ಸರ್ಕಾರಗಳ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು!

 

ನಮ್ಮ ಸರಕಾರಗಳು ಮಾಡಿದ
ಬಹುಮೂಲ್ಯ ಕೆಲಸವೆಂದರೆ
ಮಹಾತ್ಮ ಗಾಂಧಿಗೆ
ಭಾರತ ರತ್ನ ಪ್ರಶಸ್ತಿ
ಪ್ರದಾನ ಮಾಡದೇ ಇದ್ದುದು,
ಇಲ್ಲವಾಗಿದ್ದಲ್ಲಿ, ನೆಹರೂ,
ಇಂದಿರಾ, ಮಂಡೇಲಾ,
ಎಂಜಿಆರ್, ರಾಜೀವ ಗಾಂಧಿ,
ಲತಾರಿಗೆ, ಸರಿಸಮಾನರಾಗಿಯೇ,
ಮಹಾತ್ಮರು ಉಳಿದುಬಿಡುತ್ತಿದ್ದರು;

ನಮ್ಮ ಸರ್ಕಾರಗಳು ಮಾಡಿದ
ಅತೀ ಕೆಟ್ಟ ಕೆಲಸವೆಂದರೆ
ಹೆಚ್ಚಿನೆಲ್ಲಾ ನಗರಗಳಲ್ಲೂ
ರಸ್ತೆಗಳಿಗೆ ಮಹಾತ್ಮ ಗಾಂಧಿ ರಸ್ತೆ
ಎಂಬ ನಾಮಕರಣ ಮಾಡಿದುದು,
ಗಾಂಧಿ ತೋರಿದ ಹಾದಿಯಲ್ಲಿ
ನಡೆಯಬೇಕಾದ ಮಂದಿ ಈ
ರಸ್ತೆಗಳಲ್ಲೇ ಬೇಕಾದುದನ್ನೆಲ್ಲಾ
ಮಾಡಿ ಅದರಿಂದಲೇ ಒಳಗೊಳಗೇ
ತೃಪ್ತರಾಗಿ ಉಳಿಯುತಿಹರು!
**************

3 Responses to ಸರ್ಕಾರಗಳ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು!

 1. shashi jenny ಹೇಳುತ್ತಾರೆ:

  good one yaar an excellent thought.

 2. ksraghavendranavada ಹೇಳುತ್ತಾರೆ:

  ಇವೆಲ್ಲಾ ಹೇಗೆ ಹೊಳೆಯುತ್ತವೆ ಆಸುಮನಕ್ಕೆ ಅ೦ತ? ಸಕ್ಕತ್…ಸಾಲುಗಳು.ಗಾ೦ಧೀಜಿಯವರ ಯೋಗ್ಯತೆಯನ್ನು ಅಳೆಯಲು ಎಲ್ಲಾ ಹೊರಟಿದ್ದಾರೆ. ಎಲ್ಲೆಲ್ಲಿಯೂ ಗಾ೦ಧಿಯೇ, ಸುಲಭ ಶೌಚಾಲಯಕ್ಕೊ೦ದು ಅವರ ಹೆಸರಿಟ್ಟಿಲ್ಲ! ಅಷ್ಟೇ..
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 3. ಮಧುಸೂದನ ಹೇಳುತ್ತಾರೆ:

  ಈ ಬಾರಿ ಆಯ್ದುಕೊಂಡಿಹರು ನಮ್ಮ ಮೆಟ್ರೊ ನಿಲ್ದಾಣ
  ಮಾಡಲು ಮತ್ತೆ ಆ ಮಹಾತ್ಮ ಗಾಂಧಿಯ ನಾಮಕರಣ
  ಮಹಾತ್ಮ ಗಾಂಧಿ ರಸ್ತೆಗಳಲ್ಲಿ ಮಾಡುತ್ತಿದ್ದೆವು ಸುಮ್ಮನೆ ಪಯಣ
  ಇನ್ನು ನಿಲ್ದಾಣದಲಿ ನಿಂತು ಮಾಡಬಹುದು ಆತ್ಮಾವಲೋಕನ 🙂

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: