ನನಗಿಂದು ರಕ್ಷಣೆ ಬೇಕು!

 

“ರಕ್ಷಾಬಂಧನದ
ಈ ಶುಭ ದಿನದಂದು
ಹಾರ್ದಿಕ
ಶುಭ ಹಾರೈಕೆಗಳು,
ದೇವರು ಸದಾ
ಹೀಗೆಯೇ
ಹರಸುತ್ತಿರಲಿ”

ಇಂದು ಮುಂಜಾನೆ
ನನ್ನ ಪ್ರೀತಿಯ
ಸಹೋದರಿಯರಿಗೆಲ್ಲಾ
ನನ್ನ ಜಂಗಮ
ದೂರವಾಣಿಯ ಮೂಲಕ
ಈ ಶುಭ ಸಂದೇಶಗಳನ್ನು
ರವಾನಿಸಿ ಮುಗಿಸಿದ್ದೆನಷ್ಟೇ,
ಅತ್ತಕಡೆಯಿಂದ ಕರೆ ಬಂತು,

ನೋಡಿದ್ರೆ, ಆಕೆಯದು,
ಏನಿರಬಹುದು ವಿಶೇಷ
ಎಂಬ ಆಶ್ಚರ್ಯದಿಂದಲೇ
ಉತ್ತರಿಸಿದೆ,
ನಾನು “ನಮಸ್ಕಾರ”
ಅನ್ನುವ ಮೊದಲೇ
ಬೈಗುಳದ ಸುರಿಮಳೆ
“ಹೆಂಗಿದೆ ಮೈಗೆ
ತಲೆಗಿಲೆ ಕೆಟ್ಟಿದೆಯಾ?
ಇಷ್ಟು ದಿನ ಸಖೀ,
ಸಖೀ ಅಂತ ಕವನ
ಬರೀತಿದ್ದವರು
ಈದಿನ ರಾಖಿ, ರಾಖಿ
ಅಂತಿದೀರಲ್ರೀ
ಏನಾಗಿದೆ ನಿಮಗೆ?
ಯಾವಾಗ ಸಿಗ್ತೀರಾ
ಮಾತಾಡ್ಬೇಕು ನಿಮ್ಜೊತೆ…
……. …….. …..
……. …….. …..
……. …….. …..”

ಏನೋ ಎಡವಟ್ಟು ಆಗಿದೆ,
ಎಲ್ಲೋ ಕಥೆ ಕೆಟ್ಟಿದೆ,
ಎಂಬುದರ ಅರಿವಾಗಲು
ಹಿಡಿಯಲಿಲ್ಲ ಹೆಚ್ಚು
ಸಮಯ ನನಗೆ,
“ಹಲೋ… ಹಲೋ…
ಸ್ವಲ್ಪ ಇರು, ಆಮೇಲೆ
ನಾನೇ ಕರೇ ಮಾಡ್ತೀನಿ…”
ಅಂತ ಮಾತು ಮುಗಿಸಿದೆ.

ನನ್ನಿಂದ ರವಾನೆಯಾದ
ಸಂದೇಶಗಳ ಪಟ್ಟಿ
ನೋಡಿದಾಗ ಅರಿವಾಯ್ತು,
ನನ್ನೆಲ್ಲಾ ಸಹೋದರಿಯರ
ಜೊತೆಗೇ, ನನ್ನ
ಸಹೊದರಿಯ ಹೆಸರಿನ
ಸಾಮ್ಯತೆ ಇರುವ
ಆಕೆಗೂ ನನ್ನಿಂದ,
ಅನಾಮತ್ತಾಗಿ ಈ ದಿನ,
ರಕ್ಷಾಬಂಧನದ ಸಂದೇಶ
ರವಾನೆಯಾಗಿ ಬಿಟ್ಟಿತ್ತು!

ಸಂಜೆ ಭೇಟಿ ಆದಾಗ,
ಸಮಜಾಯಿಷಿ ನೀಡಬೇಕು,
ರಮಿಸಬೇಕು, ನನ್ನಲ್ಲಿರುವ
ಸಹನಶೀಲತೆಯನ್ನು
ಇಂದು ನಾ ಒರೆಗೆ ಹಚ್ಚಬೇಕು;

ಅದಕ್ಕಾಗಿ, ನನಗೆ
ನಿಮ್ಮೆಲ್ಲರ ಬೆಂಬಲ ಬೇಕು
ಶುಭ ಹಾರೈಕೆಗಳು ಬೇಕು
ರಕ್ಷಾಬಂಧನದ ಈ ದಿನದಂದು
ನನಗೆ ರಕ್ಷಣೆ ಬೇಕು
ನೀವೆಲ್ಲಾ ನನ್ನನ್ನು
ಹರಸುವಿರಲ್ಲಾ?
*********

12 Responses to ನನಗಿಂದು ರಕ್ಷಣೆ ಬೇಕು!

 1. ಹೇಮ ಹೇಳುತ್ತಾರೆ:

  ಹ… ಹ… ಹ… ಹ…
  ಕವನ ನಿಜವಾಗಿಯೂ ಹಾಸ್ಯಮಯವಾಗಿದೆ.
  ಕವಿಗಳು ನಿಜವಾಗಿಯೂ ಸಿಕ್ಕಿಬಿದ್ದ ಸಂದರ್ಭದಲ್ಲಿ ನಾವು ಅಲ್ಲಿ ಇರಬೇಕು ಹಾಗೂ ಬೇಸ್ತು ಬಿದ್ದ ಆ ಮುಖವನ್ನು ಅಲ್ಲಿ ನೋಡಬೇಖು ಅನಿಸುತ್ತದೆ.
  🙂

 2. ಮಧುಸೂದನ ಹೇಳುತ್ತಾರೆ:

  ಸುರೇಶರೇ, ಆಯಿತೇ ನಿನ್ನೆ ಸಂಜೆ ನಿಮ್ಮ ಸಖಿಗೆ ಸಮಾಧಾನ?
  ಇತ್ತೇ ಆಕೆಗೆ ನಿಮ್ಮ ಸಮಜಾಯಿಷಿ ಕೇಳಲು ವ್ಯವಧಾನ?

  ನಮ್ಮೆಲ್ಲರಿಗೂ ಕುತೂಹಲ ಇದರ ಬಗ್ಗೆ ತಿಳಿದುಕೊಳ್ಳಲು…
  ಕಾಯಿತ್ತಿರುವೆವು ನಿಮ್ಮ ಮುಂದಿನ ಕವನವ ಓದಿ ಸವಿಯಲು.

 3. ಸಿಹಿ ಹೇಳುತ್ತಾರೆ:

  ನಿಮ್ಮ ಸಹೋದರಿಗೆ ಕಳುಹಿಸಬೇಕಿರುವ ಸಂದೇಶ ಆಕೆಗೆ ಹೋದರೂ ಪರವಾಗಿಲ್ಲ. ಆಕೆಗೆ ಕಳುಹಿಸಬೇಕೆನುವ ರೋಮಾಂಟಿಕ್ ಸಂದೇಶ ಸಹೋದರಿಗೆ ಅಪ್ಪಿ ತಪ್ಪಿಯೂ ಹೋಗಬಾರದು. ಆದ್ದರಿಂದ ನೀವು ಅಷ್ಟೇನೂ ಹೆಚ್ಚು ಕಮ್ಮಿ ಮಾಡಿಕೊಂಡಿಲ್ಲ ಬಿಡಿ.
  🙂

 4. Shamala ಹೇಳುತ್ತಾರೆ:

  ಸುರೇಶ್…
  ನಾ ಈಗ ತಾನೇ ಓದಿದೆ…. ಹ್ಹ ಹ್ಹ…. ಅಯ್ಯೋ ಪಾಪ… ಛೇ ಇಂಥಾ ಎಡವಟ್ಟು ಮಾಡ್ಕೋತಾರೇನ್ರೀ ಯಾರಾದ್ರೂ…? ಆದ್ರೂ ಅದನ್ನೂ ಕವನ ಬರೆದು ಹಾಕಿದ್ದೀರಲ್ಲಾ… ಅವರು ನೋಡೋಲ್ಲ ಅನ್ನೋ ಧೈರ್ಯಾನಾ…? ನೋಡಿದ್ರೆ ಅದರ ರಿಪೇರಿಗೆ ಮುಂಚೆ ಇನ್ನೊಂದು ಕವನ ಬರೀಬೇಕಾಗತ್ತೆ. ರಕ್ಷಿಸಿ ಎಂದು ನಿಮ್ಮ ಸೋದರಿಯರನ್ನು ಕೇಳುವುದರ ಬದಲು…. “ಶರಣು ಬಂದಿಹೆನು ತಾಯೆ…..” ಎಂದು ಶರಣಾಗಿದ್ದರೆ….. :-)…. ಕವನದಲ್ಲಿ ನಿಮ್ಮ ಪೇಚಾಟ ವಿವರಿಸಿರುವ ರೀತಿ ಸಕತ್ತಾಗಿದೆ……..

 5. Sathya Charana S.M. ಹೇಳುತ್ತಾರೆ:

  ಹೆಗ್ಡೆಯವರೇ..
  ಸಕ್ಕತ್.. ಹಾಸ್ಯ ನಿಮ್ಮಲ್ಲಿ ಈ ಮಟ್ಟಿಗಿರೋ ಪರಿಚಯ ನನಗೀಗ ಆಯ್ತು..
  ಧನ್ಯವಾದಗಳು..

  ನನ್ನದೊಂದು ಸಲಹೆ..
  ಎಲ್ಲರಿಗೂ ಹರಸೋಕ್ಕೆ.. ಇನ್ನೊಂದು ಕಿರು ಸಂದೇಶ ಕಳಿಸಿ ನೋಡಿ..!!! 🙂

  ನಿಮ್ಮೊಲವಿನ,
  ಸತ್ಯ.. 🙂

 6. ಶ್ರೀಧರ್ ರುದ್ರಪ್ಪ ಹೇಳುತ್ತಾರೆ:

  ಹ..ಹ..ಹ… ಸೂಪರ್ ಸುರೇಶ್!

 7. shashijois ಹೇಳುತ್ತಾರೆ:

  ಎನ್ ಸರ್ ಹೀಗೆ ಎಡವಟ್ಟು ಮಾಡೋದೇ ??!!ರಕ್ಷಾಬಂಧನದ ದಿನ ನಮ್ಮ(ಸಹೋದರಿಗಳ) ರಕ್ಷಣೆಗಿಂತ ನಿಮ್ಮ ಸಖಿಯಿಂದ ಮೊದಲು ರಕ್ಷಿಸಿಕೊಳ್ಳಿ .ಹ್ಹಾ ಹ್ಹಾ ಚೆನ್ನಾಗಿದೆ ..ನಾಳೆ ಹೇಳಿ ಏನಾಯಿತೆಂದು ???

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: