ಸಖೀ, ಹೊಗಳದಿರು ನೀನೀ ಪರಿ!

ಸಖೀ,
ನನ್ನನ್ನು ಎಂದಿಗೂ
ಹೊಗಳದಿರು
ನೀನೀ ಪರಿ
ಅನ್ಯರ ಮುಂದೆ,

ಮತ್ಸರದ ಬೀಜ
ಮೊಳಕೆಯೊಡೆಯೆ
ಹುಟ್ಟಿಕೊಳ್ಳುವರು
ನನ್ನ ವೈರಿಗಳು
ನಿನ್ನ ಕಣ್ಮುಂದೆ;

ನನ್ನ
ನೀನರಿತಿರುವೆ
ನನಗದಷ್ಟೇ
ಸಾಕು,

ನಿನ್ನ
ಹೊಗಳಿಕೆಯ
ಮಾತುಗಳು
ನನಗೇಕೆ ಬೇಕು?

ನೀನು
ನನ್ನವಳಾದಂತೆ
ಎಲ್ಲರವಳಾಗಬೇಕೆಂಬ
ಆಸೆ ಜನರ ಮನದಲ್ಲಿ,

ನೀನು ನನ್ನನ್ನು
ಹೊಗಳುವಂತೆ
ಅವರನ್ನೂ ಹೊಗಳಲಿ
ಎಂಬಾಸೆ ತುಂಬಿದೆಯವರಲ್ಲಿ;

ನೀನು
ನನ್ನನ್ನು
ಸಾರ್ವಜನಿಕವಾಗಿ
ಹೊಗಳಿ
ಪ್ರಖ್ಯಾತನನ್ನಾಗಿಸದಿದ್ದರೂ
ಪರವಾಗಿಲ್ಲ ಬಿಡು,

ನೂರಾರು
ವೈರಿಗಳು ಈ ರೀತಿ
ಹುಟ್ಟುಕೊಳ್ಳುವುದಕ್ಕಿಂತ
ನೀನೊಬ್ಬಳೇ
ನನಗೆ ಸಾಕು ನೋಡು!
***********

2 Responses to ಸಖೀ, ಹೊಗಳದಿರು ನೀನೀ ಪರಿ!

  1. ksraghavendranavada ಹೇಳುತ್ತಾರೆ:

    ಸಖಿಗೆ ಎ೦ದೋ ಈ ಮಾತನ್ನು ಹೇಳಬೇಕಿತ್ತು! ಆದರೂ ಏನು ಬ೦ದರೂ, ಎಷ್ಟು ವೈರಿಗಳು ಹುಟ್ಟಿಕೊ೦ಡರೂ ಅವರನ್ನೆಲ್ಲಾ ಮಟ್ಟ ಹಾಕುವ ತಾಕತ್ತು ಆಸುಮನಕ್ಕಿದೆ! ಎ೦ಬುದು ನನ್ನ ಅರಿವಿನಲ್ಲಿದೆ.
    ನಮಸ್ಕಾರಗಳೂ೦ದಿಗೆ,

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: