ಅಮೇರಿಕಾದ ನೆರಳಿನಡಿ ಸ್ವಾತಂತ್ರ್ಯೋತ್ಸವ ಆಚರಿಸೋಣ!

 

ಎಲ್ಲಾ ವಿಷಯಗಳಲ್ಲೂ ಭಾರತ ದೇಶ
ಆಗಿರುವಾಗ ಅಮೇರಿಕಾ ದೇಶದ ಬಂಧಿ

ಅಮೇರಿಕಾದ ಹೆಣ್ಣೊಬ್ಬಳನ್ನು ಕರೆದು ಇಲ್ಲಿ
ಕೊಟ್ಟುಬಿಡುವ ಆಕೆಗೂ ಹೆಸರು ಗಾಂಧಿ

ವಿದೇಶೀ ಹೆಣ್ಣು ಮಕ್ಕಳು ನಮಗೆ ಇಷ್ಟ
ಬೆಳ್ಳಗಿದ್ದರಂತೂ ಎರಡು ಮಾತೇ ಇಲ್ಲ

ಸರಕಾರಕ್ಕೆ ಸಲಹೆ ನೀಡಲು ಆಕೆಯೂ
ಇರಲಿ, ಈಗ ಇಟಲಿಯ ಪ್ರಜೆಯಿದ್ದಾಳಲ್ಲಾ?

ಪದೇ ಪದೇ ಇಲ್ಲಿಂದ ಅಮೇರಿಕ್ಕಾಕ್ಕೆ
ಕರೆಮಾಡಿ ಸಲಹೆ ಕೇಳುವ ಅಗತ್ಯ ಇಲ್ಲ

ಇಲ್ಲೇ ಕೂತು, ಆಕೆಯೇ ನಡೆಸಲಿ ಬಿಡಿ
ಆಡಳಿತ, ನಮಗೇನೂ ಅಭ್ಯಂತರ ಇಲ್ಲ

ಪಾಕಿನ ಬಗ್ಗೆ ನೀತಿ ಏನಾಗಿರಬೇಕೆಂದು
ಅಮೇರಿಕಾನೇ ಹೇಳಬೇಕು ನಮಗೆ

ಭೋಪಾಲ ದುರಂತದ ದಾವೆಯ ಬಗ್ಗೆ
ಅಮೇರಿಕಾ ನೀಡುವುದು ಸಲಹೆ ನಮಗೆ

ಭಯೋತ್ಪಾದನೆ ತಡೆಗಟ್ಟಲು ನಾವು ಕ್ರಮ
ಕೈಗೊಳ್ಳುವುದು ಅಮೇರಿಕಾವನೇ ಕೇಳಿ

ಎಲ್ಲಾ ಅವರ ಇಚ್ಛೆಯಲೇ ನಡೆಯುತ್ತಿರಲು
ನಮ್ಮದೇನು ಉಳಿದಿದೆ ಇನ್ನು ಇಲ್ಲಿ ಹೇಳಿ

ಹಾಗಾಗಿ ಇನ್ನೊಂದು ಬಿಳೀ ತೊಗಲಿನ
ಗಾಂಧಿಯನು ಆಮದು ಮಾಡಿಕೊಳ್ಳೋಣ

ಅಮೇರಿಕಾದ ನೆರಳಿನಡಿ ನಾವು ನಮ್ಮ
ಸ್ವಾತಂತ್ರ್ಯೋತ್ಸವಾಚರಣೆ ಮಾಡೋಣ!!!
***********************

8 Responses to ಅಮೇರಿಕಾದ ನೆರಳಿನಡಿ ಸ್ವಾತಂತ್ರ್ಯೋತ್ಸವ ಆಚರಿಸೋಣ!

 1. ಶಶಿ ಜೆನ್ನಿ ಹೇಳುತ್ತಾರೆ:

  ಚೆನ್ನಾಗಿ ಬರೆದಿದ್ದೀರಿ ಸುರೇಶ್,
  ಮಳೆಯಲ್ಲಿ ಈ ಕವನ ಓದಿದಾಗ ರಕ್ತ ಬಿಸಿ ಆಯ್ತು ನಮ್ಮ ದಾಸ್ಯತನಕ್ಕೆ.
  ಶಶಿ

 2. ಹೇಮ ಹೇಳುತ್ತಾರೆ:

  ನಿಜವಾಗಿಯೂ ನಮಗೆ ದಾಸ್ಯದಲ್ಲಿ ಇದ್ದು ಅಭ್ಯಾಸವಾಗಿ ಬಿಟ್ಟಿದೆ.
  ಈಗ ಯಾರಾದ್ರೂ ಎಚ್ಚರಿಸಿದರೆ ಮಾತ್ರ ಹೌದೆನಿಸುತ್ತದೆ.
  ಕವನ ತುಂಬಾ ಚೆನ್ನಾಗಿದೆ.

 3. ksraghavendranavada ಹೇಳುತ್ತಾರೆ:

  ಹೌದು, ರಾಹುಲ್ ಇದ್ದಾನಲ್ಲ! ಮು೦ದಿನ ಭಾರತೀಯ ಸೊಸೆ ನೀವ೦ದ೦ತೆ ಅಮೇರಿಕನ್ನಳೇ ಆದರೆ,ಆಸುಮನದ ಮಾತು ಸತ್ಯವಾಗುತ್ತದೆ.ಆಗ ಆಸುಮನವನ್ನೊಮ್ಮೆ ನೆನಪಿಸಿಕೊಳ್ಳುತ್ತೇವೆ.
  ಸದ್ಯೋಭವಿಷ್ಯದಲ್ಲಿ ಅಮೇರಿಕಾ ದೇಶದ ಒ೦ದು ರಾಜ್ಯವಾದ ಭಾರತ?(india is a canton state of United States Of America!?)ಎ೦ದಾಗಬಹುದೇ?
  ನಮಸ್ಕಾರಗಳೊ೦ದಿಗೆ,

 4. ಮಧುಸೂದನ ಹೇಳುತ್ತಾರೆ:

  ತಾಳ್ಮೆ ಇರಲಿ ಸುರೇಶರೇ ಕಾದಿದ್ದಾನಿನ್ನೂ ನಮ್ಮ ಯುವರಾಜ ಅವಿವಾಹಿತನಾಗಿ
  ತರಬಹುದು ಅಮೆರಿಕಾದ ಬಿಳಿ ಕನ್ಯೆಯೋರ್ವಳನ್ನು ತನ್ನ ಪ್ರಿಯ ಪತ್ನಿಯಾಗಿ
  ಆಮೇಲೆ ನಿಮ್ಮ ಆಶಯ ಈಡೇರುವುದು ನೀವಂದಂತೆಯೇ ಖಂಡಿತವಾಗಿ
  ಯಶಸ್ವಿ ಪುರುಷನ ಹಿಂದೋರ್ವ ಮಹಿಳೆ ಇರುವಳೆಂಬುದಕ್ಕನುಗುಣವಾಗಿ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: