ಆಟಕ್ಕುಂಟು ಊಟಕ್ಕಿಲ್ಲ ಈ ನಾಡಿನಲ್ಲಿ!

 

ನಮ್ಮವರಿಗೇ ಹೆದರಿ ಬಾಗಿಲು ಮುಚ್ಚಿಕ್ಕೊಂಡು ಒಳಕೂರುವ ದೇಶ
ಶಾಲಾ ಕಾಲೇಜುಗಳಿಗೆ ರಜೆಸಾರಿ ತೋರಿಸುವರು ತಮ್ಮ ಆವೇಶ

ವಿದೇಶಿಯರು ದಂಡೆತ್ತಿ ಬಂದಿರುವಂತೆ ಆಡುತ್ತಿರುವುದಾದರೂ ಏಕೆ
ನಮ್ಮವರಿಂದ ನಮ್ಮವರಿಗೇ ರಕ್ಷಣೆ ಕೊಡಲಾಗದ ಸರಕಾರಗಳೇಕೆ

ಸಾವಿರ ಸಾವಿರ ಕೋಟಿ ಖರ್ಚು ಮಾಡಿ ಕ್ರೀಡಾಕೂಟ ನಡೆಸುವರು
ರೈತರ ಭೂಮಿ ಕಿತ್ತುಕೊಂಡು ಬದಲಿಗೆ ಪುಡಿಗಾಸನ್ನಷ್ಟೇ ನೀಡುವರು

ಸತ್ತ ಯೋಧರ ಸಂಸಾರಗಳಿಗೆ ಪರಿಹಾರ ಸಹಕಾರ ಭಾಷಣಗಳಲ್ಲೇ
ಚೆಂಡಿನಾಟದಲಿ ಗೆದ್ದವರಿಗೆ ಸನ್ಮಾನ ಬಹುಮಾನ ರಾಜಧಾನಿಯಲ್ಲೇ

ಚಿತ್ರನಟ, ಕ್ರಿಕೆಟ್ ಆಟಗಾರ, ರಾಜಕೀಯ ನಾಯಕನಾದರಷ್ಟೇ ಬಾಳು
ರೈತನಾಗಿ ಹುಟ್ಟಿದವನದು ಜೀವನಪೂರ್ತಿ ಬರೀ ಬೇಗುದಿಯ ಗೋಳು

ಆಟಕ್ಕುಂಟು ಆದರೆ ಊಟಕ್ಕಿಲ್ಲ ಎಂಬಂತಾಗಿದೆ ನಮ್ಮ ಈ ನಾಡಿನಲ್ಲಿ
ಆ ವಿದೇಶೀಯಳ ಕೈಕೆಳಗೆ ಭಾರತೀಯರೆಲ್ಲಾ ಬಂಧಿಗಳು ಈಗ ಇಲ್ಲಿ!

************

One Response to ಆಟಕ್ಕುಂಟು ಊಟಕ್ಕಿಲ್ಲ ಈ ನಾಡಿನಲ್ಲಿ!

  1. ಮಧುಸೂದನ ಹೇಳುತ್ತಾರೆ:

    ಭೂಮಿ ಕಿತ್ತುಕೊಂಡವರಿಗೆ ಪುಡಿಗಾಸು ನೀಡುತ್ತಿಲ್ಲರೀ ಪೊಗದಸ್ತಾಗಿಯೇ ಪರಿಹಾರ ನೀಡುತ್ತಿದ್ದಾರೆ.
    ಅಂತೆಯೇ ಎಲ್ಲಾ ಭೂಮಿಯನ್ನೂ ರೈತರಿಂದಲೇ ಕಿತ್ತುಕೊಳ್ಳುತ್ತಿಲ್ಲ; ಬಹಳ ರಾಜಕಾರಣಿಗಳಿಂದಲೂ ಕಿತ್ತುಕೊಂಡು ’ಪರಿಹಾರ’ ನೀಡಿದ್ದಾರೆ. ದಿನವೂ ಪತ್ರಿಕೆ ಓದುತ್ತಿದ್ದೀರಲ್ಲ?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: