ಭರತನ ಸ್ಥಿತಿಯೇ ಭಾರತದ ದುಸ್ಥಿತಿ!

18 ಆಗಸ್ಟ್ 10


ಭಾರತದ
ಸ್ವಾತಂತ್ರ್ಯ,
ಈ ರಾಜಕೀಯ
ನೇತಾರರ
ಕೈಯಲ್ಲಿ ಸೋತು
ಬಳಲುತ್ತಿದೆ,
ಅಂದ್ರೆ
ಸಾಕ್ಷಿ ಕೇಳ್ತೀರಲ್ಲಾ?

ಮೊನ್ನೆ
ಸ್ವಾತಂತ್ರ್ಯೋತ್ಸವದ
ದಿನದಂದು,
ಆ ಮಂತ್ರಿ
ಬಚ್ಚೇಗೌಡರ
ಕೈಯಲ್ಲಿ,
ಸಿಲುಕಿದ
ನಮ್ಮ
ಭರತನ,
ವ್ಯಕ್ತಿ ಸ್ವಾತಂತ್ರ್ಯ
ಇನ್ನೂ
ಬಳಲುತ್ತಿದೆಯಲ್ಲಾ?!

ಮಂತ್ರಿಯ
ಕಾರನ್ನು
ಬಳಸಿ
ಮುಂದೆ ಹೋದುದೇ
ಮಹಾಪರಾಧವಾಯ್ತೇ?

ಮಂತ್ರಿಗಳು
ಜನಸೇವಕರೆಂಬ
ಮಾತು,
ಬರಿಯ
ಮಾತಾಯ್ತೇ?

ನಮಗೆ
ಇದಕ್ಕಿಂತ
ಹೆಚ್ಚಿಗೆ
ಸಾಕ್ಷಿ
ಬೇರೇನು
ಬೇಕು?

ನಮ್ಮ ಭಾರತ
ಮಾತೆಯನ್ನು
ಗೋಳು
ಹೊಯ್ದುಕೊಳ್ಳುತ್ತಿರುವವರು
ಯಾರೆಂಬ
ಪ್ರಶ್ನೆಗೆ
ಉತ್ತರ
ಬೇರೆಲ್ಲಿ
ಹುಡುಕಬೇಕು?

ಆ ಭರತನ
ನಾಡೇ
ಭಾರತವಾಯ್ತು,
ಈ ಭರತನ
ಸ್ಥಿತಿಯೇ
ಭಾರತದ
ದುಸ್ಥಿತಿ ಎಂಬ
ಅರಿವಾಯ್ತು!
******


ಏಕೆ ಸಿಕ್ಕೀತು ನನಗಿಂದು?!

17 ಆಗಸ್ಟ್ 10

ಎಂದೋ
ಗೀಚಿ
ಮರೆತಿದ್ದ,
ಕವಿತೆಯೊಂದು
ಕನಸಿನಲಿ ಬಂದು,
ನನಗೂ ಪ್ರಕಾಶ
ನೀಡು ಎಂದು,
ಕಾಡಿತು
ಬೇಡಿತು ಇಂದು;

ನಿದ್ದೆಯಿಂದೆದ್ದು
ಹುಡುಕಾಡಿದೆ,
ತಡಕಾಡಿದೆ,
ಎಲ್ಲಾ ಪುಸ್ತಕಗಳ
ಕೊಡವಿದೆ,
ಎಲ್ಲೂ ಸಿಗಲಿಲ್ಲ;

ಹೇಗೆ
ಸಿಕ್ಕೀತು?
ಏಕೆ
ಸಿಕ್ಕೀತು?

ಯೌವನದ
ದಿನಗಳಲಿ,
ಚಿಗುರುಮೀಸೆಯ
ಹುಡುಗನ,
ಹೃದಯ
ಬಡಿತವ
ಹೆಚ್ಚಿಸಿ,
ರಾತ್ರಿಗಳಲಿ
ನಿದ್ದೆಯ
ಕೆಡಿಸಿ,
ಕನಸುಗಳ
ಮೂಡಿಸಿ,
ಅದೊಂದು
ದಿನ ಸದ್ದಿಲ್ಲದೇ,
ನೆನಪಿನಂಗಳದಿಂದ
ಮರೆಯಾದವಳು
ಅವಳು ಅಂದು,

ಅವಳ
ಬಟ್ಟಲು ಕಂಗಳ,
ಮುಂಗುರುಳುಗಳ,
ಮಧುರ ಮಾತುಗಳ,
ನೀಳ ಕೈಗಳ,
ಕೆಂಪು ತುಟಿಗಳ,
ಬಣ್ಣಿಸಿ ಬಣ್ಣಿಸಿ,
ಗೀಚಿದ್ದ
ಆ ಕವಿತೆ,
ಹೇಗೆ
ಸಿಕ್ಕೀತು
ಏಕೆ
ಸಿಕ್ಕೀತು
ನನಗಿಂದು?
*****


ಸ್ವಯಂ ನಾಶ!

16 ಆಗಸ್ಟ್ 10

 

ತುಕ್ಕು

ಕಾರಣ,

ಸ್ವಯಂ

ನಾಶ

ಆಗಲು,

ಉಕ್ಕು;

 

ಅಹಂ

ಕಾರಣ,

ಮನುಜ

ನಾಶ

ಆಗಲು,

ಸ್ವಯಂ!

*****


ಒಂಟಿತನವೇ ಮೇಲು!

16 ಆಗಸ್ಟ್ 10

 

ನಮ್ಮನ್ನು

ಸರಿಯಾಗಿ

ಅರಿಯದೇ

ಇರುವವರ

ಮತ್ತು

ಅರಿಯಲು

ಯತ್ನಿಸದವರ

ಸತತ

ಸಖ್ಯಕ್ಕಿಂತ

ಒಂಟಿತನವೇ

ಮೇಲು!

*****


ಒಳ್ಳೆಯವರೆನಿಸುತ್ತಾರೆ ನನಗೆ ಆ ಪರದೇಶಿಗಳು!

13 ಆಗಸ್ಟ್ 10

ಪರದೇಶಿಗಳ ದಾಸ್ಯದಿಂದ
ಸಿಕ್ಕಿತೆನಗೆ ಅಂದು ಮುಕ್ತಿ,
ಕೊನೆಗೂ ಸಫಲವಾಗಿತ್ತು
ನನ್ನ ಎಲ್ಲಾ ಮಕ್ಕಳ ಯುಕ್ತಿ;

ನವ ವಧುವಿನಂತೆ ನನ್ನನ್ನು
ಶೃಂಗಾರ ಮಾಡಿದರಂದು,
ನನ್ನ ಮಕ್ಕಳ ಸ್ವಾಧೀನಕ್ಕೆ
ಒಪ್ಪಿಸಿಬಿಟ್ಟರು ನನ್ನನಂದು;

ಮುದುಕನಲ್ಲದಿದ್ದರೂ ಆತನಿದ್ದ
ಯುವಕನಾಗಿರದ ಸ್ಪುರದ್ರೂಪಿ,
ಗದ್ದುಗೆಯೇರಿದ ಮೇಲೆ ಅರಿತೆ
ಆತ ನಿಜವಾಗಿಯೂ ಬಹುರೂಪಿ;

ದಾಸ್ಯದಿಂದ ನನ್ನನ್ನು ಬಿಡಿಸಿದರೂ
ಸೋತಿದ್ದ ವಿದೇಶಿಯಳ ಲಾಸ್ಯಕ್ಕೆ,
ವಿಷಯ ಸಾರ್ವಜನಿಕವಾಗಿ ಆತ
ಆಗಾಗ ಒಳಪಟ್ಟಿದ್ದ ಅಪಹಾಸ್ಯಕ್ಕೆ;

ತನ್ನೆಲ್ಲಾ ಚತುರತೆಯಿಂದ ಆತ
ಮೆರೆದ ತಾನು ಸಾಯೋ ತನಕ,
ಆತನಳಿದ ಮೇಲೆ ಬಂದಿದ್ದ  ಲಾಲ
ಬಹದ್ದೂರ ಆತ ನಿಜದಿ ಜನಸೇವಕ;

ಆದರೆ, ಅಳಿದವನ ಮಗಳ ಪಾಲಿಗೆ
ಆಗಿತ್ತು ಆ ವಿಷಯ ಅಸಹನೀಯ,
ಹೆಸರು ಬಹದ್ದೂರನಾದರೂ ಆತ
ಸಾಯಬೇಕಾದುದು ವಿಶಾದನೀಯ;

ಬಹದ್ದೂರ ಅನುಮಾನಾಸ್ಪದವಾಗಿ
ಸತ್ತಿದ್ದು ದೂರದ ಆ ತಾಷ್ಕೆಂಟಿನಲ್ಲಿ,
ಈ ದೇಶದಲ್ಲಿ ಭ್ರಷ್ಟಾಚಾರದ ಬೀಜ
ಬಿತ್ತನೆಯಾಯ್ತು ಆ ವಿಷಗಳಿಗೆಯಲ್ಲಿ;

ಮತ್ತೇನಿಲ್ಲ,  ಶುರು ಆಯ್ತು ಅಲ್ಲಿಂದ
ಅಧಿಕಾರಕ್ಕೇರಿದವಳ ಸರ್ವಾಧಿಕಾರ,
ಒಳ್ಳೆಯದು ಕಡಿಮೆ, ಆಕೆ ಬೀಜ ಹಾಕಿ
ಹೋದ ಕೆಟ್ಟ ರೂಢಿಗಳೇ ಅಪಾರ;

ವಂಶವನು ಮೆರೆಸುವ ಹೆಬ್ಬಯಕೆಯಲಿ
ಆಕೆ ನನ್ನ ಕ್ಷೇಮಾವೃದ್ಧಿಯ ನಿರ್ಲಕ್ಷಿಸಿ,
ತಾಂಡವನೃತ್ಯವನೇ ಮಾಡಿದಳು ಈ
ನಾಡಲಿ ದುರ್ಗೆಯ ರೂಪವನು ಧರಿಸಿ;

ನ್ಯಾಯಾಂಗವನ್ನು ತನ್ನಡಿಯಾಳಾಗಿಸಿ
ಶಾಸಕಾಂಗವ ಅಮಾತಿನಲ್ಲಿಡಿಸಿದಳು,
ಕಿರಿಮಗನೊಂದಿಗೆ ಸೇರಿ ತನ್ನ ಮಿತಿ
ಮೀರಿ ಅನಾಚರ ನಡೆಸಿ ಮೆರೆದಳು;

ಅಂದಿನಿಂದ ಇಂದಿಗೂ ಮುಕ್ತಿ ಸಿಕ್ಕಿಲ್ಲ
ಭ್ರಷ್ಟಾಚಾರ ಮತ್ತು ಅನಾಚಾರಗಳಿಂದ,
ಏನು ಸಾಧಿಸಿದರೋ ಮಕ್ಕಳು ನನ್ನನ್ನು
ಬಿಡಿಸಿ ಆ ಪರದೇಶಿಯರ ದಾಸ್ಯದಿಂದ;

ಇಂದಿಗೂ ಇಲ್ಲಿ ಅಧಿಕಾರ ವಿದೇಶಿಯದ್ದೇ
ಆಕೆಯ ಸೆರಗಿನ ಹಿಂದೆ ಭ್ರಷ್ಟಾಚಾರಿಗಳು,
ಒಂಟಿಯಾಗಿ  ಅಳುತ್ತೇನೆ ನನಗಿವರಿಗಿಂತ
ಒಳ್ಳೆಯವರೆನಿಸುತ್ತಾರೆ ಆ ಪರದೇಶಿಗಳು!
******************

 


ಸಖೀ, ನಾನು ಮೌನಿಯಾಗಿರುವೆ!

13 ಆಗಸ್ಟ್ 10

ಸಖೀ,

ನೀನು,

ನಾನಾಡುವ

ಮಾತುಗಳನ್ನು

ಅರಿಯಳಾದೆಯಾದರೆ,

ನಾನು

ಮೌನಿಯಾಗಿರುವೆ;

 

ನಾನು

ಮಾತನಾಡದೇ,

ನನ್ನ ಮನದ

ಭಾವನೆಗಳನ್ನು,

ನೀನು

ಅರಿವೆಯಾದರೂ,

ನಾನು

ಮೌನಿಯಾಗಿರುವೆ!

***********

 


“ಸರಿ, ನಾ ಬರ್ಲಾ…?” ಅಂದಾಗ!

11 ಆಗಸ್ಟ್ 10

ನೀನು ಬಸ್ಸಿನೊಳಗೆ

ಕುಳಿತು ಕೈಯನ್ನಾಡಿಸಿ,

ನನ್ನತ್ತ ನಸುನಗೆ ಬೀರಿ,

“ಸರಿ, ನಾ ಬರ್ಲಾ..?”

ಅಂದಾಗ,

ಆಗಿತ್ತು ಸಖೀ,

ಈ ಹೃದಯದಲ್ಲಿ

ಅದೇನೋ ಅವ್ಯಕ್ತ

ನೋವು,

 

ನಿನಗೇಕೆ

ಅರ್ಥವಾಗುವುದಿಲ್ಲ,

ಬದುಕಲಾಗುವುದಿಲ್ಲ

ಇನ್ನು, ಪರಸ್ಪರರಿಂದ

ದೂರ ದೂರವಾಗಿ,

ನಾವು;

 

ನೀನಿಲ್ಲದ ಊರಿನಲ್ಲಿ

ಇನ್ನು ನಾಲ್ಕು ದಿನ

ನಾನು ಹೇಗೆ ಕಳೆಯಲಿ

ಎಂಬುದೇ ನನ್ನ ಈಗಿನ

ಬಹುದೊಡ್ಡ ಸಮಸ್ಯೆ,

 

ಹೋಗುವವರನ್ನಲ್ಲ,

ಇಲ್ಲಿ ಉಳಿದವನನ್ನಷ್ಟೇ

ಕಾಡುತ್ತದೆ ಇಲ್ಲಿನ

ಪ್ರತಿಯೊಂದು ವಸ್ತು,

ಜಾಗ, ಸಿಕ್ಕಿಕೊಂಡಾಗ

ನಾನು ಒಂಟಿಯಾಗಿ

ಅವುಗಳ ಮಧ್ಯೆ!

********


ನಮ್ಮ ದೇಶದಲ್ಲೀಗ ಎರಡೇ ಜಾತಿಗಳು!

11 ಆಗಸ್ಟ್ 10ನಮ್ಮ
ದೇಶದಲ್ಲೀಗ
ಇಲ್ಲ ಸ್ವಾಮೀ
ನೂರೆಂಟು
ಜಾತಿಗಳು,

ಇಲ್ಲೀಗ
ನಿಜವಾಗಿಯೂ
ಇರುವುದು
ಎರಡೇ
ಎರಡು
ಜಾತಿಗಳು;

ಅಸಹಾಯಕ
ನಾಗರಿಕರದ್ದು
ಒಂದುಜಾತಿ,

ಅವರದ್ದನ್ನೆಲ್ಲಾ
ಕಸಿದು ತಿನ್ನುವ
ಭ್ರಷ್ಟಾಚಾರಿಗಳದ್ದು
ಒಂದು ಜಾತಿ!
******


ಅದೂ ಸುಳ್ಳಲ್ಲ!

09 ಆಗಸ್ಟ್ 10

ತನ್ನಿಂದ

ತಪ್ಪು ಕೆಲಸ

ನಡೆಯಬಾರದು

ಎನ್ನುವ ಎಚ್ಚರ

ಮನದೊಳಗೆ

ಸದಾ ಇರುವುದು

ನಿಜವಾಗಿಯೂ

ಸುಳ್ಳಲ್ಲ;


ಆದರೆ,

ಅದೇ ಮನದೊಳಗೆ

ಕನಸುಗಳ,

ಆಸೆಗಳ

ಮೂಡುವಿಕೆ

ತನ್ನ ಹಿಡಿತದಲ್ಲಿ

ಇರುವುದಿಲ್ಲ

ಅನ್ನುವುದೂ

ಸುಳ್ಳಲ್ಲ!

*******


ಎಚ್ಚರಗೊಂಡರೆ ಜ್ಞಾನಿ!

09 ಆಗಸ್ಟ್ 10

ಮನಸ್ಸಿನಲ್ಲಿ

ಆಸೆಗಳು

ಮೂಡುವಾಗ

ಮನುಜ

ಒಂದು ಚಿಕ್ಕ

ಮಗುವಿನಂತೆ;


ಆದರೆ,

ಬುದ್ಧಿ

ಆತನನ್ನು

ಅವುಗಳ

ವಿರುದ್ಧವಾಗಿ

ಎಚ್ಚರಿಸಿದಾಗ

ಅದೇ ಮನುಜ

ಪ್ರಬುದ್ಧ

ಜ್ಞಾನಿಯಂತೆ!
*******