ಕಾಡುವ ಪ್ರಶ್ನೆಗಳು!

 

ಪರಿಪಕ್ವವಾದ
ತೊಂಬತ್ತರ
ಇಳಿವಯಸ್ಸಿನಲ್ಲಿ,

ಕಾಯುತ್ತಿದ್ದರೂ
ಯಮರಾಜ
ಮನೆ ಬಾಗಿಲಿನಲ್ಲಿ,

ಅದ್ಯಾವುದೋ
ಅವ್ಯಕ್ತ ಸೆಳೆತಕ್ಕೆ
ಒಳಗಾಗಿ,

ದಿಢೀರನೇ
ಆತ್ಮಹತ್ಯೆಗೆ
ಶರಣಾಗಿ,

ಇಹಲೋಕ
ತ್ಯಜಿಸಿದವರ
ನೆನೆದು ನಾ
ನಿಜದಿ ಏನನ್ನಲಿ?

ತೃಪ್ತನಾಗನು
ಮನುಜ
ಪರಿಪಕ್ವನಾದರೂ,

ಹತ್ತಿಕ್ಕಲಾರ ತನ್ನ
ಆಸೆಗಳ, ಎಲ್ಲವೂ
ಮುಗಿದಿದ್ದರೂ,

ತನ್ನದೇನಿಲ್ಲದಿದ್ದರೂ,
ಎಲ್ಲವೂ ತನ್ನದೇ
ಎಂಬ ಭಾವವಿಹುದು,

ಜವಾಬ್ದಾರನಲ್ಲದೇ
ಇದ್ದರೂ, ಎಲ್ಲದಕೂ
ಮನ ಮರುಗುತಿಹುದು,

ತಾನೆಣಿಸಿದಂತೆ
ತನ್ನವರಿಲ್ಲ ಎಂಬ
ಕೊರಗು ಕಾಡಿರಬಹುದೇ?

ತಾನೆಣಿಸಿದಂತೆ
ತಾನೇ ಬಾಳಿಲ್ಲ ಎಂದಾ
ಆತ್ಮ ತೆರಳಿರಬಹುದೇ?

ಕೆಲವು ಪ್ರಶ್ನೆಗಳು,
ಸದಾ ಪ್ರಶ್ನೆಗಳಾಗೇ
ಉಳಿದು ಬಿಡುವವು,

ನಾವು ಮರೆಯಲು
ಯತ್ನಿಸಿದಷ್ಟೂ ಸದಾ
ನಮ್ಮನ್ನು ಕಾಡುವವು!
***********

6 Responses to ಕಾಡುವ ಪ್ರಶ್ನೆಗಳು!

  1. Santhosh ಹೇಳುತ್ತಾರೆ:

    ಕೆಲವು ಪ್ರಶ್ನೆಗಳು ಎಂದಿಗೂ
    ಪ್ರಶ್ನೆಯಾಗಿರುವವು
    ಉತ್ತರ ಗೊತ್ತಾದರೂ
    ಅದರಲ್ಲೊಂದು ಪ್ರಶ್ನೆ ಹುಟ್ಟಿ
    ಮುಗಿಯದ ಸರಪಳಿಯ ಸೃಷ್ಟಿಸುವವು

  2. Shamala ಹೇಳುತ್ತಾರೆ:

    ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ಬದುಕು…. ಎಷ್ಟು ಉತ್ತರ ಹುಡುಕಿಕೊಂಡರೂ…. ಕೊನೆಗೊಬ್ಬ ಪುಟ್ಟ ಶೇಷ ಉಳಿದೇ ಇರುತ್ತಾನೆ… ಅವನ ಮಹಿಮೆಯೇ ಅಪಾರ…. ಅದೇ ಬದುಕಿನ ಮರ್ಮ…. ಚೆನ್ನಾಗಿದೆ ಸುರೇಶ್..

    ಶ್ಯಾಮಲ

  3. shashijois ಹೇಳುತ್ತಾರೆ:

    ಒಳ್ಳೆ ಅರ್ಥಪೂರ್ಣ ಕವನ.ನಿಜ ಕೆಲವು ಪ್ರಶ್ನೆಗಳು ಉತ್ತರ ವಿಲ್ಲದೆ ಪ್ರಶ್ನೆಯಾಗೆ ಉಳಿದುಬಿಡುತ್ತಲ್ವಾ!!??

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: