ಮಕ್ಕಳು ದಾನವರಾದರೆ ಹೆತ್ತಬ್ಬೆಯದೇನಿಲ್ಲ ತಪ್ಪು!

ತಮ್ಮೆಲ್ಲಾ ಮಕ್ಕಳೂ ಒಂದೇ ತೆರನಾಗಿಲ್ಲ ಎಂಬ ಚಿಂತೆ ಏಕೆ

ನಿಮಗೆ ರಾವಣ ವಿಭೀಷಣರಿಗಿಂತ ಬೇರೆ ಉದಾಹರಣೆ ಬೇಕೆ


ರಾವಣನನು ದಾನವೇಶ್ವರ ಎಂದು ಕೊಂಡಾಡುವರೆಲ್ಲಾ ಜನರು

ಆದರೀ ವಿಭೀಷಣನನು ರಾಕ್ಷಸನೆಂದು ಯಾರು ಜರೆಯುತಿಹರು


ಮಾನವನೇ ದಾನವನಾಗುವ ಆತನ ನಡೆನುಡಿಗಳಿಂದಾಗಿ ಇಲ್ಲಿ

ದಾನವರಿಗೆ ಭಯಂಕರ ರೂಪ ಕೊಟ್ಟು ಚಿತ್ರಿಸಿದ್ದಾರೆ ಕತೆಗಳಲ್ಲಿ


ಇಂದೂ ಇದ್ದಾರೆ ಮಾನವರ ನಡುವೆ ದಾನವರು ಪ್ರತೀ ಮನೆಯಲ್ಲಿ

ರಾಕ್ಷಸೀ ಗುಣಗಳ ತುಂಬಿಕೊಂಡಿರುತ್ತಾರವರು ತಮ್ಮ ಮನಗಳಲ್ಲಿ


ಸದ್ಗುಣೀ ಬೀಜಗಳ ಬಿತ್ತಿ ಬೆಳೆಸಿದವನುಳಿವ ಸದಾಕಾಲ ಮಾನವನಾಗಿ

ದುರ್ಗುಣಗಳಿಗೇ ಗೊಬ್ಬರ ನೀಡಿದವ ಮೆರೆಯುತ್ತಲಿರುವ ದಾನವನಾಗಿ


ಮಕ್ಕಳು ಮಾನವರಾಗದೆ ದಾನವರಾದರೆ ಹೆತ್ತಬ್ಬೆಯದೇನಿಲ್ಲ ತಪ್ಪು

ಎಲ್ಲರ ಜೀವನವೂ ಅವರವರ ಕರ್ಮದ ಫಲ ಎನ್ನುವುದೇ ನನಗೊಪ್ಪು
********

3 Responses to ಮಕ್ಕಳು ದಾನವರಾದರೆ ಹೆತ್ತಬ್ಬೆಯದೇನಿಲ್ಲ ತಪ್ಪು!

 1. ಹೇಮ ಹೇಳುತ್ತಾರೆ:

  ಒಳ್ಳೆಯ ಕವನ.
  ನಿಜವಾಗಿಯೂ ಕೆಲವೊಮ್ಮೆ ಅಂಥ ತಾಯಂದಿರ ಬಗ್ಗೆ ಎಣಿಸಿ ತುಂಬಾ ದುಃಖವಾಗುತ್ತದೆ.
  ಅಸಹಾಯಕ ಪರಿಸ್ಥಿತಿ.

 2. ಸದಭಿಪ್ರಾಯದ ಅನಿಸಿಕೆಗಳಿಗೆ ಧನ್ಯವಾದಗಳು ರಾಘವೇಂದ್ರ.

 3. ksraghavendranavada ಹೇಳುತ್ತಾರೆ:

  ಒಪ್ಪತಕ್ಕ ಮಾತು! ಯಾರೂ ಒಳ್ಳೆಯವರಲ್ಲ! ಯಾರೂ ಕೆಟ್ಟವರಲ್ಲ! ಅವರವರ ಪರಿಸರಕ್ಕೆ ತಕ್ಕ೦ತೆ ಅವರ ನಡೆನುಡಿ! ಒ೦ದೇ ತಾಯಿಯ ಮಕ್ಕಳೆಲ್ಲರೂ ಒ೦ದೇ ರೀತಿಯಲ್ಲಿರುತ್ತಾರ್ಯೇ?
  ಒಳ್ಳೆಯ ಕವನ.
  ನಮಸ್ಕಾರಗಳೊ೦ದಿಗೆ,

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: