ಮಧುಚಂದ್ರ ಮುಗಿದ ಮೇಲೆ…!

ಕೆಲವು
ಬಾಂಧವ್ಯಗಳೇ
ಹೀಗೆ,

ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ;

ಮೊದಲ
ಭೇಟಿಯ
ಆ ಮೊದಲ
ಮಾತಿನಿಂದಲೇ
ಮೋಡಿಗೊಳಗಾಗುವರು,

ತನ್ನ ಯಾವುದೋ
ಸದಭಿಪ್ರಾಯದ
ಮಾತುಗಳಿಗೆ
ಸಹಮತ
ವ್ಯಕ್ತಪಡಿಸಿದ್ದಕ್ಕೇ
ಮೆಚ್ಚಿ ಕೊಂಡಾಡುವರು;

ಬರಸೆಳೆದು
ಆಲಿಂಗನ ನೀಡಿ
ಬೆನ್ನು ತಟ್ಟಿ
ನೀವೆನಗೆ
ಹತ್ತಿರದವರೆಂದು
ಮುಖಸ್ತುತಿ ಮಾಡುವರು,

ದಾರಿಯಲಿ
ಹೋಗುವವನ
ಮನೆಗೆ ಕರೆದು
ಯಾವುದೋ ಜನ್ಮದ
ಬಂಧುವೆಂದು
ಸತ್ಕರಿಸಿ
ಸಂತಸಪಡುವರು;

ನಾಲ್ಕಾರು ದಿನ
ವಾರಗಳಾದಾಗ,
ವಸ್ತುನಿಷ್ಟ ಅಭಿಪ್ರಾಯಗಳು
ಬರಲು ಆರಂಭಿಸಿದಾಗ,
ಆ ಮೊದಲ ಮಾತನೇ
ಮರೆಸುವ ಮಾತುಗಳು
ನೂರಾರು ಬಂದಾಗ,
ಬಂಧು ಎಂದವನನೇ
ಅಳೆಯುವುದಕೆ
ಆರಂಭಿಸುವರು,

ತಿಂಗಳು
ಕಳೆಯುವಷ್ಟರಲ್ಲಿ
ಅಸಡ್ದೆ
ತೋರಿಸತೊಡಗಿ
ಸಂಪೂರ್ಣವಾಗಿ
ನಿರ್ಲಕ್ಷಿಸಲು
ಪ್ರಾರಂಭಿಸುವರು;

ತಮ್ಮದೇ
ತಪ್ಪುಗ್ರಹಿಕೆಗೆ
ತಾವೇ
ಬಲಿಯಾಗುವರು,

ಅನ್ಯರ
ಪಾಲಿಗೆ ಬರಿ ಒಂದು
ದುಃಸ್ವಪ್ನವಾಗಿ
ಕಾಡಿ ಹೋಗುವರು;

ಇವರು ತಮ್ಮೆಲ್ಲಾ
ಮಾತುಗಳಿಗೆ
ಹೂಂಗುಟ್ಟುವವರ
ಅರಸುತಿರುವವರು,

ತಮ್ಮ ಸಂಗಡ
ಗುರುತಿಸಿಕೊಳ್ಳಲು
ಮಂದಿ ಬೇಕೆಂದು
ಹಾತೊರೆಯುವವರು;

ಇಂಥವರು
ನಮ್ಮ ಬಾಳಲ್ಲಿ
ಇದ್ದರೆಷ್ಟು?
ಇಲ್ಲದಿದ್ದರೆಷ್ಟು?

ಬಲು ನಿಧಾನದಿ
ಮನದ ಬಾಗಿಲ
ತೆರೆದು ಹೃದಯವನೇ
ಸೇರಿಕೊಂಬವರು
ಈಗ ಇದ್ದಾರೆಷ್ಟು?

ಕೆಲವು
ಬಾಂಧವ್ಯಗಳೇ
ಹೀಗೆ,

ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ!
****

7 Responses to ಮಧುಚಂದ್ರ ಮುಗಿದ ಮೇಲೆ…!

 1. ಶಶಿ ಜೆನ್ನಿ ಹೇಳುತ್ತಾರೆ:

  ಗೆಳೆಯ,
  ಭಾವನೆಗಳೇ ಹಾಗೆ. ಹುಚ್ಚು ಮನಸ್ಸು, ಯೋಚನೆಗಳೇ ಹಾಗೆ. ಈಗಿನ ಕಾಲಕ್ಕಂತೂ ತೀರ ಪ್ರಸ್ತುತ ನಿನ್ನ ಕವನ.
  ಅಭಿನಂದನೆಗಳು.

 2. ಹೇಮಾ ದೇವಾಡಿಗ ಹೇಳುತ್ತಾರೆ:

  ಜನರ ಬಾಂಧವ್ಯಗಳೇ ಅಷ್ಟೇ. ನಮ್ಮನ್ನು ಸದಾ ಎಚ್ಚರಿಕೆಯಲ್ಲಿ ಇರುವಂತೆ ಮಾಡುತ್ತದೆ ಈ ಕವನ.
  ಕ್ಷಣಿಕವಾದುದನ್ನು ನಂಬಿದರೆ ಕೊನೆಗೆ ದುಃಖವೇ ಗತಿ.
  ತುಂಬಾ ಚೆನ್ನಾಗಿದೆ ಕವನ.

 3. ನಾಣಯ್ಯ ಡಿ. ಸಿ. ಹೇಳುತ್ತಾರೆ:

  ಚರ ಪ್ರಪಂಚದಲ್ಲಿ ಸ್ಥಿರ ಬಾಂಧವ್ಯ ಉಳಿಯ ಬೇಕೆಂಬ ನಿಮ್ಮ ಇಚ್ಛೆಗೆ ಸ್ವಾಗತ
  ಬಾಂಧವ್ಯಗಳಲ್ಲಾಗುವ ಬದಲಾವಣೆಯ ನೋವು ನಿಮ್ಮ ಕವನದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

 4. ksraghavendranavada ಹೇಳುತ್ತಾರೆ:

  ಹೌದು! ಮಧುಚ೦ದ್ರ ಮುಗಿದಿದೆ. ಪುನ: ಆರ೦ಭವಾಗಬಹುದು.ಆದರೆ ಎರಡನೇ ಮಧುಚ೦ದ್ರವು ಎರಡನೆಯದ೦ತೆ ತಾತ್ಕಾಲಿಕವಾಗದೆ ಶಾಶ್ವತವಾಗಿರಲೆ೦ವುದು ನನ್ನ ಆಶಯ.
  ನಮಸ್ಕಾರಗಳೊ೦ದಿಗೆ,

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: