ಪತ್ರ ಬಂದಿಹುದು…ನನ್ನೂರಿನ ನೆನಪ ತಂದಿಹುದು!

 

ಪತ್ರ ಬಂದಿಹುದು ಬಂದಿಹುದು

ಪತ್ರ ಬಂದಿಹುದು ಬಂದಿಹುದು

ವರುಷಗಳ ನಂತರ, ಬಂದಿರುವ ಪತ್ರ,

ನನ್ನೂರಿನ ನೆನಪ ತಂದಿಹುದು

 

ನನ್ನ ಹೆಸರಿದೆ ಪತ್ರದ ಮೇಲೆ

ಒಳಗಿದೆ ಈ ಸಂದೇಶಗಳ ಸರಮಾಲೆ

 

ಓ ಪರದೇಶಕ್ಕೆ ಹೋದವನೇ

ಮರಳಿ ಈ ನಾಡಿಗೆ ಬಾರದವನೇ

ಏಳು ಸಮುದ್ರಗಳಾಚೆಗೆ ತೆರಳಿದೆ ನೀನು

ನಮ್ಮನ್ನು ಜೀವಂತ ಶವವನ್ನಾಗಿಸಿಹೆ ನೀನು

ರಕ್ತ ಸಂಬಂಧಗಳನೇ ಮರೆತಿಹೆ ನೀನು

ಈ ಕಂಗಳಲ್ಲಿ ಕಣ್ಣೀರು ತುಂಬಿಸಿಹೆ ನೀನು

ಊಟ ಉಪಾಹಾರವೊಂದೂ ಸರಿಯಾಗಿ ಇಲ್ಲ

ನಿದ್ದೆಯ ಮಾತಂತೂ ಇಲ್ಲವೇ ಇಲ್ಲ

ಆದರೆ ನಮ್ಮೀ  ಮೂಕರೋದನ ನಿಲ್ಲುವುದೇ ಇಲ್ಲ

 

ನೀರವ ಮೌನ ತುಂಬಿದೆ ಇಲ್ಲಿನ ಬೀದಿಗಳಲ್ಲಿ

ಹೂದೋಟದ ಹೂಗಳಾಗಿವೆ ಮುಳ್ಳುಗಳಂತಿಲ್ಲಿ

ಮಾಮರದ ಉಯ್ಯಾಲೆ ನಿನ್ನನ್ನಿನ್ನೂ ಮರೆತಿಲ್ಲ

ಆದರೆ ನೀನದನು ಅದೆಂತು ಮರೆತೆಯಲ್ಲಾ

ನೀನಿಲ್ಲದ ದಿನ ಬಂದಿದ್ದರೇನಂತೆ ದೀಪಾವಳಿ

ದೀಪಗಳ ಬದಲು ಉರಿದವು ಈ ಹೃದಯಗಳು ಖಾಲಿ

ಹೋಳಿ ಹಬ್ಬದಲ್ಲೂ ಕಾಡಿತ್ತು ನಿನ್ನ ಗೈರುಹಾಜರಿ

ಬಂದೂಕಿನಂತೆ ಭಾಸವಾಗಿತ್ತು ನಮಗೆ ಆ ಪಿಚಕಾರಿ

ತೋಪಿನಲ್ಲೂ ನದೀತೀರದಲ್ಲೂ ಕಾಡುತಿದೆ ಮೌನ

ಈ ಮನೆಯೂ ಆಗಿದೆ ಈಗ ಮೌನವಾದ ಸ್ಮಶಾನ

ಬಂದಿದೆ ಯುಗಾದಿ ಹಬ್ಬದ ಆಗಮನದ ಸುದ್ದಿ

ನಮಗೆ ಬೇಕಿದೆ ನಿನ್ನ ಸ್ವದೇಶಾಗಮನದ ಸುದ್ದಿ

 

ಹಿಂದೆ ನೀ ಬರೆಯುತ್ತಲಿದ್ದೆ ತಿಂಗಳಿಗೆ ಐದಾರು ಪತ್ರ

ಆ ಪತ್ರಗಳಲ್ಲೇ ಕಾಣುತ್ತಿತ್ತೆಮಗೆ ನಿನ್ನ ಮುಖದ ಚಿತ್ರ

ಪತ್ರ ವ್ಯವಹಾರಗಳೇ ನಿಂತು ಹೋದವಲ್ಲಾ ಮಗನೇ

ಆ ಎಲ್ಲಾ ಆಟಗಳೇ ಮುಗಿದು ಹೋದವಲ್ಲಾ ಮಗನೇ

ನಿನ್ನ ತಂಗಿ ಗಂಡನೊಂದಿಗೆ ಹೊರಟು ನಿಂತಾಗ

ನಿನ್ನ ದಾರಿಯನೇ ಕಾಯುತ್ತಿದ್ದವು ಆಕೆಯ ಕಂಗಳಾಗ

ನನ್ನ ಮಾತೇನು ಬಿಟ್ಟು ಬಿಡು ನಾನು ನಿನ್ನ ಅಪ್ಪ

ನಿನ್ನ ತಾಯಿಯ ಪರಿಸ್ಥಿತಿಯ ನೋಡಲಾಗದು ಪಾಪ

ನಿನ್ನ ಹೆಂಡತಿಯೇ ಮಾಡುತ್ತಿಹಳು ಆಕೆಯ ಸೇವೆ

ಅತ್ತೆ ಸೊಸೆಯಂದಿರ ಮನಗಳೆರಡರಲ್ಲೂ ನೋವೆ

 

ನೀ ಗಳಿಸಿದ ಹಣ ಸಾಕಷ್ಟು ಸುಖ ನೀಡಿದೆ ಗೊತ್ತು

ಆದರೆ ನಿನ್ನನ್ನೇ ನಮ್ಮಿಂದ ಬಲು ದೂರ ಮಾಡಿಬಿಡ್ತು

 

ಪಕ್ಷಿಯಂತೆ ನೀನು ಒಮ್ಮೆ ಹಾರಿ ಬಂದು ಬಿಡು

ಎಲ್ಲಾ ಬಂಧನಗಳಿಂದ ಮುಕ್ತನಾಗಿ ಬಂದು ಬಿಡು

ನಮ್ಮ ಕೊನೆಯಾಸೆಯ ತೀರಿಸಲು ಬಂದು ಬಿಡು

ಪಕ್ಷಿಯಂತೆ ನೀನು ಒಮ್ಮೆ ಹಾರಿ ಬಂದು ಬಿಡು

**********************

“ನಾಮ್” ಹಿಂದೀ ಚಲನ ಚಿತ್ರದ “ಛಿಟ್ಟೀ ಆಯೀ ಹೈ” ಗೀತೆಯನ್ನು ನೆನಪಿಸಿಕೊಂಡು  ಬರೆಯಲೆತ್ನಿಸಿದಾಗ.

6 Responses to ಪತ್ರ ಬಂದಿಹುದು…ನನ್ನೂರಿನ ನೆನಪ ತಂದಿಹುದು!

 1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

  ಬದುಕಿನ ಕಟು ವಾಸ್ತವತೆಗೆ ಕೈಗನ್ನಡಿ ನಿಮ್ಮ:
  “ನೀ ಗಳಿಸಿದ ಹಣ ಸಾಕಷ್ಟು ಸುಖ ನೀಡಿದೆ ಗೊತ್ತು
  ಆದರೆ ನಿನ್ನನ್ನೇ ನಮ್ಮಿಂದ ಬಲು ದೂರ ಮಾಡಿಬಿಡ್ತು”

  ಸಾರ್, ಇಂದು ಪತ್ರಗಳೇ ವಿರಳವಾಗುತ್ತಿವೆ. ಒಂದು ಕಾಲದಲ್ಲಿ ನಮಗೆ ಬದುಕಿನಲ್ಲಿ ಶಕ್ತಿ ತುಂಬುತ್ತಿದ್ದವೇ ಪತ್ರಗಳು. ಒಂದಾನೊಂದು ಕಾಲದಲ್ಲಿ ನಮಗೆ ಅಂಚೆ ಅಣ್ಣನೇ ಆತ್ಮೀಯ ಗೆಳೆಯ.

 2. Dr. ಹೇಳುತ್ತಾರೆ:

  ಸುರೇಶ್ ಸರ್… ಚನ್ನಾಗಿದೆ ಅನುವಾದ…
  ಇದು ನಮಗೆ ಬಹಳ ಅನ್ವಯಿಸುತ್ತೆ, ಅನಿವಾಸಿಗಳಿಗೆ….

  ನೀ ಗಳಿಸಿದ ಹಣ ಸಾಕಷ್ಟು ಸುಖ ನೀಡಿದೆ ಗೊತ್ತು

  ಆದರೆ ನಿನ್ನನ್ನೇ ನಮ್ಮಿಂದ ಬಲು ದೂರ ಮಾಡಿಬಿಡ್ತು

 3. ಧನ್ಯವಾದಗಳು ರಾಘವೇಂದ್ರ
  ಪ್ರಯತ್ನಿಸುತ್ತೇನೆ.

 4. ksraghavendranavada ಹೇಳುತ್ತಾರೆ:

  ಅಣ್ಣಯ್ಯ, ಪ೦ಕಜ್ ಉದಾಸ್ ಹಾಡಿದ ಆ ಚಿಟ್ಟಿ ಆಯೀ ಹೈ ಆಯೀ ಹೈ, ಚಿಟ್ಟೀ ಆಯೀ ಹೈ, ಬಡೇ ದಿನೋ೦ ಕೇ ಬಾದ್“ ಎ೦ಬ ಸುಮಧುರ ಹಾಡನ್ನು ಕೇಳುತ್ತಿದ್ದರೆ ಭಾವನಾ ಲೋಕದಲ್ಲಿ ತೇಲಿ ಹೋದ೦ತಾಗುತ್ತದೆ. ನಿಮ್ಮ ಅನುವಾದಿತ ಕವನದ ಪ್ರತಿಸಾಲು ಆಭಾವನೆಗಳನ್ನು ಹೊರಹೊಮ್ಮಿಸುವಲ್ಲಿ ಸಫಲವಾಗಿವೆ . ಮುಖಸ್ತುತಿಯಲ್ಲ! ನಾನೂ ಮುಖೇಶ ನ ಹಿ೦ದೀ ಹಾಡುಗಳನ್ನು ಅನುವಾದಿಸಲು ಆರ೦ಭಿಸುತ್ತಿದ್ದೇನೆ. ನಿಮ್ಮ ಆಶೀರ್ವಾದವಿರಲಿ. ಭಾವನಾತ್ಮಕವಾದ ಅನುವಾದಿತ ಕವನಗಳನ್ನು ಇನ್ನೂ ಹೆಚ್ಚು ಹೆಚ್ಚು ಬರೆಯಿರಿ. ನಮ್ಮ ಹರಕೆ ಇದ್ದೇ ಇರುತ್ತದೆ. ಸು೦ದರ ಅನುವಾದ. ಪ್ರತಿಸಾಲೂ ಮೂಲ ಕವನವನ್ನು ನೆನಪಿಸುವಲ್ಲಿ ಯಶಸ್ವಿಯಾಗಿದೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: