ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ…!

 

“ಅಮ್ಮಾ
ಬಾರಮ್ಮಾ,
ಸುಷ್ಮಾ
ಬಾರಮ್ಮಾ,
ಬಳ್ಳಾರಿ
ಜನತೆಗೆ
ನಗುಮುಖವ
ತೋರಮ್ಮಾ…”

ಹೀಗೆಂದು ಹಾಡಿ,
ಆ ಬಳ್ಳಾರಿಯ
ರೆಡ್ಡಿ ಸಹೋದರರು
ಮತ್ತು ಶ್ರೀರಾಮುಲು
ನಿಮ್ಮನ್ನು
ಸ್ವಾಗತಿಸಿದರೆ,
ನನಗೆಳ್ಳಷ್ಟೂ
ಚಿಂತೆ ಇಲ್ಲ ನಿಜದಿ;

ಅವರು
ಸಮರ್ಪಿಸುವ
ಲಕ್ಷ್ಮಿಯ ಜೊತೆಗೆ
ದಿಲ್ಲಿಗೆ ಮರಳುವ
ಮೊದಲು, ನಿಮ್ಮ
ಆ ನಾಲ್ಕು ಮಕ್ಕಳಿಗೆ
ಸ್ವಲ್ಪ ಬುದ್ಧಿ ಹೇಳಿ
ಎಂಬಾಶಯ ಈ ಮನದಿ;

ಕರ್ನಾಟಕದ
ಮಂತ್ರಿಗಳವರು,
ಬರೀ ಬಳ್ಳಾರಿಯ
ದಂಡನಾಯಕರಲ್ಲ,
ಅಭಿವೃದ್ಧಿ ಪಡಿಸಲಿ
ಈ ನಾಡನ್ನೂ, ಬರೀ
ಬಳ್ಳಾರಿಯಷ್ಟನ್ನೇ ಅಲ್ಲ;

ನಾಡಿನುದ್ದಗಲಕ್ಕೂ
ಅಮಾಯಕ ಜನರು,
ಡೆಂಗಿ ಮತ್ತು ಹಂದಿ
ಜ್ವರದಿಂದ ನರಳಿ,
ಸಾಯುತ್ತಿದ್ದಾರೆ
ಸಾಮೂಹಿಕವಾಗಿ,
ಆದರೆ ಅತ್ತ
ಆ ಆರೋಗ್ಯಮಂತ್ರಿ
ಪೌರೋಹಿತ್ಯ
ವಹಿಸಿಕೊಂಡು,
ವಿವಾಹ ನಡೆಸುತ್ತಿದ್ದಾರೆ
ಸಾಮೂಹಿಕವಾಗಿ;

ಆಗಲೇ ಎರಡು
ವರ್ಷಗಳಾದವು,
ಇನ್ನಾದರೂ ಬಳ್ಳಾರಿಯ
ಬಿಟ್ಟು ಹೊರಬರಲು ಹೇಳಿ,
ನಾಲ್ಕಾರಾದರೂ ಸರಕಾರೀ
ಆಸ್ಪತ್ರೆಗಳ ಹೆಸರುಗಳನ್ನು
ಕಂಠಪಾಠಮಾಡಿಕೊಂಬಂತೆ
ಆತನಿಗೆ ಬುದ್ಧಿಮಾತು ಹೇಳಿ;

ಬಳ್ಳಾರಿಯ ಹೊರಗೂ
ಕರ್ನಾಟಕವಿದೆ ಇನ್ನೂ,
ಬಳ್ಳಾರಿಯ ಹೊರಗೂ
ನಿಮ್ಮ ಮತದಾರರು
ಇದ್ದಾರೆ ಇನ್ನೂ,

ಹೀಗೇಯೇ ಮುಂದುವರೆದರೆ,
ಮುಂದೊಂದು ದಿನ ಸೋಲಿನ
ರುಚಿ ಕಾಣಬೇಕಾಗಬಹುದು,
ಭಾರತೀಯ ಜನತಾ ಪಕ್ಷ,
ಬಳ್ಳಾರಿ ಜನತಾ ಪಕ್ಷವಾಗಿ
ಬಹಳ ಹಿಂದುಳಿದುಬಿಡಬಹುದು,
ಸುಷ್ಮಾ ನಿಮ್ಮ ಪಾಲಿಗೆ ಇದು
ಸ್ವರಾಜವಾಗಿ ಉಳಿಯದೇ
ಪರರಾಜ್ಯವಾಗಿ ಬಿಡಬಹುದು!
***************

2 Responses to ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ…!

  1. ksraghavendranavada ಹೇಳುತ್ತಾರೆ:

    ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷವೋ? ಸುಷ್ಮಾ ಎ೦ಬ ತಮ್ಮ ತಾಯಿಯ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಅವಳ ಮಕ್ಕಳಿಲ್ಲ. ಕರ್ನಾಟಕ ಈಗ ಬಳ್ಕಾರ್ನಾಟಕಬಾಗುತ್ತಿದೆ!ಪ್ರಸ್ತುತ ಹಾಗೂ ಭವಿಷ್ಯಗಳೆರಡನ್ನೂ ಎಚ್ಚರಿಕೆಯೊ೦ದಿಗೆ ಕವನದಲ್ಲಿ ತಿಳಿಸಿದ್ದೀರಿ. ರೆಡ್ಡಿಗಳು ಇನ್ನಾದರೂ ಬುಧ್ಧಿ ಕಲಿತರೆ ಒಳಿತು.
    ನಮಸ್ಕಾರಗಳೊ೦ದಿಗೆ,

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: