ಕೊಡುವಾತ ಸೋಲುವುದಿಲ್ಲ…!

ಬಾವಿಗೇ
ಬಾಯಾರಿಕೆಯಾದಾಗ
ಎಂಬ ಆಸುಮನದ
ಕಲ್ಪನೆಯ ಮಾತುಗಳ
ಓದಿ ಮೆಚ್ಚಿದ, ಓದುಗ
ಮಹಾಶಯಯರು,

“ಮೋಡಗಳಿಗೇ
ಬಾಯಾರಿಕೆಯಾದರೆ?”
ಎಂಬ ಪ್ರಶ್ನೆಯನ್ನು ಈ
ಆಸುಮನದಲ್ಲಿ ಬಿತ್ತಿ
ಹೋಗಿರುವರು;

ಬಾವಿ
ಕಾವೇರಿದಾಗ
ಬತ್ತಿ ಬಾಯಾರಿದಾಗ
ನೀರ ಬೇಡಿಕೆ ಸಲ್ಲಿಸಿ
ಕಾಯುವುದು ದಿನವೆಲ್ಲಾ,

ಮೋಡಗಳರಾಶಿಗೆ
ಕಾವೇರಿದಾಗ,
ರಾಶಿ ರಾಶಿಯಾಗಿ
ಸಾಲು ಸಾಲಾಗಿ
ಇನ್ನೂ ಹಗುರಾಗಿ
ಮೇಲೇರುತ್ತವೆ,
ಅವುಗಳಿಗೆಂದೂ
ನೀರಡಿಕೆಯೇ ಇಲ್ಲ;

ಮನುಜನೀ
ಮರ್ತ್ಯಲೋಕದಲಿ
ತನ್ನ ಬೇಡಿಕೆಗಳ
ಪಟ್ಟಿಯನ್ನು
ಬೆಳೆಸುತ್ತಲೇ
ಇರುವನು,
ಹಗಲಿರುಳೂ
ಬೇಡೀಕೆಗಳ
ಸಲ್ಲಿಸುತ್ತಲೇ
ಇರುವನು,

ಮೇಲಿರುವ
ಕೊಡುವಾತ,
ಎಂದಿಗೂ
ಕೈಸೋಲದೇ
ನೀಡುತ್ತಲೇ
ಇರುವನು,
ಆತ ಸೋಲುವುದಿಲ್ಲ
ಸೋತು ನಿಲ್ಲುವುದಿಲ್ಲ
ಆತನೆಂದಿಗೂ ಅನ್ಯರಿಂದ
ಬೇಡದೇ ತೃಪ್ತನಾಗೇ
ಇರುವನು;

ಬೇಡುವವರು
ಸದಾ ಅತೃಪ್ತರಾಗಿ
ಬೇಡುತ್ತಲೇ
ಇರುವರು,

ನೀಡುವವರು
ತೃಪ್ತಮನದಿ
ಸದಾ ನೀಡುತ್ತಲೇ
ಇರುವರು!
*****

6 Responses to ಕೊಡುವಾತ ಸೋಲುವುದಿಲ್ಲ…!

 1. ಬಾವಿಗೇ ಬಾಯಾರಿಕೆ ಆದಾಗ“ ಕವನದ ಪ್ರತಿಕ್ರಿಯೆಯಲ್ಲಿ ನಾನೊ೦ದು ಮಾತು ಹೇಳಿದ್ದೆ. ಆ ಶೀರ್ಷಿಕೆಯನ್ನು ಪಾರಮಾರ್ಥಿಕವಾಗಿ ತೆಗೆದುಕೊ೦ಡರೆ ಅಪಾರ ಎ೦ದು. ಅದನ್ನು ಈ ಕವನದ ಮೂಲಕ ನಿರೂಪಿಸಿ ಬಿಟ್ಟಿರಿ. ಇ೦ಥವುಗಳಿಗೇ ಆಸುಮನವು ನನ್ನ ಮನಸ್ಸನ್ನು ಸ್ಪ೦ದಿಸುವ೦ತೆ ಮಾಡುವುದು.
  ನಮಸ್ಕಾರಗಳೊ೦ದಿಗೆ

 2. ನಾಣಯ್ಯ ಡಿ.ಸಿ ಹೇಳುತ್ತಾರೆ:

  ಇಂಥ ಅಮೂಲ್ಯ ಜ್ಞಾನವನ್ನು ಹೊಂದಿರುವ ಕವನಗಳು ತುಂಬಾ ಬರಲಿ
  ಎಲ್ಲರ ಧಮನಿ ಧಮನಿಯಲೂ ಇಂಥ ವಿಚಾರ ಹರಿಯುತ್ತಿರಲಿ
  ಅಮೂಲ್ಯ ಮಾಹಿತಿಗಳಿಗಾಗಿ ಧನ್ಯವಾದಗಳು.

 3. ಬೆಳ್ಳಾಲ ಗೋಪಿನಾಥ ರಾವ್ ಹೇಳುತ್ತಾರೆ:

  ಹೌದು ನಿಜ ಕೊಡುವಾತ ಎಂದೂ ಸೋಲ
  ತುಂಬಾ ಚೆನ್ನಾಗಿ ಬರೆದಿರಿ ಹೆಗಡೆಯವರೇ
  ಉತ್ತಮ ಕವನ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: