ಏಕೆ ಸಿಕ್ಕೀತು ನನಗಿಂದು?!

ಎಂದೋ
ಗೀಚಿ
ಮರೆತಿದ್ದ,
ಕವಿತೆಯೊಂದು
ಕನಸಿನಲಿ ಬಂದು,
ನನಗೂ ಪ್ರಕಾಶ
ನೀಡು ಎಂದು,
ಕಾಡಿತು
ಬೇಡಿತು ಇಂದು;

ನಿದ್ದೆಯಿಂದೆದ್ದು
ಹುಡುಕಾಡಿದೆ,
ತಡಕಾಡಿದೆ,
ಎಲ್ಲಾ ಪುಸ್ತಕಗಳ
ಕೊಡವಿದೆ,
ಎಲ್ಲೂ ಸಿಗಲಿಲ್ಲ;

ಹೇಗೆ
ಸಿಕ್ಕೀತು?
ಏಕೆ
ಸಿಕ್ಕೀತು?

ಯೌವನದ
ದಿನಗಳಲಿ,
ಚಿಗುರುಮೀಸೆಯ
ಹುಡುಗನ,
ಹೃದಯ
ಬಡಿತವ
ಹೆಚ್ಚಿಸಿ,
ರಾತ್ರಿಗಳಲಿ
ನಿದ್ದೆಯ
ಕೆಡಿಸಿ,
ಕನಸುಗಳ
ಮೂಡಿಸಿ,
ಅದೊಂದು
ದಿನ ಸದ್ದಿಲ್ಲದೇ,
ನೆನಪಿನಂಗಳದಿಂದ
ಮರೆಯಾದವಳು
ಅವಳು ಅಂದು,

ಅವಳ
ಬಟ್ಟಲು ಕಂಗಳ,
ಮುಂಗುರುಳುಗಳ,
ಮಧುರ ಮಾತುಗಳ,
ನೀಳ ಕೈಗಳ,
ಕೆಂಪು ತುಟಿಗಳ,
ಬಣ್ಣಿಸಿ ಬಣ್ಣಿಸಿ,
ಗೀಚಿದ್ದ
ಆ ಕವಿತೆ,
ಹೇಗೆ
ಸಿಕ್ಕೀತು
ಏಕೆ
ಸಿಕ್ಕೀತು
ನನಗಿಂದು?
*****

8 Responses to ಏಕೆ ಸಿಕ್ಕೀತು ನನಗಿಂದು?!

 1. ಹೇಮ ಹೇಳುತ್ತಾರೆ:

  ಹೆಗ್ಡೆಯವರೇ,
  ಕನಸಿನ ಸಖಿ ನಿಮ್ಮ ಜೊತೆಯಲ್ಲಿ ಇರುವಾಗ, ಕವನವನ್ನು ಏಕೆ ಹುಡುಕುವಿರಿ?
  ಹುಡುಕುವ ನೆಪದಲ್ಲಿ ಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ.

 2. Shamala ಹೇಳುತ್ತಾರೆ:

  ರವಿ ಕಾಣದ್ದನ್ನು
  ಕವಿ ಕಾಂಬನು
  ಆಸುಮನ
  ಕಂಡದನ್ನು
  ನಾ ಕಾಣದಾದೆನು….

  ಮನದೊಳಗೆ
  ಮುಚ್ಚಿಟ್ಟ
  ಮಧುರ ಮಾತು…
  ಹೇಳಬೇಕೆನಿಸಿದರೂ
  ಹೊರ ಬರದಾಯಿತು…

  ಸಖಿಯ ಬಣ್ಣಿಸಿ
  ಬರೆದ ಕವನವ
  ಹುಡುಕುವಾ ನೆಪದಿ…
  ಹಾಗೇ ಮನ ಮೀಟಿತು
  ಹೃದಯ ವೀಣೆಯಾ
  ತಂತಿ ಅನುರಾಗದಿ….

  ಸಕ್ಕತ್ತಾಗಿದೆ ಸುರೇಶ್….ತುಂಬಾ ಆಪ್ತವಾಗಿದೆ….ನಿಮ್ಮ ಕವನ ಓದಿ ನನಗೂ ಹೀಗೆ ಬರೆಯಬೇಕೆನಿಸಿತು…. ಧನ್ಯವಾದಗಳು…:-)

 3. ksraghavendranavada ಹೇಳುತ್ತಾರೆ:

  ಆಹಾ!ಆಸುಮನದ ಪ್ರೇಮ ಕವಿತೆ! ಮುದ ನೀಡಿತು. ನನ್ನ ಕಾಲೇಜು ದಿನಗಳ ನೆನಪು ತ೦ದಿತು.ಕವಿತೆಯ ಓಘ ಬಲು ಸೊಗಸಾಗಿದೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 4. ಮಧುಸೂದನ ಹೇಳುತ್ತಾರೆ:

  ನಿಮ್ಮ ಈ ಕವನದಲ್ಲೇ ಅಡಗಿದೆ ಹಳೆಯದರ ಗುಟ್ಟು
  ಯೌವನದ ಸಖಿಯ ನೆನಪಾಗಿಹ ವಿಷಯ ಬದಿಗಿಟ್ಟು
  ಸುಮ್ಮನೇ ಹುಡುಕಿದರೆ ಅಲ್ಲಿ-ಇಲ್ಲಿ ಕಣ್ಣು ಬಿಟ್ಟು
  ಸಿಗುವುದೇ ಆ ಸಿಹಿ ಕವಿತೆಯೆಂಬ ಒಬ್ಬಟ್ಟು?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: