ಬೀದಿಯಲ್ಲಿ ಆಡುವವರು ಸದನದೊಳಗೆ ಯಾಕೆ ಆಡರಯ್ಯಾ?

ಸಂಸದ ಕುಮಾರ ಯಾವುದೋ ಧೂಳು ಹಿಡಿದ ಕಡತ ಹಿಡಿದು
ಅಲ್ಲಲ್ಲಿ ಸರಕಾರದ ಮಾನ ಹಾಕುತ್ತಾನೆ ಬಹಿರಂಗ ಹರಾಜು

“ಎಸ್” “ವೈ” ಎಂದು ದತ್ತ ತನ್ನೆಲ್ಲಾ ಹಲ್ಲುಗಳ ಕಚ್ಚಿಕೊಂಡು
ವಾಹಿನಿಯಲಿ ಚರ್ಚೆ ಮಾಡಿ ಹೆಚ್ಚಿಸುತ್ತಾನೆ ಅದರ ಮೋಜು

ಕಾಂಗ್ರೇಸಿಗರು ಕೂಡಲೇ ಕಡತಗಳ ನಕಲುಗಳನ್ನು ತೆಗೆದು
ನಡೆಯುತ್ತಾರೆ ರಾಜಭವನದಾ ಏಜಂಟನಿಗೆ ದೂರು ಕೊಡಲು

ದೂರದ ಮಂಗಳೂರಲ್ಲಿ ನಿದ್ದೆಯಿಂದೆದ್ದ ಜನಾರ್ದನ ಪೂಜಾರಿ
ಮತ್ತು ಇತ್ತ ಈ ಬಂಗಾರಪ್ಪ ಶುರುಮಾಡುತ್ತಾರೆ ತೊದಲಲು

ತಾನೇ ರಾಜೀನಾಮೆ ಕೊಟ್ಟಿದ್ದ ಸಿದ್ದರಾಮಯ್ಯ ಸೋನಿಯಾಳ
ಮುಂದೆ ಯಡ್ಡಿಯ ಹುಳುಕನ್ನು ಬಿಚ್ಚಿಡಲು ದೌಡಾಯಿಸುತ್ತಾನೆ

ಸೋನಿಯಾಳ ಭೇಟಿಯ ನಂತರ ಹೇಗೆ ತನಗಲ್ಲಿ ಮಂಗಳಾರತಿ
ಆಯಿತೆಂಬ ಸುದ್ದಿಯನೇ ಮಾಧ್ಯಮದವರಿಂದ ಮರೆಮಾಚುತ್ತಾನೆ

ಈಶ್ವರಪ್ಪ ಆ ವಕೀಲ ಚಂದ್ರೇಗೌಡನನ್ನು ಛೂ… ಬಿಡುತ್ತಾನೆ
ಮಾಧ್ಯಮಗಳವರನ್ನು ಕಾನೂನು ರೀತ್ಯ ಮರಳು ಮಾಡಲು

ಯಡ್ಡಿ ಒಂಟಿ ಸಲಗದಂತೆ ತನ್ನ ಶೋಭೆಗೆ ಧಕ್ಕೆ ಬರುವುದನ್ನು
ಅರಿತು ಸದನಕ್ಕೆ ಬನ್ನಿ ಅಂತಾನೆ ಎಲ್ಲರನು ಮಾತನಾಡಲು

ಸದನದ ಹೆಸರು ತೆಗೆದರೆ ಸಾಕು ಎಲ್ಲಾ ಅಲರ್ಜಿ ಆದವರಂತೆ
ತಮ್ಮ ಮಾತು ಬದಲಿಸಿ ರಾಜೀನಾಮೆಗೆ ಹಿಡಿಯುತ್ತಾರೆ ಪಟ್ಟು

ಯಾಕೆ ಹೀಗೆ ಅಂತೀರಾ ಬೀದಿಯಲ್ಲಿ ಆಡಿದ್ದನ್ನೆಲ್ಲಾ ಸದನದಲ್ಲೂ
ಆಡಿದರೆ ದಾಖಲೆ ಆಗಿ ಮುಂದೆ ಎಲ್ಲಾ ತಿನ್ನಬೇಕಾದೀತು ಪೆಟ್ಟು
*********

4 Responses to ಬೀದಿಯಲ್ಲಿ ಆಡುವವರು ಸದನದೊಳಗೆ ಯಾಕೆ ಆಡರಯ್ಯಾ?

  1. ksraghavendranavada ಹೇಳುತ್ತಾರೆ:

    ಸಕ್ಕತ್ ಮ೦ಗಳಾರತಿ… ಎತ್ತಿದ್ದೀರಿ.
    ಸೂಪರ್.. ಹೆಗಡೆಯವರೇ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

  2. H. Anandarama Shastry ಹೇಳುತ್ತಾರೆ:

    ಕೊನೆಯೆರಡು ಸಾಲುಗಳಲ್ಲಿದೆ ಭರ್ಜರಿ ಪಂಚಿಂಗ್ ಇಫೆಕ್ಟು
    ಎಲ್ಲ ಕಂಡೂ ಇವರನ್ನೇ ಆರಿಸಿ ಕಳಿಸುವುದು ನಮ್ಮ ಡಿಫೆಕ್ಟು

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: