂದನ ಹೇಳುತ್ತಾರೆ:

    ದಾಸರು ಹೇಳಿಹರಲ್ಲ – ’ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’
    ಆದರೆ ಕೆಲವರ ಹೊಟ್ಟೆ ದೊಡ್ಡದು, ಆಸ್ತಿ ಮಾಡುವರು ಮುಂದಿನ ತಲೆಮಾರುಗಳಿಗಾಗಿ
    ಇಲ್ಲವಾದರೆ ಹೇಳಿ ಸ್ವಾಮಿ ಮನುಕುಲಕ್ಕೇ ಶೂನ್ಯವ ಕೊಟ್ಟ ನಾವು ಇರುತ್ತಿದ್ದೆವೇ ಹೀಗೆ ಹಾಳಾಗಿ
    ಮಾನ ಮರ್ಯಾದೆಗಳನ್ನು ಬಿಟ್ಟು, ತಲೆಬಾಗುತ್ತಾ ದೀನರಾಗಿ, ಪರದೇಶಿಯರಿಗಾಗಿ?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: