ತಾನಾಡಿದಂತೆ ಬಾಳಿದಾತನೇ ಧನ್ಯ ಕೋಟಿ ಮಂದಿಯಲ್ಲಿ!

ತನ್ನತನವನ್ನೇ ಮರೆತು ಹಣಕ್ಕಾಗಿ ಹೆಣವಾಗುತ್ತಿದ್ದಾರೆ ಮಂದಿ

ಹಣವಿಲ್ಲದವನು ಬಾಳೆಲ್ಲಾ ಆಗಿರುತ್ತಾನೆ ಕೀಳರಿಮೆಯ ಬಂಧಿ


ಈ ಸಮಾಜ ಗುರುತಿಸುವುದೂ ಹಣವಿದ್ದವರನ್ನಷ್ಟೇ ಇದೂ ಸತ್ಯ

ಬಸ್ಸಲ್ಲಿ ಬಂದವನಿಗಲ್ಲ, ಕಾರಲ್ಲಿ ಬರುವವನಿಗೇ ಈಗೆಲ್ಲಾ ಪ್ರಾಶಸ್ತ್ಯ


ಸಮಾಜದ ಕೀಳುದೃಷ್ಟಿಯ ಎದುರಿಸಿ, ಕೀಳರಿಮೆಯ ಮೆಟ್ಟಿ ನಿಂತು,

ತನ್ನ ಕಲೆಯನ್ನು ಬೆಳೆಸುವುದು ಬಹು ಕಷ್ಟ, ಅದು ಕೆಲವರಿಗೇ ಗೊತ್ತು


ತಾನು, ತಾನಾಗಿಯೇ ಬಾಳಿ, ತನ್ನತನವನ್ನು ಇಲ್ಲಿ ಉಳಿಸಿ ಹೋಗಬೇಕು

ತಾನಳಿದ ಮೇಲೆ, ತನ್ನ ಕಲೆಯ ಬಗ್ಗೆ ಜನರು ಮಾತಾಡುವಂತಾಗಬೇಕು


ತಾನು ಆಡಿದಂತೆಯೇ ಬಾಳಿ ತೋರಿಸಲು ಬಲು ಕಷ್ಟ ಈ ಸಮಾಜದಲ್ಲಿ

ಹಾಗೊಮ್ಮೆ ಬಾಳಿದನಾದರೆ, ಆತನೇ ಧನ್ಯ ಕೋಟಿ ಕೋಟಿ ಮಂದಿಯಲ್ಲಿ

*********

5 Responses to ತಾನಾಡಿದಂತೆ ಬಾಳಿದಾತನೇ ಧನ್ಯ ಕೋಟಿ ಮಂದಿಯಲ್ಲಿ!

 1. ಮರಿಯನ್, ರಾಘವೇಂದ್ರ, ಶ್ಯಾಮಲಾ ಮತ್ತು ಹೇಮ,

  ನಿಮ್ಮೆಲ್ಲರ ಸದಭಿಪ್ರಾಯದ ಪ್ರತಿಕ್ರಿಯೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

 2. ಹೇಮ ಹೇಳುತ್ತಾರೆ:

  ನುಡಿಯುವುದೊಂದು, ನಡೆಯಲ್ಲೊಂದು, ಈ ಸಮಾಜದಲ್ಲಿ.
  ಸತ್ಯವಂತರನ್ನು ಸಮಾಜದಲ್ಲಿ ಹುಡುಕುವುದೇ ಕಷ್ಟ. ಎಲ್ಲಾ ಪುಸ್ತಕಗಳಲ್ಲಿ ಮಾತ್ರ.
  ನಿಮ್ಮ ಕವನ ಓದಿ ದುಡ್ಡಿದ್ದವನೇ ದೊಡ್ಡಪ್ಪ ಎಂಬ ಮಾತಿನ ನೆನಪಾಯ್ತು.

 3. Shamala ಹೇಳುತ್ತಾರೆ:

  ಆಡಿದಂತೆಯೇ ಬಾಳುವುದು, ತನ್ನ ತನವನ್ನು ಉಳಿಸುವುದು ನಿಜಕ್ಕೂ ಕ್ಲಿಷ್ಟಕರವಾದ ವಿಚಾರವೇ…. ಆದರೆ ಎಲ್ಲರೂ ಹಣಕ್ಕೇ ಆದ್ಯತೆ ಕೊಡೋಲ್ಲ ಸುರೇಶ್…. ಈಗಲೂ ನಿಜವಾದ ಬೆಲೆ ಗುರುತಿಸುವ ಜನರಿದ್ದಾರೆ…. ನಿಮ್ಮ ಮನದ ಮಾತುಗಳು ಚೆನ್ನಾಗಿ ಮೂಡಿವೆ…..

 4. ksraghavendranavada ಹೇಳುತ್ತಾರೆ:

  ನುಡಿದ೦ತೆ ನಡೆಯುವುದು ಕಷ್ಟವಾದರೂ, ನಡೆಯಲೇ ಬೇಕು.ಹಣ ಅ೦ತಸ್ತುಗಳ ಮಧ್ಯೆ ನಾವು ಕಳೆದುಹೋಗಿ, ನಮ್ಮನ್ನೇ ನಾವು ಹುಡುಕಬೇಕಾಗಿ ಬ೦ದಿರುವುದು ಸತ್ಯ. ಆನಿಟ್ಟಿನಲ್ಲಿ ಪರಿಹಾರವಾಗಿ ಬ೦ದ ಸು೦ದರ ಸ೦ದೇಶವುಳ್ಳ ಕವನ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 5. Marian Anbu ಹೇಳುತ್ತಾರೆ:

  Yes, you are right, nowadays people are recognised only by their status/money. But unless and until some revolution starts we can not find some remedy.

  Revolution is what I am waiting for……

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: