ನರ್ಸಮ್ಮನ ಸಿಡಿಯ ನಕಲು ಇನ್ನೂ ಇದೆ ಆತುರ ಬೇಡ!

 

ಯಡ್ಡಿ ನಿನ್ನೆ ರೇಣುವಿನ ಕಿವಿಗಳಲ್ಲಿ ಒಂದು ಮಂತ್ರವನ್ನು ಉಸುರಿದರಲ್ಲಾ
ರೇಣುವಿನ ಉಸಿರೇ ನಿಂತುಹೋಗಿ ಸ್ವರವೇ ಬದಲಾಗಿ ಬಿಟ್ಟಿದೆಯಂತಲ್ಲಾ

ರಾತ್ರಿಯಿಡೀ ಯೋಚಿಸುತ್ತಾ ಮಲಗಿದ್ದೆ ಮುಂಜಾವಿಗೆ ಜ್ಞಾನೋದಯವಾಯ್ತು
ಯಡ್ಡಿ ಹೆಚ್ಚೇನೂ ಹೇಳಿರಲಿಕ್ಕಿಲ್ಲ ಹೇಳಿರಬಹುದು ಇಲ್ಲಿರುವ ಇದಿಷ್ಟೇ ಮಾತು

ನರ್ಸಮ್ಮ ಐದುಕೋಟಿ ಹೊತ್ಕೊಂಡು ಹೋಗಿದ್ದು ಸತ್ಯವೇ ಕಣೋ ಮೂಢ
ಆದ್ರೆ ಆಕೆ ಕೊಟ್ಟು ಹೋದ ಸಿಡಿಯ ನಕಲು ಇನ್ನೂ ನನ್ನಲ್ಲಿದೆ ಆತುರ ಬೇಡ

****

ಕುಮಾರ ಕಳೆದ ಬಾರಿ ಮೋಸ ಮಾಡಿದ್ದು ಬರೀ ಯಡ್ಡಿಗೆ ಮತ್ತು ಭಾಜಪಕ್ಕೆ
ಇಂದು ಹಾಗಲ್ಲ ಇಡೀ ರಾಜ್ಯಕ್ಕೇ ದ್ರೋಹ ಬಗೆದು ಪಡಬೇಕಾಗಿದೆ ನಾಚಿಕೆ

ತಮ್ಮ ಪಾತ್ರವೇನೂ ಇಲ್ಲ ಎನ್ನುತ್ತಲೇ ಗೋವಾಕ್ಕೆ ತೆರಳಿದನಾದರೂ ಏಕೆ
ಭಿನ್ನರ ರಕ್ಷಣೆಗೆ ಹೋಗುವೆನೆಂದವನು ಜೊತೆಗೆ ಪೋಲೀಸರ ಒಯ್ದಿಲ್ಲ ಏಕೆ

ಹದಿಮೂರು ಶಾಸಕರ ರಕ್ಷಣೆ ಓರ್ವನೇ ಮಾಡಲು ಈತನೇನು ದಾದಾನೇ
ಗೋವಾ ಪೋಲೀಸರಿಗೆ ಕರೆ ಮಾಡಿ ಹೇಳಿದ್ದರೆ ಸಿಗ್ತಿತ್ತು ರಕ್ಷಣೆ ತಂತಾನೇ

****

ಸೋನಿಯಾ ಸಿದ್ದನ ಕೇಳಿದಳು “ಓಹ್ ಆರ್ ಯೂ ಸಿದ್ಧ?” ಎಂದು ದಿಲ್ಲಿಯಲ್ಲಿ
“ಹೌದು ನಾನು ಸಿದ್ಧ, ನಾಲ್ಕು ವರ್ಷಗಳಿಂದ ಮುಖ್ಯಮಂತ್ರಿಯಾಗಲು ಇಲ್ಲಿ”

ಮುಖಕ್ಕೆ ಮಂಗಳಾರತಿ ಮಾಡಿ ಹೊರಗಟ್ಟಿದ್ದಾಳೆ ಸೋನಿಯಾ “ಹೋಗು
ಒಂದಾದರೂ ಕ್ಷೇತ್ರದಲ್ಲಿ ನಮ್ಮವರ ಗೆಲ್ಲಿಸಿ ಬಾ ಆಲಿಸುತ್ತೇನೆ ನಿನ್ನ ಕೂಗು

ವಿರೋಧದ ನಡುವೆಯೂ ವಿರೋಧಪಕ್ಷದ ನಾಯಕನ ಪಟ್ಟ ನೀಡಿದ್ದೇ ಹೆಚ್ಚು
ನಿಜಕ್ಕೂ ಹೇಳುತ್ತೇನೆ ಕರ್ನಾಟಕದಲ್ಲಿ ನನಗೆ ಆಸ್ಕರ್ ಮಾತ್ರ ಅಚ್ಚುಮೆಚ್ಚು”

****

10 Responses to ನರ್ಸಮ್ಮನ ಸಿಡಿಯ ನಕಲು ಇನ್ನೂ ಇದೆ ಆತುರ ಬೇಡ!

 1. Ravi ಹೇಳುತ್ತಾರೆ:

  ಹೆಗ್ಡೆಯವರೇ, ಚೆನ್ನಾಗಿದೆ ವಿಡಂಬನೆ. ಆತ್ಮಸಾಕ್ಷಿಯ ಲವಲೇಶವೂ ಇಲ್ಲದಂತೆ ೬ ಕೋಟಿ ಕನ್ನಡಿಗರ ಕಣ್ಮುಂದೆ ನಡೆಯುತ್ತಿರುವ ಹೊಲಸು ರಾಜಕೀಯದ ಚಿತ್ರಣ ಚೆನ್ನಾಗಿದೆ. ಕೋಟ್ಯಂತರ ರೂಪಾಯಿ ಕುದುರೆ ವ್ಯಾಪಾರ ನಮ್ಮ ಕಣ್ಣೆದುರೇ ಯಾಕೆ ನಡೆಯುತ್ತಿದೆ? ನಾವೇಕೆ ಸುಮ್ಮನಿದ್ದೇವೆ? ಇಷ್ಟೆಲ್ಲಾ ಕಾನೂನು ಕಟ್ಟಳೆಗಳಿದ್ದರೂ ಹಾಡುಹಗಲೇ ಅವ್ಯವಹಾರ ಮಾಡುವ ಅಧಿಕಾರ ಅವರಿಗೆ ಕೊಟ್ಟವರು ಯಾರು? ತಪ್ಪು ಮಾಡಿರುವುದು ನಾವೇ ಹೆಗಡೆಯವರೇ.. ಒಂದು ವೋಟಿಗೆ ಲಂಚ ಪಡೆದ ನಮಗೆ ಟೀಕಿಸುವ ಹಕ್ಕಿಲ್ಲ. ಅವರಿಗೆ ಇದೊಂದು ಶುದ್ಧ ವ್ಯವಹಾರ, ವೋಟು ಪಡೆಯಲು ಮಾಡಿದ ಹೂಡಿಕೆಯ ಮೇಲೆ ಲಾಭ ಬಯಸುತ್ತಾರೆ ಅಷ್ಟೇ. ಭ್ರಷ್ಟಾಚಾರ ಪ್ರತಿ ಹಂತದಲ್ಲೂ ತನ್ನ ಕೈ ಚಾಚಿದೆ. ಚಿಲ್ಲರೆ ನೀಡದ ಕಂಡಕ್ಟರ್ ನಿಂದ, ಸರಕಾರಕ್ಕೆ ತೆರಿಗೆ ವಂಚಿಸುವ ವ್ಯವಹಾರಸ್ತರವರೆಗೂ.. ಅದಕ್ಕೆ ನಾವು ನೀಡುವ ಸಮಜಾಯಿಷಿ ‘ಎಲ್ಲರೂ ಮಾಡುವುದು ಅದೇ’ ಎಂದು..
  ಜೈ ಹಿಂದ್. ಜೈ ಭಾರತ ಮಾತೆ.

 2. shashi jenny ಹೇಳುತ್ತಾರೆ:

  suresh,
  ee rajakiya nataka navella sumne nodtha iddivalla entha helplesness nijakku naavu bari prekshakare mundina election varege oh yake heege.

 3. ksraghavendranavada ಹೇಳುತ್ತಾರೆ:

  ಅಹಾ, ಕ್ಯಾಬಾತ್ ಹೈ ಹೆಗ್ಡೆಜೀ? ಆಸುಮನ ಇತ್ತೀಚೆಗೆ ಹೆಚ್ಚೆಚ್ಚು ವಿಡ೦ಬನಾತ್ಮಕವಾಗುತ್ತಿದೆ. ಖುಷಿಯಾಯಿತು. ಆಗಾಗ್ಗೆ ಈ ತರಹದ ರಾಜಕೀಯ ವಿಡ೦ಬನೆಗಳು ಮನಸ್ಸಿಗೆ ಮುದನೀಡುತ್ತವೆ! ಮು೦ದು ವರೆಯಲಿ ಆಸುಮನದ ಚಾಟಿಯೇಟು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 4. ವೇದ ಹೇಳುತ್ತಾರೆ:

  ಹೆಗ್ಡೆಯವರೇ,
  ಇಂದಿನ ಹೊಲಸು ರಾಜಕೀಯದ ಚಿತ್ರಣವನ್ನು ಚೆನ್ನಾಗಿ ಚಿತ್ರಿಸಿದ್ದೀರಿ.
  ಹೀಗೆಯೇ ಬರೆಯುತ್ತಾ ಇರಿ.

  ವಿಶ್ವಾಸದಿಂದ,
  ವೇದ

 5. ಮಧುಸೂದನ ಹೇಳುತ್ತಾರೆ:

  ಬೆಳ್ಳಂಬೆಳಗ್ಗೆಯೇ ಆಸುಮನದಲ್ಲಿ ಹೊಸ ಕವನದ ಸೂಚನೆ
  ಕುತೂಹಲದಿ ತೆರೆದು ನೋಡಿದರೆ, ರಾಜಕೀಯ ವಿಡಂಬನೆ!
  ಇತ್ತೀಚೆಗೆ ಕೆಲಕಾಲ ಮೌನವಾಗಿದ್ದ ಆಸುಮನದ ಚಿತ್ತ
  ಏಕೋ ಸಿಡಿದೆದ್ದಂತಿದೆ ನಮ್ಮ ಸುತ್ತಲಿನ ಹೊಲಸುಗಳತ್ತ!

  • ಆಸು ಹೆಗ್ಡೆ ಹೇಳುತ್ತಾರೆ:

   ಮಧು,
   ಮೌನಿಯೆಂದೆನಿಸಿದರೂ ಮೌನವಾಗಿರುವುದಿಲ್ಲ ಚಿತ್ತ
   ಕಣ್ಣು ಕಿವಿಗಳಿಗೆ ವಿಷಯ ಸಿಗುತ್ತಿರುತ್ತದೆ ಸುತ್ತಮುತ್ತ

   ಹೊಲಸ ಕಂಡೂ ಮೌನಿಯಾದರೆ ಹೆಚ್ಚುವುದೀ ಗಬ್ಬು
   ನೈತಿಕತೆಯ ಬೆಳಕಿಲ್ಲದೆ ಸಮಾಜದಲ್ಲೀಗ ಬರೀ ಮಬ್ಬು

   ಧನ್ಯವಾದಳು ನಿಮ್ಮ ಸಹಮತದ ನುಡಿಗಳಿಗೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: