ಬಾವಿಗೇ ಬಾಯಾರಿಕೆಯಾದಾಗ!

 

ಊರಿನವರೆಲ್ಲಾ
ನೀರು ಪಡೆಯುತ್ತಿದ್ದ
ಊರ ಬಾವಿಗೆ
ಅಂದು ಎಲ್ಲಿಲ್ಲದ
ಬಾಯಾರಿಕೆ,
ಅದು ಬೇಸರದಿಂದ
ಮೇಲೆ ನೋಡುತ್ತಾ
ಬಾನಿಗೆ ಸಲ್ಲಿಸಿತು
ತಾನು ಕೋರಿಕೆ;

ಬಾನು ಭಾನುವನ್ನು
ಕರೆದು ವಹಿಸಿತು
ಇದರ ಜವಾಬ್ದಾರಿ,
ಉರಿಯುವ ಭಾನುವಿಗೆ
ಏನು ಮಾಡಲೂ
ತೋಚದಾಯಿತು ದಾರಿ;

ವಾಯುವನು
ಪುಸಲಾಯಿಸಿ
ಬಿನ್ನವಿಸಿಕೊಂಡ
ತೋರಲು ಪರಿಹಾರ,
ವಾಯು ಕೂಡಲೇ
ಎಲ್ಲಿಂದಲೋ ಭರದಿಂದ
ಅಟ್ಟಿಸಿಕೊಂಡು ಬಂದ
ಮೇಘಗಳ ಮಹಾಪೂರ;

ಭಾನು ತನ್ನ ಉರಿ ತಗ್ಗಿಸಿ
ಮೇಘಗಳಿಗೆ ತಂಪು ನೀಡಿ
ತನ್ನ ಕೆಲಸ ಆಯಿತೆಂದ,
ಮೇಘಗಳು ಧಾರಾಕಾರ
ಮಳೆಸುರಿಸಿ ಆ ಬಾವಿಗೆ
ನೀಡಿದವು ಮಹದಾನಂದ;

ಬಾವಿಯ ಬಾಯಾರಿಕೆ
ಪೂರ್ಣ ತಣಿದಿದೆ ಈಗ,
ಎಲ್ಲರೂ ನೀರು ಪಡೆಯುವರು
ತಮಗೆ ಬೇಕೆನಿಸಿದಾಗ!
***********

8 Responses to ಬಾವಿಗೇ ಬಾಯಾರಿಕೆಯಾದಾಗ!

 1. ನಾಣಯ್ಯ ಡಿ.ಸಿ. ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ.
  ಬಾವಿಯ ಸ್ವಾರ್ಥರಹಿತ ಬೇಡಿಕೆಗೆ, ದೇವರ ಕಾಳಜಿ ಸಹಿತ ನೀಡಿಕೆ
  ಈ ಕವನ ನಿಸ್ವಾರ್ಥ ಭಾವನೆಯ ಮಹಿಮೆಗೆ ಸಂದೇಶದಂತಿದೆ.

 2. ಮಧುಸೂದನ ಹೇಳುತ್ತಾರೆ:

  ಪ್ರಕೃತಿಯಲ್ಲಿ ತನ್ನಷ್ಟಕ್ಕೇ ನಡೆಯುವ ಸಮನ್ವಯವನ್ನು ಅದ್ಭುತವಾಗಿ ಶಬ್ದಗಳಲ್ಲಿ ಪೋಣಿಸಿದ್ದೀರಿ.

 3. ಜಯಪ್ರಸಾದ ರಾವ್ ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ. 🙂

 4. ksraghavendranavada ಹೇಳುತ್ತಾರೆ:

  ಒ೦ದು ಸಾಧಾರಣ ಕಲ್ಪನೆಯು ಊಹಿಸಲಸಾಧ್ಯ ರೀತಿಯಲ್ಲಿ ಆಸುಮನದ ಮಾತುಗಳಲ್ಲಿ ವ್ಯಕ್ತಗೊ೦ಡಿದೆ! ಅಕಸ್ಮಾತ್ ಪಾರಮಾರ್ಥಿಕವಾಗಿ ಏನಾದರೂ ಶೀರ್ಷಿಕೆಯನ್ನೇ ತೆಗೆದುಕೊ೦ಡರೆ, ಅದರಲ್ಲಿನ ಗೂಡಾರ್ಥ ಅಪಾರ!
  ನಮಸ್ಕಾರಗಳೊ೦ದಿಗೆ

  • ರಾಘವೇಂದ್ರ,
   ಪ್ರಕೃತಿಯಲ್ಲಿನ ಪರಾವಲಂಬನೆ, ಹೊಂದಾಣಿಕೆ, ಪರೋಪಕಾರ ಮನೋಭಾವ, ಇವನ್ನೆಲ್ಲಾ ಕಂಡು ಗುರುತಿಸಿ ಅರ್ಥೈಸಿಕೊಳ್ಳುವ ಮನೋಭಾವ ಮಾನವನಲ್ಲಿ ಬೆಳೆದರೆ ಮಾತ್ರ ಮಾನವ ಮಾನವನಾಗಿ ಉಳಿಯಬಲ್ಲ, ಎನ್ನುವುದು ನನ್ನ ನಂಬಿಕೆ.
   ನಿಮ್ಮ ಸದಭಿಪ್ರಾಯದ ಅನಿಸಿಕೆಗಳಿಗೆ ಧನ್ಯವಾದಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: