ಸುಖಾಂತ್ಯ ಕಂಡ ರಕ್ಷಾಬಂಧನದ ಎಡವಟ್ಟು!

 

ನಿನ್ನೆ
ರಕ್ಷಾಬಂಧನದ
ದಿನದಂದು,
ನಾ ರವಾನಿಸಿದ್ದ
ಸಂದೇಶ ಕಂಡು,
ಉರಿದು ಕೆಂಪಾಗಿ,
ಕರೆಮಾಡಿ ಬೈಗುಳದ
ಸುರಿಮಳೆಗೈದು,
ನನ್ನ ಭೇಟಿಗಾಗಿ
ಕಾಯುತ್ತಿದ್ದಳಾಕೆ;

ಸಂಜೆ ನಾನು ನನ್ನೆಲ್ಲಾ
ಜಾಣ್ಮೆಯನ್ನು ಒರೆಗೆ ಹಚ್ಚಿ,
ಹೊಸ ಹೊಸ ಕಥೆಗಳನ್ನು
ಮನದಲ್ಲೇ ಹೆಣೆದುಕೊಂಡು,
ಅಂಜುತ್ತಲೇ ಆಕೆಯ
ಮುಂದೆ ಹೋಗಿ ನಿಂತಾಗ,
ಹುಸಿಗೋಪವನೂ ತೋರದೇ
ಬಿಸಿ ಬಿಸಿ ಕಾಫಿಯೊಂದಿಗೆ
ಸಿಹಿತಿಂಡಿಯನೂ ನೀಡಿದಾಗ,
ನನ್ನ ಕಣ್ಣುಗಳನ್ನೇ
ನಾನು ನಂಬದವನಾದೆ;

ನಾನು ಮಾತನಾಡಲು
ಬಾಯ್ಬಿಡುವ ಮೊದಲೇ,
“ತಪ್ಪಾಯ್ತು ಕಣ್ರೀ
ಏನೇನೋ ಬೈದ್ ಬಿಟ್ಟೆ,
ನೀವೇನು ಅಂತ ನನಗೆ
ಗೊತ್ತಿಲ್ಲಂತೀರಾ…
ನೀವು ಬೇಕಾದ್ರೆ ಇನ್ನೂ
ನೂರಾರು ಹೆಣ್ಣುಗಳನ್ನು
ಸಹೋದರಿಯರನ್ನಾಗಿ
ಸ್ವೀಕರಿಸಿಕೊಂಡು,
ಅವರೆಲ್ಲರಿಂದ ನೀವು
ರಾಖಿ ಕಟ್ಟಿಸಿಕೊಂಡರೂ
ಪರವಾಗಿಲ್ಲರೀ ನನಗೆ,
ಆದರೆ,
ದಯವಿಟ್ಟು ಇನ್ನಾರನ್ನೂ
“ಸಖೀ” ಎಂದು ಕರೆಯದಿರಿ,
ನನಗದಷ್ಟೇ ಸಾಕು…”

ಹೇಳಿ ನನಗಿನ್ನೇನು ಬೇಕು…?
***************

14 Responses to ಸುಖಾಂತ್ಯ ಕಂಡ ರಕ್ಷಾಬಂಧನದ ಎಡವಟ್ಟು!

 1. ನಾಣಯ್ಯ ಡಿ.ಸಿ. ಹೇಳುತ್ತಾರೆ:

  ಇಂತಹ ಭಾಗ್ಯ ನಿಮಗೆ ಜೀವನಪರ್ಯಂತ ಸಿಗುತ್ತಿರಲಿ.
  ನಿಮ್ಮ ಹೃದಯ ಮತ್ತು ಕವನಗಳಲ್ಲಿ ಇಂಥ ಸವಿರಸವೇ ಹೊಮ್ಮುತಿರಲಿ
  ಎಲ್ಲರಿಗೂ ಇದೇ ರೀತಿ ಒಳಿತಾಗಲಿ. ಶುಭವಾಗಲಿ.

 2. ksraghavendranavada ಹೇಳುತ್ತಾರೆ:

  ಅಬ್ಬಾ?ಆಸುಮನದ ಸ೦ತಸವನ್ನು ಹ೦ಚಿಕೊಳ್ಳುವುದರಲ್ಲಿರುವ ಸೊಗಸು ಮತ್ಯಾವುದರಲ್ಲೂ ಇಲ್ಲ!
  ಸುಖಾ೦ತ್ಯ ಸಮಾಧಾನ ತ೦ದಿತು.
  ನಮಸ್ಕಾರಗಳೊ೦ದಿಗೆ,

 3. Shamala ಹೇಳುತ್ತಾರೆ:

  ಸುರೇಶ್…
  ಸುಖಾಂತ್ಯ ಆಯ್ತು… ತುಂಬಾ ಸಂತೋಷ… ಆದ್ರೆ ಸಖಿಯ ಕೈಯಿನ ಬಿಸಿ ಕಾಫಿ ನಿಮ್ಮ ಕೈಗೆ ಬಂದೊಡನೆ… ನೀವು ನಿಮಗೆ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದ ನಿಮ್ಮೆಲ್ಲಾ ಸಹೋದರಿಯರನ್ನೂ ಮರೆತು ಒಬ್ಬರೇ ಕಾಫಿ ಕುಡಿದು ಬಿಡುವುದಾವ ನ್ಯಾಯವೋ…? ಹ್ಹ ಹ್ಹ… ಸಮಸ್ಯೆ ಮತ್ತು ಉತ್ತರ ಎರಡರ concept ಇಷ್ಟವಾಯಿತು….

 4. ಮಧುಸೂದನ ಹೇಳುತ್ತಾರೆ:

  ಆದದ್ದೆಲ್ಲಾ ಒಳಿತೇ ಆಯಿತು
  ಓದುಗರ ಶುಭ ಹಾರೈಕೆಗಳೊಂದಿಗೆ
  ಸಖಿಯ ಕೈಯಿಂದ ಬಿಸಿ ಬಿಸಿ ಕಾಫಿಯೂ ಸಿಕ್ಕಿತು
  ನಿನ್ನೆ ಸಂಜೆಯ ಜಿಟಿ ಜಿಟಿ ಮಳೆಗೆ!!

 5. Sathya Charana S.M. ಹೇಳುತ್ತಾರೆ:

  ಅಂತೂ.. ನಮ್ಮ ಪ್ರಯತ್ನಗಳು, ಅಂದರೆ ನೀವು ಕೇಳಿಕೊಂಡಿದಕ್ಕೆ ತುಂಬಿಕೊಟ್ಟ ನಮ್ಮ ಹಾರೈಕೆಗಳು ಕೆಲಸ ಮಾಡಿವೆ ಅಂತ ಆಯ್ತಲ್ಲ.. ಸಮಾಧಾನ ಆಯ್ತು ಬಿಡಿ..

  ಮುಂದಿನ ದಿನಗಳಿಗೆ, ಶುಭ ಹಾರೈಕೆಗಳು..

  ನಿಮ್ಮೊಲವಿನ,
  ಸತ್ಯ 🙂

 6. shashijois ಹೇಳುತ್ತಾರೆ:

  ಅಂತೂ ಸುಖಾಂತ್ಯ ಆಯ್ತಲ್ಲ ಸರಿ ಬಿಡಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: