ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ!

ನಾಡಿನ ಸ್ವಾತಂತ್ರ್ಯಕ್ಕೆ ಹೋರಾಡಿದವರ
ಸಂಖ್ಯೆ ಲಕ್ಷದಷ್ಟಿದ್ದರೂ ನೆನೆಸುವುದಿಲ್ಲ ನಾವು ಅವರೆಲ್ಲರ

ಮರೆವು ಮನುಜನಿಗೆ ವರದಂತೆ
ಅದಕೆ ನಮ್ಮೆಲ್ಲಾ ಸರ್ಕಾರಗಳ ಕೊಡುಗೆಯೂ ಅಪಾರವಂತೆ

ಆ ಗಾಂಧಿ ಜನಿಸಿದ ನಾಡಿನಲ್ಲಿ
ನಕಲಿ ಗಾಂಧಿಗಳೇ ತುಂಬಿಕೊಂಡಿಹರಲ್ಲಾ ಸದ್ಯಕ್ಕೀಗ ಇಲ್ಲಿ

ಗಾಂಧಿ ನೆಹರೂ ಅವರುಗಳನ್ನುಳಿದು
ಅನ್ಯರ ನೆನೆಸಿದರೆ ಈ ನಾಡಿನಲ್ಲಿ ಪಾಪವೆಂದೆನಿಸುವುದು

ಭಾರತರತ್ನನಾದ ಆರೋಪಿ ರಾಜೀವ ಗಾಂಧಿ
ನಾಡಿನ ಅನ್ಯ ವೀರ ಪುತ್ರರತ್ನರ ನೆನೆಯರು ನಮ್ಮ ಮಂದಿ

ಚಿತ್ರ ನಟರ ಜನ್ಮದಿನಕ್ಕೆ ಇಲ್ಲಿ ಮೆರವಣಿಗೆ
ವೀರಯೋಧರ ನೆನಪುಗಳು ಸೀಮಿತವಾಗಿವೆ ಬರವಣಿಗೆಗೆ

ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ
ಹುಟ್ಟಿದರೂ ಭ್ರಷ್ಟರ ನಡುವೆ ನಿಷ್ಟನಾಗಿ ಹೆಚ್ಚುದಿನ ಬಾಳಲಾರ

ವೀರರ ನೆನಪಿನಲಿಂದು ಕಂಬನಿ ಮಿಡಿದು
ನಾಡಿಗಾಗಿ ಹೋರಾಡುವೆವೆನ್ನೋಣ ಸ್ವಾರ್ಥವನೆಲ್ಲಾ ತೊರೆದು!

************

ಇಂದು ಭಗತ್ ಸಿಂಗ್ ಜೀವಿಸಿದ್ದಿದ್ದರೆ ಆತನಿಗೆ ೧೦೩ ವರುಷ ತುಂಬುತ್ತಿತ್ತು!

 

2 Responses to ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ!

 1. Sandeep Kumar Shetty ಹೇಳುತ್ತಾರೆ:

  ಭಗತ ಹುತಾತ್ಮನಲ್ಲ
  ಅವನಿಲ್ಲಿರುವ ನಿರಂತರ
  ನನ್ನ ಮನದಲ್ಲಿ
  ನಮ್ಮೆಲರ ಹೃದಯದಲ್ಲಿ
  ಹೋರಾಟ ಕೆಚ್ಚು ಕಳೆಗುಂದಿದಾಗ
  ಸ್ಪೂರ್ತಿಯ ಸೆಲೆಯಾಗಿ
  ಉಸಿರುಉಸಿರಿನಲಿ…

 2. ksraghavendranavada ಹೇಳುತ್ತಾರೆ:

  ಅ೦ಥ ಹುತಾತ್ಮರ ಸಮಾಧಿಯ ಮೇಲೆ ನಾವಿ೦ದು ನಮ್ಮದೇ ಆದ ಬದುಕನ್ನು ಸ್ವಲ್ಪವಾದರೂ ಶಾ೦ತಿಯಿ೦ದ ಬದುಕುತ್ತಿದ್ದೇವೆ.ಇದು ಅವರೆಲ್ಲರ ಕೊಡುಗೆ.ಧನ್ಯವಾದಗಳು.ಮೊದಲು ನಿಮ್ಮ ಚರ ವಾಣಿ ಸ೦ದೇಶ.ಮತ್ತೊ೦ದು ಈ ಕವನ ನನ್ನ ಮನಸ್ಸನ್ನೊಮ್ಮೆ ಹಿಡಿದಿಟ್ಟು ಚಿ೦ತನೆ ಗೀಡು ಮಾಡಿತು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: